ಮೀಟರ್ ಇಲ್ಲದೆ ಮ್ಯಾಚ್ ಬಿಟ್ಟ ಪಾಕಿಸ್ತಾನ – ಬಾಯ್ಕಾಟ್ ಮಾಡಿದ್ರೆ ಬರ್ಬಾದ್!

ಮೀಟರ್ ಇಲ್ಲದೆ ಮ್ಯಾಚ್ ಬಿಟ್ಟ ಪಾಕಿಸ್ತಾನ – ಬಾಯ್ಕಾಟ್ ಮಾಡಿದ್ರೆ ಬರ್ಬಾದ್!

ಕಳೆದೊಂದು ವಾರದಿಂದ ನಕ್ರಾ ಮಾಡ್ಕೊಂಡು ದಿನಕ್ಕೊಂದು ಬಿಲ್ಡಪ್ ಕೊಡ್ತಿದ್ದ ಪಾಕಿಸ್ತಾನ ಕೊನೆಗೂ ಒಂದು ಡಿಸಿಷನ್​ಗೆ ಬಂದಿದೆ. ನಾವು ಟಿ-20 ವಿಶ್ವಕಪ್​ನಲ್ಲಿ ಭಾಗವಹಿಸ್ತಿವಿ. ಬಟ್ ಭಾರತ ವಿರುದ್ಧದ ಪಂದ್ಯ ಮಾತ್ರ ಆಡಲ್ಲ ಅಂತಾ. ಅರೆ ಫೆಬ್ರವರಿ 15ಕ್ಕೆ ಮ್ಯಾಚ್ ಶೆಡ್ಯೂಲ್ ಆಗಿದೆ. ಇಂಡೋಪಾಕ್ ಮ್ಯಾಚ್ ಅಂದ್ರೆ ಇಡೀ ಜಗತ್ತೇ ಕಾಯ್ತಾ ಇರುತ್ತೆ. ಆಲ್ರೆಡಿ ಟಿಕೆಟ್ಸ್ ಎಲ್ಲಾ ಸೋಲ್ಡ್​ಔಟ್ ಆಗಿವೆ.

ಇದನ್ನೂ ಓದಿ : T-20Iನಲ್ಲಿ ಇನ್ನೆಂದೂ ಆಡಲ್ಲ KL – IPL ಸಕ್ಸಸ್ ಭಾರತದ ಪರ ಸಿಗ್ಲಿಲ್ವಾ?

ಫೆಬ್ರವರಿ 1. ಅಂದ್ರೆ ಭಾನುವಾರ ಇಡೀ ಜಗತ್ತೇ ಭಾರತದತ್ತ ದೃಷ್ಟಿ ಇಟ್ಟಿತ್ತು. ಯಾಕಂದ್ರೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗ್ತಿತ್ತು. ಆದ್ರೆ ಕ್ರಿಕೆಟ್ ಲೋಕದಲ್ಲಿ ಮಾತ್ರ ಪಾಕಿಸ್ತಾನದ ಬುಡಕ್ಕೆ ಬೆಂಕಿ ಬಿದ್ದಿತ್ತು. ಒಂದ್ಕಡೆ ಅಂಡರ್ 19 ವಿಶ್ವಕಪ್​ನಲ್ಲಿ ಭಾರತದ ಎದುರು ಹೀನಾಯವಾಗಿ ಸೋತ್ರೆ ಅತ್ತ ಸೀನಿಯರ್ಸ್ ಟೀಂ ಭಾರತದ ವಿರುದ್ಧ ಕಣಕ್ಕಿಳಿಯೋದೇ ಬೇಡ ಅನ್ನೋ ಡಿಸಿಷನ್ ತಗೊಂಡಿತ್ತು. ವಿಶ್ವಕಪ್ ಆಡ್ತೀವಿ ಹೆಂಗೂ ಸೋಲ್ತೀವಿ ಸೋ ಪಂದ್ಯ ಆಡದೇ ಇಲ್ಲ ಅಂತಾ ಬಿಲ್ಡಪ್ ತಗೊಳ್ಳೋಣ ಅಂತಾ ಭಾರತದ ವಿರುದ್ಧದ ಪಂದ್ಯವನ್ನೇ ಬಾಯ್ಕಾಟ್ ಮಾಡಿದ್ದಾರೆ.

ಫೆಬ್ರವರಿ 15ಕ್ಕೆ ನಡೆಯಲ್ಲ ಇಂಡೋ-ಪಾಕ್ ವಾರ್!

2026ರ ಟಿ-20 ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಇದೇ ಶನಿವಾರ ಟೂರ್ನಿ ಅದ್ಧೂರಿಯಾಗಿ ಆರಂಭವಾಗಲಿದೆ. ಇನ್ನೇನು ಎಲ್ಲಾ ತಂಡಗಳು ಅಖಾಡಕ್ಕಿಳಿಯೋಕೆ ರೆಡಿಯಾಗ್ತಿದ್ರೆ ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಪಂದ್ಯ ಆಡಲ್ಲ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪಾಕಿಸ್ತಾನದ ಪಂದ್ಯಗಳೆಲ್ಲಾ ಶ್ರೀಲಂಕಾದಲ್ಲಿ ನಡೆಯಲಿದ್ದು ಲಂಕಾಗೆ ತಂಡವನ್ನ ಕಳಿಸುತ್ತೇವೆ. ಆದ್ರೆ ಭಾರತದ ಪಂದ್ಯವನ್ನ ಬಹಿಷ್ಕರಿಸುತ್ತೇವೆ ಎಂದಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಇಂಥಾ ನಿರ್ಧಾರ ಮಾಡಿದ್ದೇವೆ ಅನ್ನೋದನ್ನ ಎಲ್ಲೂ ಹೇಳಿಲ್ಲ. ಹೀಗಾಗಿ ಪಾಕಿಸ್ತಾನ ಗ್ರೂಪ್ ಸ್ಟೇಜ್​ನಲ್ಲಿ ಫೆಬ್ರವರಿ 7 ರಂದು ನೆದರ್‌ಲ್ಯಾಂಡ್ಸ್‌ ವಿರುದ್ಧ ಮೊದಲ ಪಂದ್ಯ, ಫೆಬ್ರವರಿ 10 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ವಿರುದ್ಧ ಮತ್ತು ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಆಡಲಿದೆ. ಅಷ್ಟಕ್ಕೂ ಭಾರತದ ವಿರುದ್ಧ ಪಾಕಿಸ್ತಾನ ಆಡಲ್ಲ ಅನ್ನೋದಕ್ಕೆ ಬೇರೆ ಬೇರೆ ಕಾರಣಗಳೂ ಇವೆ.

ಮೀಟರ್ ಕಳ್ಕೊಂಡ ಪಾಕ್!

ಏಷ್ಯಾಕಪ್ ನಲ್ಲಿ ಆದ ಅವಮಾನಗಳಿಂದ ಕಂಗೆಟ್ಟಿರೋ ಪಾಕ್

ಭಾರತದ ಬ್ಯಾಟಿಂಗ್ ಆರ್ಭಟಕ್ಕೆ ಥಂಡಾ ಹೊಡೆದಿರೋ ಪಾಕ್

ವಿಶ್ವಕಪ್ ನಲ್ಲೂ ಸೋತು ಮತ್ತೆ ಮುಖಭಂಗ ಅನುಭವಿಸೋ ಭಯ

ಪಂದ್ಯದ ಸೋಲಿನ ಅವಮಾನಕ್ಕಿಂತ ಆಡದೇ ಅಂಕ ಬಿಡಲು ತೀರ್ಮಾನ

ವಿಶ್ವ ಕ್ರಿಕೆಟ್ ಎದುರು ಬಾಯ್ಕಾಟ್ ಮಾಡಿದ್ವಿ ಅನ್ನೋ ಬಿಲ್ಡಪ್

ಅಲ್ಲಿಗೆ ಪಾಕಿಸ್ತಾನದ ನಿರ್ಧಾರದ ಹಿಂದೆ ನೋಡಿದಾಗ ಸೋಲೋ ಭಯದಿಂದಲೇ ಇಂಥಾ ನಿರ್ಧಾರ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಹಾಗಂತ ಇಲ್ಲಿ ಪಾಕಿಸ್ತಾನ ಬಾಯ್ಕಾಟ್ ಮಾಡಿದ್ರೆ ಭಾರತಕ್ಕೆ ಏನ್ ಲಾಸೂ ಆಗಲ್ಲ. ಪಂದ್ಯ ಆಡಿ ಗೆದ್ದು 2 ಅಂಕ ತಗೊಳ್ತಿದ್ರು. ಬಟ್ ಈಗ ಪಂದ್ಯ ಆಡದೆಯೇ 2 ಅಂಕ ತಗೊಳ್ತಾರೆ. ಌಂಡ್ ಅಪ್ಪಿ ತಪ್ಪಿ ಮಳೆಯಿಂದಲೋ, ಬ್ಯಾಡ್ ಲೈಟ್ ಅಥವಾ ಬೇರೆ ಯಾವ ಕಾರಣಕ್ಕೋ ಪಂದ್ಯ ರದ್ದಾಗಿದ್ರೆ ಉಭಯ ತಂಡಗಳಿಗೂ ಅಂಕ ಕೊಡ್ಬೇಕಿತ್ತು. ಈಗ ಪಾಕಿಸ್ತಾನವೇ ಹಿಂದೆ ಸರಿದಿರೋದ್ರಿಂದ ಭಾರತಕ್ಕೆ ಯಾವ ನಷ್ಟನೂ ಇಲ್ಲ. ಪಾಕಿಸ್ತಾನವೇ 2 ಅಂಕಗಳನ್ನ ಕಳ್ಕೊಳುತ್ತೆ. ಯಾಕಂದ್ರೆ ಪಂದ್ಯ ಆಡೋಕೆ ಸೂರ್ಯಕುಮಾರ್‌ ನೇತೃತ್ವದ ಭಾರತ ರೆಡಿ ಇರುವುದರಿಂದ 2 ಅಂಕಗಳು ಸಿಗುತ್ತವೆ. ಜೊತೆಗೆ ರನ್‌ರೇಟ್‌ ಸುಧಾರಿಸುತ್ತದೆ ಎನ್ನಲಾಗುತ್ತದೆ. ಪಾಕಿಸ್ತಾನಕ್ಕೆ ಪಾಯಿಂಟ್ಸ್ ಜೊತೆಗೆ ನೆಟ್‌ರನ್‌‌ ರೇಟ್ ಮೇಲೂ ಹೊಡೆತ ಬೀಳಲಿದೆ. ಸದ್ಯ ಪಾಕಿಸ್ತಾನದ ಈ ಹುಚ್ಚಾಟಕ್ಕೆ ಐಸಿಸಿ ಪತ್ರ ಬರೆದಿದೆ.

ನಿರ್ಧಾರವನ್ನ ಪರಿಶೀಲಿಸಿ ಇಲ್ದಿದ್ರೆ ದೀರ್ಘಕಾಲಿನ ಸಮಸ್ಯೆ ಎಂದು ವಾರ್ನಿಂಗ್!

ಪಾಕಿಸ್ತಾನದ ಈ ನೌಟಂಕಿ ಆಟದ ಬಗ್ಗೆ ಅಸಮಾಧಾನಗೊಂಡಿರೋ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಬಹಿರಂಗ ಪತ್ರ ಬರೆದಿದೆ. ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ. ಬಹಿಷ್ಕಾರವನ್ನ ಹಿಂಪಡೆಯಿರಿ ಎಂದಿದೆ. ಇಲ್ಲ ನಾವು ಆಡೋದೇ ಇಲ್ಲ ಅನ್ನೋದೇ ಆದ್ರೆ ಮುಂದಿನ ದಿನಗಳಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಫೇಸ್ ಮಾಡ್ಬೇಕಾಗುತ್ತೆ ಅಂತಾ ವಾರ್ನ್ ಮಾಡಿದೆ. ಇದನ್ನೂ ಮೀರಿ ಪಾಕಿಸ್ತಾನ ಮೊಂಡಾಟ ಮಾಡಿದ್ರೆ ಬರ್ಬಾದ್ ಆಗೋದು ಗ್ಯಾರಂಟಿ. ಸಾಲಿಡ್ ರೀಸನ್ ಇಲ್ದೇ ಭಾರತದ ವಿರುದ್ಧ ಪಂದ್ಯವನ್ನ ಬಾಯ್ಕಾಟ್ ಮಾಡಿರೋದಕ್ಕೆ ಪಾಕಿಸ್ತಾನಕ್ಕೆ ಸರಿಯಾಗೇ ಹೊಡೆತ ಬೀಳುತ್ತೆ.

ಬರ್ಬಾದ್ ಪಾಕಿಸ್ತಾನ!

ಐಸಿಸಿ ಟೂರ್ನಿಯಿಂದಲೇ ಪಾಕಿಸ್ತಾನವನ್ನು ಹೊರಹಾಕಬಹುದು

ಐಸಿಸಿಯಿಂದ ಸಿಗುವ ವಾರ್ಷಿಕ ಆದಾಯಕ್ಕೆ ಸಂಬಂಧಿಸಿದ ನಿರ್ಬಂಧ

ಪಿಎಸ್ ಎಲ್ ನಲ್ಲಿ ವಿದೇಶಿ ಆಟಗಾರರಿಗೆ ಐಸಿಸಿ ಎನ್‌ ಒಸಿಗಳನ್ನು ನಿರಾಕರಣೆ

ಐಸಿಸಿ ರ್ಯಾಂಕಿಂಗ್ ಮತ್ತು ಡಬ್ಲ್ಯೂಟಿಸಿ ಅಂಕಗಳ ಮೇಲೂ ಪರಿಣಾಮ

ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳ ಆಯೋಜನೆ ಹಕ್ಕು ರದ್ದು

Shantha Kumari