ಗಿಲ್ಲಿ ಹಣ ಇದ್ದವರನ್ನು ಮಾತ್ರ ಮೀಟ್‌ ಮಾಡೋದಾ? – ಬಿಗ್‌ಬಾಸ್‌ ವಿನ್ನರ್ ನಡೆಗೆ ಫ್ಯಾನ್ಸ್‌ ಗರಂ!

ಗಿಲ್ಲಿ ಹಣ ಇದ್ದವರನ್ನು ಮಾತ್ರ ಮೀಟ್‌ ಮಾಡೋದಾ? – ಬಿಗ್‌ಬಾಸ್‌ ವಿನ್ನರ್ ನಡೆಗೆ ಫ್ಯಾನ್ಸ್‌ ಗರಂ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗೆದ್ದ ಬೆನ್ನಲ್ಲೇ ಗಿಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಸೆಲೆಬ್ರಿಟಿಗಳನ್ನು ಮೀಟ್‌ ಮಾಡೋದ್ರ ಜೊತೆಗೆ ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಆದ್ರೀಗ ಟ್ಯಾಟೂ ಹಾಕಿದ ಅಭಿಮಾನಿ ಗಿಲ್ಲಿ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಗಿಲ್ಲಿ ದುಡ್ಡು ಇರೋರನ್ನು ಮಾತ್ರ ಮೀಟ್‌ ಆಗ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:‌  ವರನಿಗೆ ಚಾಕು ಇರಿತ ಕೇಸ್‌ಗೆ ಟ್ವಿಸ್ಟ್‌!‌ – ಕೊಲ್ಲಲು ಸುಪಾರಿ ಕೊಟ್ಟಿದ್ದೇ ವಧು!

ಬಿಗ್‌ಬಾಸ್‌ ಗೆದ್ದ ಮೇಲೆ ಗಿಲ್ಲಿ ಕೈಗೆ ಸಿಗೋದು ಕಷ್ಟ ಆಗಿದೆ. ಒಂದಾದ ಮೇಲೊಂದು ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದಾರೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಬಿಗ್ ಬಾಸ್ ವೇಳೆ ಗಿಲ್ಲಿ ನಟ ತಮ್ಮ ಅಭಿಮಾನಿಗಳಲ್ಲಿ ಒಬ್ಬರು ತಮ್ಮ ಫೋಟೋವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿ ತುಂಬಾ ಖುಷಿಪಟ್ಟಿದ್ದರು. ಹಾಗೆಯೇ ತಾವು ಮನೆಯಿಂದ ಹೊರಬಂದ ಕೂಡಲೇ ಆ ಅಭಿಮಾನಿಯನ್ನು ಭೇಟಿಯಾಗಿ ಧನ್ಯವಾದ ಹೇಳುತ್ತೇನೆ ಎಂದು ಮಾತು ನೀಡಿದ್ದರು. ಆದರೆ ಇಷ್ಟೊಂದು ದಿನವಾದರೂ ಅವರು ಭೇಟಿ ಮಾಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಅಭಿಮಾನಿ ಮಾಧ್ಯಮಗಳಿಗೆ ನೋವು ಹಂಚಿಕೊಂಡಿದ್ದಾರೆ.

ಗಿಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿ ಭೇಟಿ ಮಾಡ್ತಿಲ್ಲ. ಇವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೆದುಕೊಂಡು ಬಂದೆವು. ಅವರ ಅಣ್ಣನಿಗೆ ಕರೆ ಮಾಡಿ, ಗಿಲ್ಲಿಗೆ ಪ್ರಸಾದ ಕೊಡಬೇಕಿತ್ತು ಎಂದು ಹೇಳಿದೆ. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.

50 ಕೋಟಿ ವೋಟ್‌ಗೆ ಅಭಿಮಾನಿಗಳು ಬೇಕಾಯ್ತು. ಆದರೆ, ಅಭಿಮಾನಿಗಳನ್ನ ಮೀಟ್‌ ಮಾಡೋಕೆ ಮಾತ್ರ ಆಗಲ್ವಾ ನಿಮಗೆ?” ಎಂದು ಸಂದರ್ಶನವೊಂದರಲ್ಲಿ ಟ್ಯಾಟೂ ಅಭಿಮಾನಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಈ ಅಭಿಮಾನಿ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. “ಟ್ಯಾಟೂ ಹಾಕಿಸಿಕೊಳ್ಳಿ ಅಂತ ಗಿಲ್ಲಿ ಹೇಳಿದ್ನಾ? ಅಂತ ಕಮೆಂಟ್‌ ಮಾಡಿದ್ದಾರೆ.

Shwetha M