ಬಾಳೆಹಣ್ಣು ತಿನ್ನುವಾಗ ಈ ತಪ್ಪು ಮಾಡ್ತೀರಾ? – ಈ ಹೊತ್ತು ಬಾಳೆ ಹಣ್ಣು ತಿನ್ನೋದು ಡೇಂಜರ್!‌

ಬಾಳೆಹಣ್ಣು ತಿನ್ನುವಾಗ ಈ ತಪ್ಪು ಮಾಡ್ತೀರಾ? – ಈ ಹೊತ್ತು ಬಾಳೆ ಹಣ್ಣು ತಿನ್ನೋದು ಡೇಂಜರ್!‌

ಬಾಳೆ ಹಣ್ಣು ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಂ, ಮೆಗ್ನೀಷಿಯಂ, ನಾರು, ವಿಟಮಿನ್ B6 ಸಮೃದ್ಧವಾಗಿದೆ. ಹೀಗಾಗಿ ಬಾಳೆಹಣ್ಣನ್ನು ತಿನ್ನಬೇಕು ಅಂತ ವೈದ್ಯರು ಕೂಡ ಸಜೆಸ್ಟ್‌ ಮಾಡ್ತಾರೆ. ಆದ್ರೆ ಕೆಲವರು ಬಾಳೆ ಹಣ್ಣು ತಿನ್ನುವಾಗ ಈ ತಪ್ಪನ್ನ ಮಾಡ್ತಾರೆ. ಇದ್ರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು.

ಇದನ್ನೂ ಓದಿ: ಶಿಕ್ಷಣಕ್ಕಾಗಿ ತಮ್ಮ ಹೆಸರಲ್ಲಿದ್ದ ಜಮೀನು ದಾನ ಮಾಡಿದ ಸಚಿವರ ತಾಯಿ!

ಸಾಮಾನ್ಯವಾಗಿ ಊಟದ ನಂತರ ಅಥವಾ ಉಪಹಾರದ ಜೊತೆ ಬಾಳೆಹಣ್ಣನ್ನು ತಿನ್ನುತ್ತಾರೆ. ಇನ್ನೂ ಕೆಲವರು ಬಾಳಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಪ್ರಕಾರ ಸುಮಾರು 100 ಗ್ರಾಂ ಬಾಳೆ ಹಣ್ಣಿನಲ್ಲಿ 12–14 ಗ್ರಾಂ ನೈಸರ್ಗಿಕ ಸಕ್ಕರೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಇಷ್ಟು ಪ್ರಮಾಣದ ಸಕ್ಕರೆ ದೇಹ ಸೇರಿದರೆ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಏಕಾಏಕಿ ಹೆಚ್ಚಾಗಿ, ನಂತರ ತೀವ್ರವಾಗಿ ಕುಸಿಯುತ್ತದೆ. ಇದರಿಂದ ತೂಕಡಿಕೆ, ಆಯಾಸ ಮತ್ತು ಆಲಸ್ಯ ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನು ಬಾಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೋ ಬದಲು  ಉಪಹಾರದ ನಂತರ, ಅಥವಾ ಓಟ್ಸ್‌, ಗಂಜಿ, ಮೊಸರು, ನಟ್‌ಗಳು ಅಥವಾ ಸಿರಿ ಧಾನ್ಯಗಳೊಂದಿಗೆ ಸೇವಿಸಬಹುದು. ಹೀಗೆ ಮಾಡಿದ್ರೆ  ದೇಹದ ಆಮ್ಲೀಯತೆ ನಿಯಂತ್ರಣದಲ್ಲಿರುತ್ತದೆ ಮತ್ತು ಶಕ್ತಿ ಸಮತೋಲನವಾಗಿ ಬಿಡುಗಡೆಯಾಗುತ್ತದೆ. ಇನ್ನು ಊಟದ ನಂತರ ಕೂಡ ಬಾಳೆಹಣ್ಣು ಸೇವಿಸೋದು ಒಳ್ಳೆಯದು.  ಇನ್ನು ರಾತ್ರಿ ಮಲಗುವ ಟೈಮ್‌ನಲ್ಲೂ ಬಾಳೆಹಣ್ಣು ಸೇವಿಸಬೇಡಿ. ಯಾಕಂದ್ರೆ ಕಫ, ಸೈನಸ್‌ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಮಯದಲ್ಲಿ ಬಾಳೆ ಹಣ್ಣು ಸೇವಿಸುವುದು ಉತ್ತಮ.

Shwetha M