ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಎಷ್ಟಿರಬೇಕು? – ಸಮ ಇರಬೇಕಾ? ಬೆಸ ಇರಬೇಕಾ?

ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಎಷ್ಟಿರಬೇಕು? – ಸಮ ಇರಬೇಕಾ? ಬೆಸ ಇರಬೇಕಾ?

ಮನೆ ಸುಖ–ಶಾಂತಿಯಿಂದ ಇರಬೇಕಾದರೆ ವಾಸ್ತು ದೋಷರಹಿತವಾಗಿರಬೇಕು. ಅಷ್ಟೇ ಅಲ್ಲದೆ, ವಾಸ್ತು ಸರಿಯಾಗಿದ್ದರೆ ಮಾತ್ರ ಮನೆಯಲ್ಲಿರುವವರು ಸಂತೋಷ ಮತ್ತು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೇಗೆ ಮನೆಯ ಪ್ರತಿಯೊಂದು ಭಾಗವೂ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಅವುಗಳ ಪೈಕಿ ಮೆಟ್ಟಿಲುಗಳ ನಿರ್ಮಾಣದಲ್ಲಿಯೂ ಅನ್ವಯವಾಗುತ್ತದೆ. ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ಮೆಟ್ಟಿಲುಗಳ ಸಂಖ್ಯೆ ಸದಾ ಬೆಸವಾಗಿರಬೇಕು 

7, 11, 15, 17, 19 ಅಥವಾ 21. ಇವುಗಳಲ್ಲಿ 17 ಮೆಟ್ಟಿಲುಗಳನ್ನು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಬೆಸ ಸಂಖ್ಯೆಯ ಮೆಟ್ಟಿಲುಗಳು ಮನೆಯಲ್ಲಿನ ಸಂತೋಷ, ಬೆಳವಣಿಗೆ ಮತ್ತು ಗೌರವವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.

ಈ ತಪ್ಪನ್ನು ಮಾಡಬೇಡಿ

ಮೆಟ್ಟಿಲುಗಳ ಕೆಳಗಿನ ಜಾಗವನ್ನು ಕಸ, ಶೂಗಳು, ಅನುಪಯುಕ್ತ ವಸ್ತುಗಳನ್ನು ಇಡಲು ಬಳಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ದುರ್ಬಲವಾಗುವ ಜತೆಗೆ ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಇಲ್ಲಿ ಮೆಟ್ಟಿಲು ಒಳ್ಳೆಯದಲ್ಲ

ವಾಸ್ತು ನಿಯಮಗಳಂತೆ, ಮುಖ್ಯ ಬಾಗಿಲಿನ ಮುಂದೆ, ಉತ್ತರ ದಿಕ್ಕಿನಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವುದು ಶುಭಕರವಲ್ಲ. ಇಂತಹ ವ್ಯವಸ್ಥೆಯಿಂದ ಮನೆಯ ಸದಸ್ಯರಿಗೆ ಅವಕಾಶಗಳು ತಪ್ಪುವ ಸಾಧ್ಯತೆ ಇದ್ದು, ಆದಾಯದಲ್ಲಿ ಕುಸಿತ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ನಂಬಲಾಗಿದೆ.

ಈ ದಿಕ್ಕು ಸೂಕ್ತ

ಮೆಟ್ಟಿಲುಗಳನ್ನು ನೈಋತ್ಯ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸುವುದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮೆಟ್ಟಿಲುಗಳಿದ್ದರೆ ಮನೆಯಲ್ಲಿ ಪ್ರಗತಿ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ವಾಯುವ್ಯ ದಿಕ್ಕಿನ ಆಯ್ಕೆಯನ್ನೂ ಕೆಲವೊಮ್ಮೆ ಪರಿಗಣಿಸಬಹುದು.

Kishor KV