ಸಿಮ್‌ನಿಂದ ಚಿನ್ನ ತೆಗೆದ ವ್ಯಕ್ತಿ! – ಅಬ್ಬಬ್ಬಾ.. 1 ಐಡಿಯಾ.. ಲಕ್ಷ ಲಕ್ಷ ಸಂಪಾದನೆ!

ಸಿಮ್‌ನಿಂದ ಚಿನ್ನ ತೆಗೆದ ವ್ಯಕ್ತಿ! – ಅಬ್ಬಬ್ಬಾ.. 1 ಐಡಿಯಾ.. ಲಕ್ಷ ಲಕ್ಷ ಸಂಪಾದನೆ!

ಕೆಲವರು ಸಿಕ್ಕಾಪಟ್ಟೆ ಸ್ಮಾರ್ಟ್.‌ ತಮ್ಮ ಕೈಗೆ ಯಾವ ವಸ್ತು ಸಿಕ್ಕಿದ್ರೂ ಅದ್ರಲ್ಲಿ ಏನು ಉಪಯೋಗ ಇದೆ. ಹೇಗೆ ದುಡ್ಡು ಮಾಡಬಹುದು ಎಂದು ಯೋಚನೆ ಮಾಡ್ತಾರೆ. ಇದೀಗ ಇಲ್ಲೊಬ್ಬ ಕೂಡ ಸಿಮ್‌ ಕಾರ್ಡ್‌ಗಳಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾನೆ. ಸಿಮ್‌ನಿಂದ ಚಿನ್ನ ತೆಗೆದು ಹಣ ಮಾಡಿದ್ದಾನೆ.

ಇದನ್ನೂ ಓದಿ: ಯಶ್‌ ತಾಯಿ ಬೀದಿ ರಂಪಾಟ! – ಕಾಂಪೌಂಡ್‌ ರಾಮಾಯಣಕ್ಕೆ ಅಧಿಕಾರಿಗಳ ಎಡವಟ್ಟೇ ಕಾರಣ?

ಅಚ್ಚರಿಯಾದ್ರೂ ಸತ್ಯ. ಚೀನಾದ ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್‌ಗಳಿಂದ ಬರೋಬ್ಬರಿ 27 ಲಕ್ಷ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ. ಇತ್ತೀಚೆಗೆ ಅವರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯಗೆ ಒಳಪಡಿಸಿ ಅದರಿಂದ 191 ಗ್ರಾಂ ಚಿನ್ನ ಪಡೆದಿದ್ದಾರೆ ಎನ್ನಲಾಗಿದೆ. ರಾಸಾಯನಿಕ ಕ್ರಿಯೆಗಳನ್ನು ಬಳಸಿಕೊಂಡು ಬಳಸಿದ ಸಿಮ್ ಕಾರ್ಡ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಕ್ರ್ಯಾಪ್‌ಗಳನ್ನು ಸಂಸ್ಕರಿಸುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಚೀನಾದ ಕ್ವಿಯಾವೊ ಎಂದು ಕರೆಯಲ್ಪಡುವ ಈ ವ್ಯಕ್ತಿ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಹುಯಿಝೌದಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಪರ ಲೋಹ ಸಂಸ್ಕರಣಾ ತಜ್ಞರು ಆಗಿದ್ದಾರೆ.‌ ಇತ್ತೀಚೆಗೆ ಅವರು ಸುಮಾರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ, ಅದರಿಂದ ಸುಮಾರು 191 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ.

ಅವರ ಪ್ರಕಾರ, ಸಿಮ್ ಕಾರ್ಡ್‌ಗಳು ಅಲ್ಪ ಪ್ರಮಾಣದ ಚಿನ್ನವನ್ನು ಹೊಂದಿರುತ್ತವೆ. ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಚಿಪ್‌ಗಳಲ್ಲಿ ವಿದ್ಯುತ್ ಹರಿಯಲು ಮತ್ತು ತುಕ್ಕು ಹಿಡಿಯದಂತೆ ರಕ್ಷಣೆ ಮಾಡಲು ಅತ್ಯಂತ ಸಣ್ಣ ಪ್ರಮಾಣದ ಚಿನ್ನದ ಲೇಪನವನ್ನು ಸಿಮ್ ನಲ್ಲಿ ಬಳಸಲಾಗುತ್ತದೆ. ಸಿಮ್ ಕಾರ್ಡ್ ಸಾಮಾನ್ಯವಾಗಿ 0.001 ಗ್ರಾಂ ಗಿಂತ ಕಡಿಮೆ ಚಿನ್ನವನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೇವಲ ನಾಲ್ಕು-ಐದು ಸಿಮ್ ಕಾರ್ಡ್‌ಗಳಿಂದ ಚಿನ್ನ ಸಿಗುವುದಿಲ್ಲ. ಕ್ಯಾವೊ ಅವರು ಎರಡು ಟನ್‌ ನಷ್ಟು ಎಲೆಕ್ಟ್ರಾನಿಕ್ ಸ್ಕ್ರ್ಯಾಪ್ ಬಳಸಿದ್ದಾರೆ. ಈ ಪ್ರಕ್ರಿಯೆಯು ಅಪಾಯಕಾರಿ ಮತ್ತು ತರಬೇತಿ ಪಡೆಯದ ವ್ಯಕ್ತಿಗಳಿಗೆ ಸೂಕ್ತವಲ್ಲ ಎಂದು ಅವರು ಎಚ್ಚರಿಕೆ ಕೂಡ ನೀಡಿದ್ದಾರೆ. ಚಿನ್ನವನ್ನು ಬೇರ್ಪಡಿಸಲು ಇಲ್ಲಿ ಪ್ರಬಲ ಆಮ್ಲಗಳನ್ನು ಬಳಸಲಾಗುತ್ತದೆ. ಇವುಗಳಿಂದ ಹೊರಬರುವ ಅನಿಲ ಅತ್ಯಂತ ವಿಷಕಾರಿ ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *