ಉಂಡು ಹೋದ ಓಡಿ ಹೋದ – ಫೈವ್ ಸ್ಟಾರ್ ಹೋಟೆಲ್​ಗೇ ₹23 ಲಕ್ಷ ದೋಖಾ!  

ಉಂಡು ಹೋದ ಓಡಿ ಹೋದ – ಫೈವ್ ಸ್ಟಾರ್ ಹೋಟೆಲ್​ಗೇ ₹23 ಲಕ್ಷ ದೋಖಾ!  

ನವದೆಹಲಿ : ಹೋಟೆಲ್​ಗಳಲ್ಲಿ ವಾಸ್ತವ್ಯ ಹೂಡಿ 100 ರೂಪಾಯಿ ಕಡಿಮೆ ಕೊಟ್ಟರೂ ಸಿಬ್ಬಂದಿ ಸ್ವೀಕರಿಸೋದಿಲ್ಲ. ಆದರೆ ಫೈವ್ ಸ್ಟಾರ್ ಹೋಟೆಲ್​ನಲ್ಲೇ ನಾಲ್ಕು ತಿಂಗಳು ವಾಸ್ತವ್ಯ ಹೂಡಿದ್ದ ಆಸಾಮಿಯೊಬ್ಬ ಬರೋಬ್ಬರಿ 23 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡದೆ ಎಸ್ಕೇಪ್ ಆಗಿದ್ದಾನೆ.

 

ದೆಹಲಿ ಫೈವ್ ಸ್ಟಾರ್ ಹೋಟೆಲ್​ವೊಂದರಲ್ಲಿ ಯುಎಇ ರಾಜಮನೆತನದ ಉದ್ಯೋಗಿ ಅಂತಾ ಹೇಳಿಕೊಂಡು ನಾಲ್ಕು ತಿಂಗಳು ವಾಸ್ತವ್ಯವಿದ್ದ ಭೂಪನೊಬ್ಬ 23 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡದೆ ಹೋಟೆಲ್​ನಿಂದ ಪರಾರಿಯಾಗಿದ್ದಾನೆ. ಆತನ ವಿರುದ್ಧ ಹೋಟೆಲ್ ಸಿಬ್ಬಂದಿ ಕಳವು ಆರೋಪವನ್ನೂ ಮಾಡಿದ್ದಾನೆ. ಕಳೆದ ಆಗಸ್ಟ್​ನಲ್ಲಿ ದೆಹಲಿಯ ಲೀಲಾ ಪ್ಯಾಲೇಸ್​ಗೆ ಮೊಹಮ್ಮದ್ ಶರೀಫ್ ಎಂಬಾತ ಆಗಮಿಸಿ ಅಲ್ಲಿ ರೂಮ್ ಬಾಡಿಗೆ ಪಡೆದಿದ್ದ. ಈ ವೇಳೆ ತಾನು ಯುಎಇ ನಿವಾಸಿಯಾಗಿದ್ದು ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಜೊತೆ ಕೆಲಸ ಮಾಡುತ್ತಿದ್ದೇನೆಂದು ಹೋಟೆಲ್ ಸಿಬ್ಬಂದಿಯನ್ನ ನಂಬಿಸಿದ್ದ. ಅದಕ್ಕಾಗಿ ಆತ ಕೆಲ ದಾಖಲೆಗಳನ್ನೂ ಕೂಡ ನೀಡಿದ್ದ.

ಇದನ್ನೂ ಓದಿ:ಅಳಿಯನಿಗೆ 379 ಬಗೆಯ ಭಕ್ಷ್ಯ ಭೋಜನ ಮುಂದಿಟ್ಟ ಅತ್ತೆ – ಇಷ್ಟೊಂದೆಲ್ಲಾ ತಿನ್ನೋದೇಗಪ್ಪಾ..!

ಆಗಸ್ಟ್ 1ರಿಂದ ನವೆಂಬರ್ 20ರವರೆಗೆ ಮೂರು ತಿಂಗಳ ಕಾಲ ಹೋಟೆಲ್​ನಲ್ಲೇ ತಂಗಿದ್ದ ಮೊಹಮ್ಮದ್ ನವೆಂಬರ್ 20ರಂದು ಹೋಟೆಲ್​ನಿಂದ ಹೊರಟು ಹೋಗಿದ್ದ. ಪರಾರಿಯಾಗುವ ವೇಳೆ ಹೋಟೆಲ್‌ನಲ್ಲಿದ್ದ ಬೆಳ್ಳಿ ಪಾತ್ರೆ, ಮುತ್ತಿನ ತಟ್ಟೆ ಸೇರಿದಂತೆ ಐಷಾರಾಮಿ ವಸ್ತುಗಳನ್ನ ಕದ್ದುಕೊಂಡು ಪರಾರಿಯಾಗಿದ್ದಾನೆ ಎಂದು ಹೋಟೆಲ್ ಸಿಬ್ಬಂದಿ ಆರೋಪ ಮಾಡಿದ್ದಾರೆ. ವಂಚನೆ ಹಾಗೂ ಕಳ್ಳತನದ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಆರೋಪಿ ಮೊಹಮ್ಮದ್ ಶರೀಫ್​ಗಾಗಿ ತಲಾಶ್ ನಡೆಸುತ್ತಿದ್ದಾರೆ.

suddiyaana