ಆ ನೋವು ಮನಸ್ಸಿನಲ್ಲಿ ಉಳಿದಿದೆ! – ಬಿಗ್‌ಬಾಸ್‌ ಮನೆಯ ಆ ಕ್ಷಣ ನೆನೆದು ರಕ್ಷಿತಾ ಶೆಟ್ಟಿ ಭಾವುಕ!

ಆ ನೋವು ಮನಸ್ಸಿನಲ್ಲಿ ಉಳಿದಿದೆ! – ಬಿಗ್‌ಬಾಸ್‌ ಮನೆಯ ಆ ಕ್ಷಣ ನೆನೆದು ರಕ್ಷಿತಾ ಶೆಟ್ಟಿ ಭಾವುಕ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿದು 15 ದಿನಗಳು ಕಳೆದಿವೆ. ಸ್ಪರ್ಧಿಗಳು ದೊಡ್ಮನೆಯಿಂದ ಆಚೆ ಬಂದ್ಮೇಲೆ ಫುಲ್‌ ಬ್ಯುಸಿಯಾಗಿದ್ದಾರೆ. ಇದೀಗ ರಕ್ಷಿತಾ ಶೆಟ್ಟಿ ಆ ನೋವು ಮನಸ್ಸಿನಲ್ಲಿ ಹಾಗೇ ಉಳಿದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರಕ್ಷಿತಾ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಕಾಳ್ಗಿಚ್ಚು – ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಭಸ್ಮ

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆಗಿದ್ದಾಳೆ. ಇದೀಗ ಶೋ ಮುಗಿದ ಬಳಿಕ ರಕ್ಷಿತಾ ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

ರಕ್ಷಿತಾ ಪೋಸ್ಟ್‌ನಲ್ಲಿ ನನ್ನ ಜೀವನದಲ್ಲಿ ಎಂದಿಗೂ ಮರೆತೇ ಹೋಗಲಾರದ ದಿನ – ಬಿಗ್ ಬಾಸ್ ಮನೆಯಲ್ಲಿನ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಎಲ್ಲವೂ ಇತ್ತು. ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ. ಸ್ಪರ್ಧೆಯಾಗಿ ಆರಂಭವಾದ ಈ ಮನೆ, ಸಮಯದೊಂದಿಗೆ ನಿಜವಾದ ಮನೆಯಾಗಿಬಿಟ್ಟಿತು.ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು.

ಇದು ಕೇವಲ ಒಂದು ಪ್ರಯಾಣವಲ್ಲ, ನಾನು ಇಲ್ಲಿ ಅನೇಕ ಸಂಬಂಧಗಳನ್ನು ಕಟ್ಟಿಕೊಂಡೆ.ಬಹಳಷ್ಟು ಅಣ್ಣಂದಿರು, ಅಮೂಲ್ಯವಾದ ಬಾಂಧವ್ಯಗಳು – ಇವು ಸದಾ ನನ್ನ ಹೃದಯದಲ್ಲಿರುತ್ತವೆ. ಸುದೀಪ್ ಸರ್ ಮನೆಗೆ ಪ್ರವೇಶಿಸಿದ ಕ್ಷಣ ತುಂಬಾ ಸಂತೋಷ ತಂದಿತು.ಆದರೆ ಮನೆ ಬಿಟ್ಟು ಹೊರಡುವ ಸಮಯ. ಅದು ನನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು.

ಈ ಎಲ್ಲಾ ತಿಂಗಳುಗಳ ನಂತರ ಈ ಮನೆಯನ್ನು ಬಿಟ್ಟು ಹೋಗುವುದು ಸುಲಭವಾಗಿರಲಿಲ್ಲ. ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ. ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗಲು ಬಿಡುವುದಿಲ್ಲ. ಅವು ನಮ್ಮೊಳಗೇ ಉಳಿದುಬಿಡುತ್ತವೆ. ಮನೆಯ ಹೊರಗಿದ್ದ ನನ್ನ ಜನರಿಗೆ ಹೃದಯಪೂರ್ವಕ ಧನ್ಯವಾದಗಳು.

ನಿಮ್ಮ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಮತ್ತು ಮತಗಳು ನನಗೆ ಶಕ್ತಿ ನೀಡಿದವು. ನಾನು ಅಷ್ಟು ದೂರ ಈ ಮನೆಯಲ್ಲಿ ಉಳಿಯಲು ನಿವೇ ಕಾರಣ. ಯಾವತ್ತೂ ಕೃತಜ್ಞತೆ. ಯಾವತ್ತೂ ನೆನಪುಗಳು ಎಂದು ಬರೆದುಕೊಂಡಿದ್ದಾರೆ.

Shwetha M