ಪಾಕ್‌ನಲ್ಲಿ ಧುರಂಧರ್ #1 ಟ್ರೆಂಡ್!  – ಬ್ಯಾನ್ ಮಾಡಿದ್ರೂ ಇಷ್ಟವಾಗಿದ್ದು ಹೇಗೆ?

ಪಾಕ್‌ನಲ್ಲಿ ಧುರಂಧರ್ #1 ಟ್ರೆಂಡ್!  – ಬ್ಯಾನ್ ಮಾಡಿದ್ರೂ ಇಷ್ಟವಾಗಿದ್ದು ಹೇಗೆ?

ಧುರಂಧರ್.. ದೇಶ ವಿದೇಶಗಳಲ್ಲಿ ಸದ್ದು ಮಾಡ್ತಿರೋ ಸಿನಿಮಾ. ಧುರಂಧರ್ ರಿಲೀಸ್ ಆಗಿ 60 ದಿನ ಕಳೆದ್ರೂ ಬಾಕ್ಸ್ ಆಫೀಸ್ನಲ್ಲಿ ಅಬ್ಬರ ಮಾತ್ರ ನಿಂತಿಲ್ಲ. ಇದೀಗ ಭಾರತ ಸಿನಿಮಾ ಶತ್ರು ರಾಷ್ಟ್ರದಲ್ಲೂ ಸೌಂಡ್ ಮಾಡ್ತಿದೆ. ಪಾಕಿಸ್ತಾನದಲ್ಲಿ ಈ ಸಿನಿಮಾ ಬ್ಯಾನ್ ಆಗಿದ್ರು ನಂಬರ್ 1 ಟ್ರೆಂಡಿಂಗ್ನಲ್ಲಿದೆ. ಇದೀಗ ಪಾಕ್ ಜನರೂ ಸಿನಿಮಾ ನೋಡಿ ಫುಲ್ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧಿಸಲು ಮಗಳನ್ನೇ ಕೊಂದ! – ಪಾಪಿ ತಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ಧುರಂಧರ್ ಒಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ. ಕಥೆಯು ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ, ಪಾಕಿಸ್ತಾನದ ಭಯೋತ್ಪಾದನೆ, ಎರಡೂ ದೇಶಗಳ ನಡುವಿನ ದ್ವೇಷ, ವೈಮನಸ್ಯ ಮುಂತಾದ ವಿಚಾರಗಳನ್ನ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇದೇ ಕಾರಣಕ್ಕೆ ಧ್ರುರಂಧರ್ ಸಿನಿಮಾ ರಿಲೀಸ್ ಆಗ್ಬಾರ್ದು, ಈ ಸಿನಿಮಾ ಬ್ಯಾನ್ ಮಾಡ್ಬೇಕು ಎಂಬ ಒತ್ತಾಯ ಕೇಳಿಬಂತು.. ಮತ್ತೊಂದ್ಕಡೆ ಪಾಕಿಸ್ತಾನ  ಈ ಸಿನಿಮಾವನ್ನೇ ಬ್ಯಾನ್ ಮಾಡ್ತು. ಎಷ್ಟೇ ಅಡೆತಡೆ ಎದುರಾದ್ರು ಈ ಸಿನಿಮಾ ರಿಲೀಸ್ ಆಗಿ ತೆರೆ ಮೇಲೆ ಅಬ್ಬರಿಸ್ತಾ ಇದೆ. ಧುರಂಧರ್ ರಿಲೀಸ್ ಆಗಿ ಎರಡು ತಿಂಗಳೇ ಕಳೆದಿದೆ. ಇದೀಗ ಬಾಕ್ಸ್ ಆಫೀಸ್‌ನಲ್ಲಿ 1300 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಶತ್ರು ರಾಷ್ಟ್ರ ಪಾಕ್‌ನಲ್ಲಿ ಈ ಸಿನಿಮಾ ಬ್ಯಾನ್ ಆಗಿದ್ರೂ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ.

ಧುರಂಧರ್ ಸಿನಿಮಾವನ್ನ ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿತ್ತು. ಅಲ್ಲಿನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಭಾರತೀಯ ಚಲನಚಿತ್ರಗಳನ್ನು ಚಿತ್ರಮಂದಿರಗಳಿಂದ ನಿಷೇಧಿಸಲಾಗಿದೆ. ಆದ್ರೆ ಸಿನಿಮಾದಲ್ಲಿ ಏನಿದೆ? ಯಾಕೆ ಬ್ಯಾನ್ ಮಾಡಿದ್ರು ಅನ್ನೋ ಕ್ಯೂರಿಯಾಸಿಟಿ ಅಲ್ಲಿನ ಜನರಿಗಿತ್ತು. ಇದೀಗ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ವಿಶ್ವಾದ್ಯಂತ ರಿಲೀಸ್ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗ್ತಿದ್ದಂತೆ ಪಾಕ್ ಪ್ರಜೆಗಳು ಸಿನಿಮಾ ನೋಡ್ತಿದ್ದಾರೆ.  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಧುರಂಧರ್ ಪಾಕಿಸ್ತಾನದಲ್ಲಿ ನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ. ಶನಿವಾರದಿಂದ ಈ ಚಿತ್ರವು ಪಾಕ್‌ನಲ್ಲಿ ನಂಬರ್ 1 ಪ್ಲೇಸ್‌ನಲ್ಲಿದೆ. ಇದೀಗ ಸಿನಿಮಾ ನೋಡಿದವರೆಲ್ಲಾ ರಣವೀರ್ ಸಿಂಗ್ ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದಾರೆ.

ಹೌದು.. ಪಾಕ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಧುರಂಧರ್ ಸಿನಿಮಾ ಬ್ಯಾನ್ ಮಾಡಿದ್ದೇ ಅಲ್ಲಿನ ಜನರ ಕ್ಯೂರಿಯಾಸಿಟಿಗೆ ಕಾರಣವಾಗಿತ್ತು. ಹೀಗಾಗೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದಂತೆ ಅಲ್ಲಿನ ಜನರು ಸಿನಿಮಾ ವೀಕ್ಷಿಸಿದ್ದಾರೆ. ಇದೀಗ ಪಾಕ್ ನಲ್ಲೂ ಧುರಂಧರ್ ಕ್ರೇಜ್ ಶುರುವಾಗಿದೆ. ಚಿತ್ರ ನೋಡಿದವರೆಲ್ಲಾ ಫುಲ್ ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಫೀಡ್ಬ್ಯಾಕ್ ನೀಡ್ತಿದ್ದಾರೆ. ಒಬ್ಬ ಪಾಕಿಸ್ತಾನಿ ಪ್ರಜೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಪಾಕಿಸ್ತಾನಿ. ‘ಧುರಂಧರ್’ ಇಷ್ಟವಾಯ್ತು. ನಾವು ಪರಸ್ಪರ ದ್ವೇಷಿಸುತ್ತೇವೆ ಎಂಬ ಊಹೆಗಳನ್ನು ನಿಲ್ಲಿಸಿ. ನನಗೆ ಪ್ರೀತಿ ಮಾತ್ರ ಇದೆ, ಅಸಭ್ಯವಾಗಿ ವರ್ತಿಸುವುದು ಬೇಡ ಎಂದು ಬರೆದುಕೊಂಡ್ರೆ,  ಮತ್ತೊಬ್ಬ ಬಳಕೆದಾರರು “ಒಬ್ಬ ಪಾಕಿಸ್ತಾನಿಯಾಗಿ, ಇದು ನಾನು ನೋಡಿದ ಅತ್ಯುತ್ತಮ ಬಾಲಿವುಡ್ ಚಿತ್ರ. ವಾಸ್ತವವಾಗಿ ಸಂಶೋಧನೆ ಮಾಡಿದ ಚಿತ್ರವನ್ನು ನಾನು ನೋಡಿದ್ದು ಇದೇ ಮೊದಲು. ಪಾಕಿಸ್ತಾನಿಗಳನ್ನು ‘ಆದಾಬ್’, ‘ಜನಾಬ್’, ಕೋಲ್, ಕಾಜಲ್, ಕ್ಯಾಪ್ ಮತ್ತು ವೆಸ್ಟ್ನಂತಹ ಸ್ಟೀರಿಯೊಟೈಪ್ಗಳನ್ನು ಬಳಸಿ ಚಿತ್ರಿಸಲಾಗಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಭಾರತದಲ್ಲೂ ‘ಧುರಂಧರ್’ ನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಟ್ರೆಂಡಿಂಗ್ನಲ್ಲಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಆವೃತ್ತಿಗಿಂತಲೂ ಹತ್ತು ನಿಮಿಷ ಕಡಿಮೆ ಅವಧಿಯ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಹಲವಾರು ದೃಶ್ಯಗಳು, ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ‘ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಿದ ಹೊರತಾಗಿಯೂ ಸಿನಿಮಾದ ದೃಶ್ಯಗಳನ್ನು, ಸಂಭಾಷಣೆಗಳನ್ನು ಸೆನ್ಸಾರ್ ಮಾಡುವ ಅವಶ್ಯಕತೆ ಏನಿತ್ತು’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.  ಏನೇ ಆದರೂ ಸಿನಿಮಾ ಚೆನ್ನಾಗಿದ್ದಾಗ ಎಷ್ಟೇ ನಿಷೇಧ ಹೇರಿದ್ರೂ ಹೇಗೆಲ್ಲಾ ಟ್ರೆಂಡ್ ಆಗಬಲ್ಲುದು ಎಂಬುದಕ್ಕೆ ದುರಂದರ್ ಚಿತ್ರವೇ ಬೆಸ್ಟ್ ಎಕ್ಸಾಂಪಲ್.

Shwetha M