ಸೋಲು ಗೊತ್ತಿದ್ದೇ PAK ಬಿಲ್ಡಪ್ – ಬಿಟ್ಟಿ ಪ್ರಚಾರಕ್ಕಾಗಿ ಕೀಳು ಮಟ್ಟಕ್ಕಿಳಿದ್ರಾ?
PCB ಅಧ್ಯಕ್ಷನ ನವರಂಗಿ ಆಟ

ಟಿ-20 ವಿಶ್ವಕಪ್ನಲ್ಲಿ ಕಣಕ್ಕಿಳಿಯೋ ತಂಡಗಳೆಲ್ಲಾ ಗೇಮ್ ಪ್ಲ್ಯಾನ್, ಪ್ಲೇಯಿಂಗ್ 11, ಸ್ಟ್ರೆಂಥ್, ವೀಕ್ನೆಸ್ ಅಂತಾ ಲೆಕ್ಕಾಚಾರದಲ್ಲಿದ್ರೆ ಪಾಕಿಸ್ತಾನ ಮಾತ್ರ ಬೇರೆಯದ್ದೇ ದಾರಿಯಲ್ಲಿದೆ. ಒಂದ್ಸಲ ಆಡ್ತೀವಿ ಅಂತಾರೆ ಇನ್ನೊಂದ್ಸಲ ಪ್ರಧಾನಿ ಕೇಳಿ ಹೇಳ್ತೀವಿ ಅಂತಾರೆ. ಸ್ಟಿಲ್ ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಫೆಬ್ರವರಿ 2 ಅಂದ್ರೆ ಸೋಮವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಬಗ್ಗೆ ಅನೌನ್ಸ್ ಮಾಡೋದಾಗಿ ಹೇಳಿದ್ದಾರೆ. ಸೋ ಅಲ್ಲಿಗೆ ಪಾಕಿಸ್ತಾನಕ್ಕೆ ವಿಶ್ವಕಪ್ಗಿಂತ ಜಾಸ್ತಿ ಅಟೆನ್ಷನ್ ಸೀಕರ್ ಆಗಿದ್ಯಾ ಎನ್ನುವಂತ ಅನುಮಾನ ಮೂಡಿದೆ.
ಇದನ್ನೂ ಓದಿ : ಕಿಚ್ಚನ ಸಿನಿ ಜರ್ನಿಗೆ 30 ವರ್ಷ – ಫ್ಯಾನ್ಸ್ಗೆ ಬಾವುಕ ಪತ್ರ ಬರೆದ ಸುದೀಪ್
ಬಾಂಗ್ಲಾದೇಶವನ್ನ ಟಿ-20 ವಿಶ್ವಕಪ್ನಿಂದ ಹೊರದಬ್ಬಿದ್ದಕ್ಕೆ ನಖಶಿಖಾಂತ ಉರಿದು ಬಿದ್ದಿದ್ದ ಪಾಕಿಸ್ತಾನ ಅಂದಿನಿಂದ ಈವರೆಗೂ ಒಂದಿಲ್ಲೊಂದು ಕ್ಯಾತೆ ತೆಗೀತಾನೇ ಇದೆ. ಮೊದ್ಲು ವಿಶ್ವಕಪ್ನೇ ಆಡಲ್ಲ ಅಂದ್ರು. ಅದು ವರ್ಕೌಟ್ ಆಗಲ್ಲ ಅಂತಾ ಗೊತ್ತಾಯ್ತು. ನೆಕ್ಸ್ಟ್ ಭಾರತದ ವಿರುದ್ಧ ಕಣಕ್ಕಿಳಿಯಲ್ಲ ಬಾಯ್ಕಾಟ್ ಅಂದ್ರು. ಇದೂ ಸಾಧ್ಯ ಇಲ್ಲ ಅನ್ನೋದು ಗೊತ್ತಾಯ್ತು. ಸೋ ಐಸಿಸಿ ಮತ್ತು ಬಿಸಿಸಿಐ ಮುಂದೆ ತಮ್ಮ ಆಟ ಏನೂ ನಡೆಯಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಪಿಸಿಬಿ ಹುಚ್ಚಾಟಗಳನ್ನೇ ಮಾಡ್ಕೊಂಡು ಬಿಟ್ಟಿಯಾಗಿ ಪ್ರಚಾರ ತಗೊಳ್ತಿದ್ದಾರೆ. ಅದೂ ಕೂಡ ಭಾರತದ ಎದುರು ಆಡಲ್ಲ ಅನ್ನೋ ರಾಗವನ್ನ ಇನ್ನೂ ಬಿಟ್ಟಿಲ್ಲ.
ಭಾರತ ವಿರುದ್ಧದ ಪಂದ್ಯವನ್ನ ಆಡಲ್ಲ ಎಂದು ತಗಾದೆ!
ಟೂರ್ನಿಗಾಗಿ ಟೀಂ ಅನೌನ್ಸ್ ಮಾಡಿ ಕೊಲೊಂಬೊಗೆ ಹಾರಲು ಡೇಟ್ ಫಿಕ್ಸ್ ಆದ್ರೂ ಪಾಕಿಸ್ತಾನ ನಾವು ಆಡೋ ಬಗ್ಗೆ ಅಧಿಕೃವಾಗಿ ಘೋಷಿಸಿಲ್ಲ ಅಂತಾ ತಗಾದೆ ತೆಗೀತಿದೆ. ಈಗ್ಲೂ ಅದೇ ರಾಗ ಅದೇ ಹಾಡು. ಎಲ್ಲಾ ನಿರ್ಧಾರಗಳನ್ನ ಅಲ್ಲಿನ ಸರ್ಕಾರದ ಮೇಲೆ ಹಾಕಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು. ಬಹುಶಃ ಭಾರತದ ವಿರುದ್ಧದ ಪಂದ್ಯಗಳನ್ನ ಬಹಿಷ್ಕರಿಸಬಹುದು. ಹಾಗೇನಾದ್ರೂ ಎರಡೂ ತಂಡಗಳು ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗೋ ಸಂಭವ ಬಂದ್ರೂ ಅದನ್ನೂ ಬಹಿಷ್ಕಾರ ಮಾಡ್ತೀವಿ ಅಂತಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಹೇಳಿದ್ದಾರೆ. ಹಾಗೇ 2026ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಸೋಮವಾರ ಫೈನಲ್ ಅನೌನ್ಸ್ ಮಾಡೋದಾಗಿ ನಖ್ವಿ ಹೇಳಿದ್ದಾರೆ. ಅಷ್ಟಕ್ಕೂ ಪಾಕಿಸ್ತಾನ ಇಷ್ಟೆಲ್ಲಾ ಡ್ರಾಮಾ ಆಡ್ತಿರೋದನ್ನ ನೋಡಿದ್ರೆ ಸೋಲಿನ ಅನುಮಾನವೂ ಮೂಡಿದೆ.
ಭಾರತದ ಎದುರು ಸೋಲೋ ಭಯದಿಂದಲೇ ನಾಟಕ!
2026ರ ಟಿ-20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಫೆಬ್ರವರಿ 15ರಂದು ಕೊಲೊಂಬೋ ಸ್ಟೇಡಿಯಂ ಫಿಕ್ಸ್ ಆಗಿದೆ. ಇತಿಹಾಸವನ್ನ ಕೆದಕಿ ನೋಡಿದ್ರೆ ಪಾಕಿಸ್ತಾನದ ಮುಂದೆ ಯಾವತ್ತಿದ್ರೂ ಭಾರತವೇ ಬಾಸ್. 2007ರಲ್ಲಿ ಸ್ಟಾರ್ಟ್ ಆದ ಟಿ-20 ವಿಶ್ಬಕಪ್ನಲ್ಲಿ ಉಭಯ ರಾಷ್ಟ್ರಗಳು ಇದುವರೆಗೆ ಒಟ್ಟು 8 ಸಲ ಮುಖಾಮುಖಿಯಾಗಿದ್ದಾರೆ. ಭಾರತ 6 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 1. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು. ಌಂಡ್ ಆ ಪಂದ್ಯವನ್ನೂ ಬೌಲ್-ಔಟ್ ಮೂಲಕ ಭಾರತವೇ ಗೆದ್ಕೊಂಡಿತ್ತು. ಇನ್ನು 2025ರ ಏಷ್ಯಾಕಪ್ನಲ್ಲೂ ಪಾಕಿಸ್ತಾನದ ವಿರುದ್ಧ ಭಾರತ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದು ಶೇಪ್ ಔಟ್ ಮಾಡಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಮತ್ತೆ ಭಾರತದ ಎದುರು ಸೋತು ಜಗತ್ತಿನ ಮುಂದೆ ಮರ್ಯಾದೆ ಕಳ್ಕೊಳ್ಳೋ ಪ್ರಸಂಗ ಬರುತ್ತಲ್ಲ ಅನ್ನೋ ಟೆನ್ಷನ್ ಕಾಡ್ತಿದೆ. ಹೀಗಾಗಿಯೇ ಟೂರ್ನಿ ಆಡೋದಾ ಬೇಡ್ವಾ ಅನ್ನೋ ಗೊಂದಲದಲ್ಲೇ ಇದ್ದಾರೆ. ಆಡದೇ ಇದ್ರೆ ಐಸಿಸಿ ಹಾಕೋ ದಂಡ ಕಟ್ಟೋಕೆ ದುಡ್ಡಿಲ್ಲ. ಆಡಿದ್ರೆ ಭಾರತದ ಎದುರು ಗೆಲ್ಲೋಕಾಗಲ್ಲ. ಅಭಿಷೇಕ್ ಶರ್ಮಾ ಒಬ್ರೇ ಸೋಲಿಸಿಬಿಡ್ತಾರೇನೋ ಅನ್ನೋ ಭಯ ಕಾಡ್ತಿದೆ. ಹೀಗಾಗಿಯೇ ವಿಶ್ವಕಪ್ಗೂ ಮುನ್ನವೇ ಎಷ್ಟು ಸಾಧ್ಯನೋ ಅಷ್ಟು ಪ್ರಚಾರವನ್ನ ತಗೊಂಡು ಬಿಡೋಣ ಅಂತಾ ದಿನಕ್ಕೊಂದು ನಾಟಕ ಮಾಡ್ತಿದ್ದಾರೆ. ಆದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹುಚ್ಚಾಟಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗರೇ ಉರಿದು ಬಿದ್ದಿದ್ದಾರೆ.
ಐಸಿಸಿ ಎದುರು ಬಾಲ ಬಿಚ್ಚಿದ ನಖ್ವಿಗೆ ಕ್ಲಾಸ್!
ಯಾವುದೇ ಕ್ರಿಕೆಟ್ ಮಂಡಳಿಗಳೇ ಆದ್ರೂ ಐಸಿಸಿ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಯಾಕಂದ್ರೆ ಫೈನಾನ್ಶಿಯಲ್ ಸಪೋರ್ಟ್, ಟೂರ್ನಿ ಆಯೋಜನೆಗೆ ಅವಕಾಶ ಸೇರಿದಂತೆ ಸಾಕಷ್ಟು ನಿರ್ಧಾರಗಳು ಐಸಿಸಿ ಬಳಿಯೇ ಇರುತ್ತೆ. ಆದ್ರೆ ಪಾಕಿಸ್ತಾನ ಮಾತ್ರ ಬಾಂಗ್ಲಾದೇಶದ ವಿಚಾರ ಮುಂದಿಟ್ಟುಕೊಂಡು ಐಸಿಸಿ ಜೊತೆ ಕ್ಯಾತೆ ತೆಗೆಯುತ್ತಿರೋದು ಪಾಕ್ ಮಾಜಿ ಆಟಗಾರರ ಕಣ್ಣು ಕೆಂಪಾಗಿಸಿದೆ. ಭವಿಷ್ಯಕ್ಕೆ ಹೊಡೆತ ಬೀಳುತ್ತೆ ಅಂತಾ ಗೊತ್ತಾಗಿ ತಿರುಗಿ ಬಿದ್ದಿದ್ದಾರೆ. ಪಾಕ್ನ ಹಲವು ಮಾಜಿ ಕ್ರಿಕೆಟಿಗರು, ಕೋಚ್ಗಳು, ಕ್ರಿಕೆಟ್ ಆಡಳಿತಾಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಿನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಾಗತಿಕ ಕ್ರಿಕೆಟ್ ಮಂಡಳಿ ಜೊತೆ ಉತ್ತಮವಾಗಿ ನಡೆದುಕೊಳ್ಳಿ ಅಂತಾ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಮೀರಿ ನಾವು ವಿಶ್ವಕಪ್ ಆಡಲ್ಲ ಬಾಯ್ಕಾಟ್ ಮಾಡ್ತೀವಿ ಅಂತಾ ಮುಂದಿನ ದಿನಗಳಲ್ಲಿ ಅದು ಪಾಕ್ ಕ್ರಿಕೆಟ್ನ ಅವನತಿಗೆ ಷರಾ ಬರೆದಂತಿರುತ್ತೆ. ಯಾಕಂದ್ರೆ ಪಾಕ್ನ ಉದ್ಧಟತನಕ್ಕೆ ಐಸಿಸಿ ಸದಸ್ಯರ ವಿರುದ್ಧ ದ್ವಿಪಕ್ಷೀಯ ಸರಣಿಗಳನ್ನು ಆಡುವ ಅವಕಾಶವನ್ನು ಕಳೆದುಕೊಳ್ಳಬಹುದು. ಹಾಗೇ ವಿದೇಶಿ ಆಟಗಾರರನ್ನು ಪಿಎಸ್ಎಲ್ನಲ್ಲಿ ಭಾಗವಹಿಸುವುದನ್ನು ನಿಷೇಧಿಸಬಹುದು. ಇದ್ರಿಂದ ಪಿಸಿಬಿ ಕ್ರಿಕೆಟ್ ಭವಿಷ್ಯಕ್ಕೆ ಗುನ್ನಾ ಇಟ್ಟಂತಾಗುತ್ತೆ.
ಌಕ್ಚುಲಿ ಇಲ್ಲಿ ಬಿಸಿಸಿಐ, ಪಿಸಿಬಿ ಮತ್ತು ಐಸಿಸಿ ನಡುವೆ ತ್ರಿಪಕ್ಷೀಯ ಒಪ್ಪಂದ ಆಗಿದೆ. ಅಂದ್ರೆ 2027 ರವರೆಗೆ ಐಸಿಸಿ ಈವೆಂಟ್ಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುತ್ತದೆ. ಅಂದ್ರೆ ಭಾರತ ಪಾಕ್ಗೆ ಹೋಗಲ್ಲ ಅಥವಾ ಪಾಕ್ ಭಾರತಕ್ಕೆ ಬರಂಗಿಲ್ಲ. ಌಂಡ್ ಈಗ ಟಿ-20 ವಿಶ್ವಕಪ್ನಲ್ಲೂ ಪಾಕ್ನ ಎಲ್ಲಾ ಪಂದ್ಯಗಳೂ ಶ್ರೀಲಂಕಾದಲ್ಲೇ ಆಯೋಜನೆಯಾಗಿವೆ. ಟೂರ್ನಿಯನ್ನ ಹೋಸ್ಟ್ ಮಾಡ್ತಿರೋದು ಭಾರತವೇ ಆಗಿದ್ರೂ ಭಾರತವೇ ಪಾಕ್ ವಿರುದ್ಧ ಪಂದ್ಯ ಆಡೋಕೆ ಲಂಕಾಗೆ ಹೋಗ್ಬೇಕು. ಅಪ್ಪಿ ತಪ್ಪಿ ಪಾಕಿಸ್ತಾನ ಫೈನಲ್ಗೆ ಬಂತಪ್ಪಾ ಅಂದ್ರೆ ಆ ಪಂದ್ಯ ಕೂಡ ಲಂಕಾದಲ್ಲೇ ನಡೆಯುತ್ತೆ. ಅಂಥಾದ್ರಲ್ಲಿ ಪಾಕಿಸ್ತಾನ ಇಷ್ಟೆಲ್ಲಾ ಡ್ರಾಮಾ ಆಡೋ ನೆಸೆಸಿಟಿನೇ ಇರ್ಲಿಲ್ಲ. ಬಟ್ ಬಾಂಗ್ಲಾನ ಮುಂದಿಟ್ಟುಕೊಂಡು ಗಾಂಚಾಲಿ ತೋರಿಸೋಕೆ ಹೋಗಿ ಈಗ ತಾನೇ ಪಲ್ಟಿ ಹೊಡೀತೀದಿ. ಅಟ್ ದಿ ಎಂಡ್ ಏನೂ ಆಗೇ ಇಲ್ಲ ಅನ್ನೋ ಥರ ಬಂದು ಪಂದ್ಯಗಳನ್ನ ಆಡಿ ಅಷ್ಟೇ ಬೇಗ ಮನೆ ಸೇರಿಕೊಳ್ತಾರೆ ಅಷ್ಟೇ.

ನೋಡಿರಿ

