ಜಲಮಂಡಳಿಯ ನಿರ್ಲಕ್ಷ್ಯಕ್ಕೆ ಬಾಲಕನ ಬಲಿ – ಹೆತ್ತವರ ಕಣ್ಣೀರಿಗೆ ಹೊಣೆಯಾರು?

ಜಲಮಂಡಳಿಯ ನಿರ್ಲಕ್ಷ್ಯಕ್ಕೆ ಬಾಲಕನ ಬಲಿ – ಹೆತ್ತವರ ಕಣ್ಣೀರಿಗೆ ಹೊಣೆಯಾರು?

ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಲಮಂಡಳಿಯ ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: ವರನಿಗೆ ಚಾಕು ಇರಿತ ಕೇಸ್‌ಗೆ ಟ್ವಿಸ್ಟ್‌!‌ – ಕೊಲ್ಲಲು ಸುಪಾರಿ ಕೊಟ್ಟಿದ್ದೇ ವಧು!

ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ದುರಂತ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ 14 ವರ್ಷದ ಪ್ರೀತಮ್ ಮೃತಪಟ್ಟ ದುರ್ದೈವಿ ಬಾಲಕ. ನೋಡಲು ಮುದ್ದು ಮುದ್ದಾಗಿರುವ ಪ್ರೀತಮ್ ಅಪ್ಪ ಅಮ್ಮನ ಭವಿಷ್ಯವಾಗಿದ್ದ. ಹೆತ್ತವರ ಕಣ್ಮಣಿಯಾಗಿದ್ದ. ಹೆತ್ತವರ ಬದುಕೇ ಮಗನಾಗಿದ್ದ. ಆದರೆ, ಹೊಣೆಗೇಡಿ ಜಲಮಂಡಳಿಯ ನಿರ್ಲಕ್ಷ್ಯಕ್ಕೆ ಬಾಲಕ ಪ್ರೀತಮ್ ದಾರುಣ ಅಂತ್ಯ ಕಂಡಿದ್ದಾರೆ. ಹೆತ್ತವರ ಮಡಿಲನ್ನು ಬರಿದು ಮಾಡಿದ್ದಾನೆ. ಪ್ರೀತಮ್ ತಂದೆ ರಜನಿಕಾಂತ್‌ ತನ್ನ ಕುಟುಂಬದವರ ಜೊತೆ ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಪ್ರೀತಮ್ ಕಾಣೆಯಾಗಿದ್ದ. ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ, ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಪ್ರೀತಮ್ ಶವ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದ ಸಂಪ್‌ ನ್ನು ಜಲಮಂಡಳಿ ಮುಚ್ಚದೇ ಬಿಟ್ಟಿದೆ. ಬಾಲಕ ಓಡಾಡುವ ವೇಳೆ ಸಂಪ್‌ಗೆ ಬಿದ್ದು ಸಾವನ್ನಪ್ಪಿದ್ದಾನೆ. ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಜಲಮಂಡಳಿ ಕಾಮಗಾರಿ ಎಡವಟ್ಟಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಲಮಂಡಳಿಯ ಕಾಂಕ್ರೀಟ್ ಚೇಂಬರ್‌ಗೆ ಬಾಲಕನ ಬಲಿಯಾಗಿದೆ. ಬಾಲಕ ಪ್ರೀತಮ್ 9ನೇ ತರಗತಿ ಓದುತ್ತಿದ್ದ. ಮಗನ ಶವ ನೋಡಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Sulekha