ಕಿಶನ್ ರನ್.. ಕೀಪಿಂಗ್ ಟೆನ್ಷನ್ – ಸಂಜು ಆಡ್ಸಿದ್ರೂ ಕಷ್ಟ.. ಬಿಟ್ರೂ ಕಷ್ಟ
ಇಶಾನ್ ವೀಕ್ ನೆಸ್ ಏನು?

2026ರ ಟಿ-20 ವಿಶ್ವಕಪ್ ಗೆ ಭರ್ಜರಿಯಾಗೇ ರೆಡಿಯಾಗಿರೋ ಭಾರತ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಅದರಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಖದರ್ ನೋಡ್ತಿದ್ರೆ ವಿಶ್ವಕಪ್ನಲ್ಲಿ ರನ್ಗಳ ಮಳೆಯೇ ಸುರಿಯುತ್ತೆ ಅನ್ಸುತ್ತೆ. ನ್ಯೂಜಿಲೆಂಡ್ ವಿರುದ್ಧ 4-1ರ ಅಂತರದಲ್ಲಿ ಸರಣಿ ಗೆದ್ದಿರೋ ಭಾರತ ಅದೇ ವಿನ್ನಿಂಗ್ ಟೀಮ್ನೇ ವಿಶ್ವಕಪ್ ಅಖಾಡಕ್ಕೂ ಇಳ್ಸುತ್ತೆ ಅದ್ರಲ್ಲಿ ಡೌಟೇ ಇಲ್ಲ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ನಡುವೆ ಇಬ್ಬರಕ್ಕೆ ಯಾರಿಗೆ ಚಾನ್ಸ್ ಅನ್ನೋದು.
ಇದನ್ನೂ ಓದಿ : ಕರ್ನಾಟಕ ಬುಲ್ಡೋಜರ್ಸ್ CCL ಚಾಂಪಿಯನ್- ಕಪ್ ಹಿಡಿದ ಕಿಚ್ಚನ ಭರ್ಜರಿ ಡ್ಯಾನ್ಸ್
ಎರಡೂವರೆ ವರ್ಷಗಳ ಕಾಲ ಟೀಂ ಇಂಡಿಯಾದಿಂದ ದೂರನೇ ಉಳಿದಿದ್ದ ಪಾಕೆಟ್ ಡೈನಮೋ ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಿಡಿಗುಂಡಿನಂತೆ ಸಿಡಿದಿದ್ದಾರೆ. ತಿರುವನಂತಪುರಂ ಪಂದ್ಯದಲ್ಲಂತೂ ಸಿಕ್ಸ್, ಫೋರ್ಗಳ ರುದ್ರತಾಂಡವಕ್ಕೆ ಕಿವೀಸ್ ಪಡೆ ಅಕ್ಷರಶಃ ಬೆಚ್ಚಿ ಬಿದ್ದಿದೆ. ಕಿಶನ್ನ ಇದೇ ಕಿಚ್ಚು ನೋಡಿ ಈಗ ವಿಶ್ವಕಪ್ನಲ್ಲೂ ಪ್ಲೇಯಿಂಗ್ 11ನಲ್ಲಿ ಕಿಶನ್ ಆಡ್ಲೇಬೇಕು ಎನ್ನುವಂತೆ ಒಪೀನಿಯನ್, ಪ್ರೆಶರ್ ಕ್ರಿಯೇಟ್ ಆಗಿದೆ. ಅದೂ ಕೂಡ ಸಂಜು ಸ್ಯಾಮ್ಸನ್ಗೆ ರಿಪ್ಲೇಸ್ ಮಾಡಿ ಅನ್ನೋ ಸಜೇಷನ್ಸ್ ಬರ್ತಿದೆ. ಆದ್ರೆ ಸಂಜು ಪ್ಲೇಸ್ಗೆ ಕಿಶನ್ ಆಡಿಸೋದು ಅಷ್ಟು ಈಸಿನಾ ಅಂದ್ರೆ ಇಲ್ವೇ ಇಲ್ಲ.
ಮಂಕಾದ ಸಂಜು.. ಕಿಶನ್ ಕಿಚ್ಚು.. ಯಾರಿಗೆ ಅದೃಷ್ಟ?
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಶ್ರೇಯಸ್ ಅಯ್ಯರ್ರನ್ನ ಬಿಟ್ರೆ ಉಳಿದವ್ರೆಲ್ಲಾ ಒಂದಲ್ಲ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಬಟ್ ಶ್ರೇಯಸ್ ವಿಚಾರದಲ್ಲಿ ಬಿಸಿಸಿಐ ಯಾಕೆ ಮೋಸ ಮಾಡ್ತೋ ಗೊತ್ತಿಲ್ಲ. ಅಟ್ಲೀಸ್ಟ್ 4ನೇ ಮ್ಯಾಚಲ್ಲಾದ್ರೂ ಆಡಿಸ್ಬೋದಿತ್ತು. ಉಳಿದಂತೆ ಆಡಿದವ್ರೆಲ್ಲಾ ಅವ್ರ ಕಡೆಯಿಂದ ಬೆಸ್ಟ್ ಅನ್ನೋ ಥರನೇ ಆಡಿದ್ರು. ಆದ್ರೆ ಇಡೀ ಸರಣಿಯಲ್ಲಿ ಮಂಕಾಗಿದ್ದು ಸಂಜು ಸ್ಯಾಮ್ಸನ್ ಮಾತ್ರವೇ. ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಸಂಜು ಐದೂ ಪಂದ್ಯಗಳಿಂದ ಸೇರಿ 50 ರನ್ಸ್ ಕೂಡ ಕಲೆ ಹಾಕಲಿಲ್ಲ. 46 ರನ್ಸ್ ಅಷ್ಟೇ ಅವ್ರ ಬ್ಯಾಟಿಂದ ಬಂದಿದೆ. ಬಟ್ ಇಶಾನ್ ಕಿಶನ್ ನಾಲ್ಕು ಪಂದ್ಯಗಳಲ್ಲಿ ಆಡಿದ್ರೂ 3 ಮ್ಯಾಚ್ಗಳಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ್ರು. ಅದ್ರಲ್ಲೂ ಐದನೇ ಪಂದ್ಯದಲ್ಲಿ 42 ಎಸೆತಗಳಲ್ಲೇ ಶತಕ ಬಾರಿಸಿದ್ರು. ಈ ಮೂಲಕ 4 ಪಂದ್ಯಗಳಿಂದ 215 ರನ್ಸ್ ಕಲೆ ಹಾಕಿ ಸರಣಿಯ ಟಾಪ್ 2 ಸ್ಕೋರರ್ ಆದ್ರು. ಌಂಡ್ ಐದು ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ 242 ರನ್ ಗಳಿಸಿ ಹೈಯೆಸ್ಟ್ ಸ್ಕೋರರ್ ಜೊತೆ ಸರಣಿ ಶ್ರೇಷ್ಠ ಪ್ರಶಸ್ತಿನೂ ಪಡ್ಕೊಂಡ್ರು. ಆದ್ರೆ ಸಂಜು 46 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ರು. ಹೀಗಾಗಿ ಟಿ-20 ವಿಶ್ವಕಪ್ ವೇಳೆಗೆ ತಿಲಕ್ ವರ್ಮಾ ತಂಡಕ್ಕೆ ಕಂ ಬ್ಯಾಕ್ ಮಾಡೋದ್ರಿಂದ ನಂಬರ್ 3ನಲ್ಲಿ ಬ್ಯಾಟಿಂಗ್ಗೆ ಬರ್ತಾರೆ. ನ್ಯೂಜಿಲೆಂಡ್ ವಿರುದ್ಧ ನಂಬರ್ 3ನಲ್ಲಿ ಆಡಿದ್ದ ಇಶಾನ್ ಕಿಶನ್ ಸ್ಥಾನ ಬಿಟ್ಟುಕೊಡ್ಬೇಕಾಗುತ್ತೆ. ಹೀಗಾಗಿ ಅದ್ಭುತ ಫಾರ್ಮ್ನಲ್ಲಿರೋ ಕಿಶನ್ರನ್ನ ಓಪನಿಂಗ್ ಸ್ಲಾಟ್ನಲ್ಲಿ ಆಡ್ಸಿ.. ಕಳಪೆ ಫಾರ್ಮ್ನಲ್ಲಿರೋ ಸಂಜುರನ್ನ ಬೆಂಚ್ ಕಾಯ್ಸಿ ಅಂತಿದ್ದಾರೆ. ಆದ್ರೆ ಈ ಫಾರ್ಮುಲಾ ಅಪ್ಲೈ ಮಾಡೋದ್ರ ಹಿಂದೆ ಪ್ಲಸ್ & ಮೈನಸ್ ಎರಡೂ ಇದೆ.
ಯಾರನ್ನ ಆಡಿಸಿದ್ರೆ ಬೆಸ್ಟ್?
ಇಶಾನ್ ಕಿಶನ್ ಹೊಡಿ ಬಡಿ ಆಟವೇ ತಂಡಕ್ಕೆ ಪ್ಲಸ್
ಬ್ಯಾಟಿಂಗ್ ನಲ್ಲಿ ಕಿಶನ್ ಕಿಚ್ಚು ಇದ್ರೂ ವಿಕೆಟ್ ಕೀಪಿಂಗ್ ವೀಕ್
ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಫೇಲ್ ಆದ್ರೂ ಕೀಪಿಂಗ್ ಗುಡ್
ಲೆಫ್ಟ್ & ರೈಟ್ ಹ್ಯಾಂಡ್ ಕಾಂಬಿನೇಷನ್ ಮಿಸ್
ಸೋ ಇದನ್ನೆಲ್ಲಾ ನೋಡಿದಾಗ ಇಬ್ಬರಲ್ಲೂ ಪ್ಲಸ್ ಌಂಡ್ ಮೈನಸ್ ಇದೆ. ಹೀಗಾಗಿ ಬಿಸಿಸಿಐ ಅಂತಿಮವಾಗಿ ಯಾರನ್ನ ಸೆಲೆಕ್ಟ್ ಮಾಡುತ್ತೆ ಅನ್ನೋದೂ ಮುಖ್ಯವಾಗುತ್ತೆ. ಯಾಕಂದ್ರೆ ತಿಲಕ್ರನ್ನ ಬೆಂಚ್ ಕಾಯಿಸೋಕೆ ಆಗಲ್ಲ. ಕಿಶನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಸಂಜು ಕೀಪಿಂಗ್ ಚೆನ್ನಾಗಿದೆ. ಇದೆಲ್ಲವನ್ನೂ ಅಳೆದೂ ತೂಗಿ ಯಾರಿಗೆ ಅದೃಷ್ಟ ಒಲಿಯುತ್ತೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

