ಈ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದಾ? – ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಬೇಕು?

ಮೊಟ್ಟೆ ತಿನ್ನೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೀಗಾಗಿ ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಮೊಟ್ಟೆಯನ್ನ ತಿಂತಾರೆ. ಆದ್ರೆ ಕೆಲವರು ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ತೂಕ ಹೆಚ್ಚಳವಾಗುತ್ತೆ ಎಂದು ಹೇಳುತ್ತಾರೆ. ಹಾಗಾಗಿ ಪ್ರತಿದಿನ ಮೊಟ್ಟೆ ತಿನ್ನೋದು ಒಳ್ಳೆಯದಾ? ಇದ್ರಿಂದ ಲಿವರ್ಗೆ ಎಫೆಕ್ಟ್ ಆಗುತ್ತಾ? ಫ್ಯಾಟಿ ಲಿವರ್ ಸಮಸ್ಯೆ ಇದ್ದವರು ತಿನ್ನಬಹುದಾ ಅನ್ನೋ ಗೊಂದಲ ಅನೇಕರಲ್ಲಿದೆ.
ಇದನ್ನೂ ಓದಿ: ನೀವೂ ತೂಕ ಇಳಿಸಬೇಕಾ? - ಕೊಹ್ಲಿ ಫಿಟ್ನೆಸ್ನ ಸೂಪರ್ ಟಿಪ್ಸ್!
ತಜ್ಞರ ಪ್ರಕಾರ ಮೊಟ್ಟೆ ಅತ್ಯುತ್ತಮ ಪ್ರೊಟೀನ್ ಮೂಲವಾಗಿದೆ. ಇದನ್ನ ಮಿತವಾಗಿ ಸೇವಿಸೋದು ಒಳ್ಳೆಯದೇ. ಮೊಟ್ಟೆಯಲ್ಲಿರುವ ಪ್ರೋಟೀನ್ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಮೊಟ್ಟೆ ಸೇವಿಸಿದ್ರೆ ಲಿವರ್ ನ ಆರೋಗ್ಯ ಸುಧಾರಿಸುತ್ತೆ.
ಇನ್ನು ಹೆಚ್ಚಿನ ಜನರಿಗೆ ಮೊಟ್ಟೆ ತಿಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಅನ್ನೋ ಭಯ ಇದೆ. ಆದರೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಮೊಟ್ಟೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುವುದಿಲ್ಲ. ಮೊಟ್ಟೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮೇಲೆ ಅಲ್ಪಪ್ರಮಾಣದ ಪರಿಣಾಮ ಬೀರಬಹುದು.
ಇನ್ನು ಹೊಟ್ಟೆಯ ಕೊಬ್ಬು ಮತ್ತು ತೂಕ ಇಳಿಕೆ ಮಾಡೋರಿಗೂ ಮೊಟ್ಟೆ ಉತ್ತಮ ಆಹಾರ. ಅವುಗಳ ಹೆಚ್ಚಿನ ಪ್ರೋಟೀನ್ ಅಂಶವು ಹೊಟ್ಟೆಯ ಕೊಬ್ಬು ಮತ್ತು ತೂಕ ಇಳಿಸಲು ಸಹಕಾರಿ. ಇದರಲ್ಲಿ ಪ್ರೊಟೀನ್ ಹೆಚ್ಚಿರುವುದರಿಂದ ಪದೇ ಪದೆ ಹಸಿವಾಗುವುದನ್ನು ತಡೆಯುತ್ತದೆ. ಇದು ಡಯಟ್ ಮಾಡುವವರಿಗೆ ಉತ್ತಮ ಆಹಾರ ಎನಿಸಿಕೊಂಡಿದೆ.
ಕೆಲವು ಜನರಲ್ಲಿ ಮೊಟ್ಟೆ ತಿಂದಾಗ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರಬಹುದು. ಅಂತಹ ಜನರು ಮೊಟ್ಟೆ ಬೇಯಿಸುವ ವಿಧಾನವನ್ನು ಬದಲಿಸಿ ಸೇವನೆ ಮಾಡಬಹುದು. ದಿನಕ್ಕೆ 1ರಿಂದ 2 ಇಡೀ ಮೊಟ್ಟೆಗಳನ್ನು ಸೇವಿಸಬಹುದು.

ನೋಡಿರಿ

