ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್! – ಇನ್ಮುಂದೆ ಈ ತಪ್ಪುಗಳನ್ನು ಮಾಡಿದ್ರೆ ಶಿಕ್ಷೆ ಫಿಕ್ಸ್!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ಇನ್ಮುಂದೆ ಈ ತಪ್ಪುಗಳನ್ನ ಮಾಡಿದ್ರೆ ನೀವು ಬೆಲೆ ತೆರಬೇಕಾಗಬಹುದು. ನಿಯಮ ಪಾಲಿಸದೇ ಇದ್ರೆ ದಂಡ ಫಿಕ್ಸ್ ಎಂದು ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಶಿಕ್ಷಣಕ್ಕಾಗಿ ತಮ್ಮ ಹೆಸರಲ್ಲಿದ್ದ ಜಮೀನು ದಾನ ಮಾಡಿದ ಸಚಿವರ ತಾಯಿ!
ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ನಿಯಮ ಜಾರಿಗೆ ತರಲಾಗಿದೆ. ಆದ್ರೆ ಪ್ರಯಾಣಿಕರು ಮಾತ್ರ ನಿಯಮ ಪಾಲಿಸುತ್ತಲೇ ಇಲ್ಲ. ಸಾರ್ವಜನಿಕ ಪ್ರಜ್ಞೆಯ ಕೊರತೆಯಿಂದಾಗಿ ಕಳೆದ ಒಂದು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ. ಇದ್ರಲ್ಲಿ 57,538 ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವ ಪ್ರಕರಣಗಳು ವರದಿಯಾಗಿದೆ. 37,038 ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಇರುವ ಸೀಟುಗಳನ್ನು ಬಿಟ್ಟುಕೊಡದಿರುವ ಪ್ರಕರಣಗಳು ದಾಖಲಾಗಿದೆ. 1,907 ಮೆಟ್ರೋ ರೈಲಿನ ಒಳಗೆ ಆಹಾರ ತಿನ್ನುವುದು ಪ್ರಕರಣಗಳು ದಾಖಲಾಗಿದೆ. 1,677 ರೈಲಿನಲ್ಲಿ ಗುಟ್ಕಾ ಅಥವಾ ಪಾನ್ ಆಗಿಯುವ ಪ್ರಕರಣಗಳು ವರದಿಯಾಗಿದೆ. ಇದೀಗ ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕ್ರಮಕೈಗೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಹೌದು. ಪ್ರತಿ ಮೆಟ್ರೋ ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಇವರು ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಜಾಗೃತಿ ಮೂಡಿಸುತ್ತಾರೆ. ಪದೇ ಪದೇ ಎಚ್ಚರಿಸಿದರೂ ನಿಯಮ ಮೀರಿದರೆ ‘ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002’ ರ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಮೆಟ್ರೋ ರೈಲು ಸಾರ್ವಜನಿಕ ಆಸ್ತಿಯಾಗಿದ್ದು, ಸಹ-ಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಸೀಟು ಬಿಟ್ಟುಕೊಡುವ ವಿಚಾರದಲ್ಲಿ ಮತ್ತು ಶಬ್ದ ಮಾಡದಂತೆ ಎಚ್ಚರಿಕೆ ವಹಿಸಲು ಹೇಳಿದ್ದಾರೆ.
ನಮ್ಮ ಮೆಟ್ರೋ ದಂಡದ ದರ
- ಧೂಮಪಾನ ಅಥವಾ ತಂಬಾಕು ಸೇವನೆ – 250 ರೂ. ರಿಂದ 500 ರೂ.
- ಮದ್ಯಪಾನ ಮಾಡಿ ಪ್ರಯಾಣಿಸುವುದು – 500 ರೂ. ಮತ್ತು ರೈಲಿನಿಂದ ಹೊರಹಾಕುವುದು
- ರೈಲಿನೊಳಗೆ ಆಹಾರ ಸೇವನೆ – 250 ರೂ.
- ಜೋರಾಗಿ ಸಂಗೀತ ಅಥವಾ ಗದ್ದಲ ಮಾಡುವುದು- 250 ರೂ. ಉಪಕರಣಗಳನ್ನು ಜಪ್ತಿ ಮಾಡಲಾಗುತ್ತದೆ
- ಅನುಮತಿಯಿಲ್ಲದೆ ವಿಡಿಯೋ/ಫೋಟೋ ಶೂಟ್ – 500 ರೂ.
- ಟಿಕೆಟ್ ಇಲ್ಲದೆ ಪ್ರಯಾಣ – 50 ರೂ. ಗಿಂತ ಹೆಚ್ಚು
- ಮಹಿಳಾ ಕೋಚ್‌ನಲ್ಲಿ ಪುರುಷರು ಪ್ರಯಾಣಿಸುವುದು – 500 ರೂ ದಂಡ ಹಾಗೂ ಮುಂದಿನ ನಿಲ್ದಾದದಲ್ಲಿ ಇಳಿಸುವುದು
- ಮೆಟ್ರೋ ಹಳಿಯ ಮೇಲೆ ಇಳಿಯುವುದು/ದಾಟುವುದು – 250ರಿಂದ 1000ದವರೆಗೆ ಹಾಗೂ ಜೈಲಿಗೆ ಹಾಕುವುದು
- ತುರ್ತು ಅಲಾರಾಂ ದುರುಪಯೋಗ – 100 ರೂ. ಹಾಗೂ ಜೈಲು ಶಿಕ್ಷೆ
- ಅಶ್ಲೀಲ ವರ್ತನೆ ಅಥವಾ ಅಸಭ್ಯ ವರ್ತನೆ – 250 ದಂಡ ಹಾಗೂ ರದ್ದಯ ಮಾಡುವುದು
ರೈಲಿನ ಒಳಗಿರುವಾಗ ಯಾರಾದರೂ ಗುಟ್ಕಾ ತಿನ್ನುತ್ತಿದ್ದರೆ ಅಥವಾ ಅತಿಯಾದ ಅಶಿಸ್ತು ತೋರುತ್ತಿದ್ದರೆ, ಪ್ರತಿ ಬಾಗಿಲಿನ ಪಕ್ಕದಲ್ಲಿರುವ ‘Emergency Talkback’ ಬಟನ್ ಒತ್ತಿ ನೇರವಾಗಿ ರೈಲು ಚಾಲಕನ ಜೊತೆ ಮಾತನಾಡಬಹುದು. ಅವರು ಮುಂದಿನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ನೀವು ಯಾವುದೇ ಸಮಯದಲ್ಲಿ ಈ ಸಹಾಯವಾಣಿ 1800-425-12345 (ಟೋಲ್ ಫ್ರೀ ಸಂಖ್ಯೆ) ಅಥವಾ 080-23019111 ಗೆ ಕರೆ ಮಾಡಿ ದೂರು ನೀಡಬಹುದು.

ನೋಡಿರಿ

