ಖಾದಿ ಉದ್ಯಮಕ್ಕೆ ಗಾಂಧಿ ಹೆಸರು – ಚೆನ್ನೈ- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ 4 ರಾಜ್ಯಗಳಿಗೆ ಕೇಂದ್ರದಿಂದ ಬಂಪರ್ ಗಿಫ್ಟ್

ಖಾದಿ ಉದ್ಯಮಕ್ಕೆ ಗಾಂಧಿ ಹೆಸರು – ಚೆನ್ನೈ- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್  4 ರಾಜ್ಯಗಳಿಗೆ ಕೇಂದ್ರದಿಂದ ಬಂಪರ್ ಗಿಫ್ಟ್

ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿದೆ. ಇದೀಗ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಮಹಾತ್ಮ ಗಾಂಧಿ ಹೆಸರು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ:ಸತತ ಒಂಬತ್ತನೇ ಬಜೆಟ್ ಮಂಡಿಸದ ನಿರ್ಮಲಾ ಸೀತಾರಾಮನ್ – ದೇಶದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ

ಸಾಕಷ್ಚು ನಿರೀಕ್ಷೆಗಳು ಮೂಡಿಸಿದ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ ಮತ್ತು ಕೇರಳ ರಾಜ್ಯಕ್ಕೆ ಬಂಪರ್ ಗಿಪ್ಟ್ ಸಿಕ್ಕಿದೆ. 4 ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್ ಯೋಜನೆ ಘೋಷಣೆಯಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಬದಲಾವಣೆ ತರವಾಗಿದ್ದು, ಸೆಮಿಕಂಡಕ್ಟರ್ ವಲಯಕ್ಕೆ ₹40 ಸಾವಿರ ಕೋಟಿ ಮೀಸಲಿಡಲಾಗಿದೆ. ಒಡಿಶಾ, ಕೇರಳ, ಆಂಧ್ರದಲ್ಲಿ ಮೈನಿಂಗ್ ಸಂಶೋಧನೆಗೆ ಒತ್ತು ನೀಡಲಾಗಿದೆ.

  • ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆ

ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಈ ಬಾರಿ ಬಜೆಟ್‌ನಲ್ಲಿ ಮಂಡಿಸಲಾಗಿದೆ. 6 ಅಂಶಗಳ ಅಭಿವೃದ್ಧಿ ಮಂತ್ರ ಘೋಷಣೆ ಮಾಡಲಾಗಿದೆ. ಬಯೋಫಾರ್ಮಾ ಹಬ್​ಗೆ ₹10 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 3 ಹೊಸ ಫಾರ್ಮಾ ಕಾಲೇಜುಗಳ ಘೋಷಣೆಯಾಗಿದೆ.

  • ಟೆಕ್ಸ್‌ಟೈಲ್ ವಲಯಕ್ಕೆ ಬೂಸ್ಟ್

ಕಂಟೇನರ್ ಉತ್ಪಾದನೆಗೆ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸಮರ್ಥ 2.O ಮೂಲಕ ಟೆಕ್ಸ್​ಟೈಲ್ಸ್ ವಲಯಕ್ಕೆ ಬೂಸ್ಟ್ ನೀಡಲಾಗಿದೆ. ಮೆಗಾ ಟೆಕ್ಸ್​ಟೈಲ್ಸ್ ಪಾರ್ಕ್​ ಘೋಷಣೆಯಾಗಿದೆ. ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ ಯೋಜನೆ ಜಾರಿಗೆ ತರಲಾಗಿದೆ.

  • ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಣೆ

7 ಹೈ ಸ್ಪೀಡ್ ರೈಲು ಕಾರಿಡಾರ್ಗಳ ಘೋಷಣೆ ಮಾಡಲಾಗಿದೆ. 5 ವರ್ಷಗಳಲ್ಲಿ 5 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. 7 ಹೈ ಸ್ಪೀಡ್ ರೈಲು ಕಾರಿಡಾರ್ಗಳೆಂದರೆ, ಮುಂಬೈ-ಪುಣೆ, ಪುಣೆ-ಹೈದ್ರಾಬಾದ್, ದೆಹಲಿ-ವಾರಾಣಸಿ, ವಾರಾಣಸಿ-ಸಿಲಿಗುರಿ ರೈಲು ಮತ್ತು ಚೆನ್ನೈ-ಬೆಂಗಳೂರು ಹೈ ಸ್ಪೀಡ್ ರೈಲು ಕಾರಿಡಾರ್ ಸೇರಿದೆ.

 

Sulekha