ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್! – ಆರ್ ಪುರದಿಂದ ಹೊಸಕೋಟೆಗೆ 16 ಕಿಮೀ ಮೆಟ್ರೋ ಡಬಲ್ ಡೆಕ್ಕರ್ ಫ್ಲೈಓವರ್!

ಸಿಲಿಕಾನ್ ಸಿಟಿ ಮಂದಿಗೆ ಗುಡ್ನ್ಯೂಸ್ ಇದೆ. ಮತ್ತೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಾಗುತ್ತಿದೆ. ಬಿಎಂಆರ್ಸಿಎಲ್ ಕೆಆರ್ ಪುರದಿಂದ ಹೊಸಕೋಟೆ ವರೆಗೂ ಸುಮಾರು 16 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ಮುಂದಾಗಿದೆ.
ಇದನ್ನೂ ಓದಿ: ಊರಿನ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತಾ? – ಯುವಕನ ಬೆನ್ನಿಗೆ ಕಚ್ಚಿದ ಗ್ರಾಮ ಪಂಚಾಯತಿ ಅಧ್ಯಕ್ಷ!
ನಮ್ಮ ಮೆಟ್ರೋ ಮಾರ್ಗ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಇದೀಗ ಕೆಆರ್ ಪುರದಿಂದ ಹೊಸಕೋಟೆಗೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ. ಈ ಮೊದಲು ಹೊಸಕೋಟೆಗೆ ವೈಟ್ ಫೀಲ್ಡ್ ನಿಂದ ಮೆಟ್ರೋ ಸಂಪರ್ಕ ಏರ್ಪಡಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ಕೆಆರ್ ಪುರದಿಂದ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಕೆಆರ್ ಪುರದಿಂದ ಹೊಸಕೋಟೆಗೆ ನಿರ್ಮಾಣ ಆಗಲಿರುವ ಈ ಮಾರ್ಗದವೂ ಮೆಟ್ರೋ ಕಮ್ ಡಬಲ್ ಡೆಕ್ಕರ್ ಫ್ಲೈಓವರ್ ಇರಲಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ.
ಸದ್ಯ ಕಾರ್ಯಾಚರಣೆ ಮಾಡುತ್ತಿರುವ ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಣೆಯ ಭಾಗವಾಗಿ ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಆಗಲಿದೆ. ಸದ್ಯ ನೇರಳೆ ಮಾರ್ಗವೂ ಚಲ್ಲಘಟ್ಟದಿಂದ ವೈಟ್ ಫೀಲ್ಡ್ (ಕಡುಗೋಡಿ) ವರೆಗೂ ಸುಮಾರು 43 ಕಿಮೀ ಸಂರ್ಪಕವನ್ನು ಕಲ್ಪಿಸುತ್ತಿದೆ.
ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ, ಸ್ಯಾಟಲೈಟ್ ರಿಂಗ್ ರೋಡ್ ಸೇರಿದಂತೆ ಬೆಂಗಳೂರಿನ ಬ್ಯುಸಿನೆಸ್ ಕಾರಿಡಾರ್ ಯೋಜನೆಗಳು ಈ ಭಾಗದಲ್ಲಿ ಬರೋದರಿಂದ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ತೀವ್ರಗೊಂಡಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್ಸಿಎಲ್ ಸಾಧ್ಯತಾ ಅಧ್ಯಯನ ವರದಿಯಲ್ಲಿ ಟ್ರಾಫಿಕ್ ವಿಶ್ಲೇಷಣೆ, ನಿಲ್ದಾಣಗಳು, ಯೋಜನೆಯ ಅಂದಾಜು ವೆಚ್ಚದ ಅಂಶಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ದೆಹಲಿಯ ಇಂಟ್ರೋಸಾಫ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೂ ಸಾಧ್ಯತಾ ವರದಿಯನ್ನು ತಯಾರಿಸುತ್ತಿದ್ದು, ವಿವರವಾದ ಯೋಜನಾ ವರದಿಯನ್ನು ನೀಡಲಿದೆ. ಈ ವೇಳೆಯೇ ದಿಪಿಆರ್ ಭಾಗವಾಗಿ ಭೂ ತಾಂತ್ರಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಸದ್ಯ ಈ ಮಾರ್ಗದಲ್ಲಿ ಸಂಚಾರ ಮಾಡುವ ಜನರು ಬೆನ್ನಿಗನಹಳ್ಳಿ ಮೆಟ್ರೋ ನಿಲ್ದಾಣವನ್ನು ಅವಲಂಭಿಸಿದ್ದಾರೆ.
ಇನ್ನು, ಕಳೆದ ಬಜೆಟ್ ನಲ್ಲಿಯೇ ಕರ್ನಾಟಕ ಸರ್ಕಾರ ಹೊಸಕೋಟೆ ಸೇರಿದಂತೆ ಮಾಧವರ-ತುಮಕೂರು ನಡುವಿನ ಗ್ರೀನ್ ಲೈನ್ (ಸುಮಾರು 59.6 ಕಿಮೀ), ಬೊಮ್ಮಸಂದ್ರ-ಆತ್ತಿಬೆಲೆ (11 ಕಿಮೀ), ಸಿಲ್ಕ್ ಇನ್ಸ್ಟಿಟ್ಯೂಟ್-ಹರೋಗಳ್ಳಿ (ಕನಕಪುರ ಮಾರ್ಗ)ಗಳಿಗೂ (24ಕಿಮೀ) ಮೆಟ್ರೋ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿತ್ತು. ಇದರೊಂದಿಗೆ ಸದ್ಯ ಸುಮಾರು 200 ಕಿಲೋ ಮೀಟರ್ ದೂರ ಮೆಟ್ರೋ ಮಾರ್ಗದ ವಿಸ್ತರಣೆಗೆ ಸಾಧ್ಯತಾ ವರದಿಗಳನ್ನು ತಯಾರಿಸಲಾಗುತ್ತಿದೆ.
ಉಳಿದಂತೆ ಚಲ್ಲಘಟ್ಟದಿಂದ ಬಿಡದಿಯವರೆಗೆ ನೇರಳೆ ಮಾರ್ಗದ ಪಶ್ಚಿಮ ವಿಸ್ತರಣೆ (13 ನಿಲ್ದಾಣಗಳೊಂದಿಗೆ 15 ಕಿಮೀ), ದೊಡ್ಡಜಾಲದಿಂದ ದೇವನಹಳ್ಳಿ (10 ಕಿಮೀ) ನೀಲಿ ಮಾರ್ಗ ವಿಸ್ತರಣೆ (10 ಕಿಮೀ), ಕಡಬಗೆರೆಯಿಂದ ತಾವರೆಕೆರೆ ಗ್ರಾಮ (6 ಕಿಮೀ) ಆರೆಂಜ್ ಲೈನ್ ವಿಸ್ತರಣೆ (6 ಕಿಮೀ), ಮತ್ತು ಕಾಳೇನರಗಿಯಿಂದ ಕಾಳೇನರಗಿಯಿಂದ ಪಾರ್ಕ್ ಮೂಲಕ ಹೊಸ 68-ಕಿಮೀ ಕಾರಿಡಾರ್, ಪಾರ್ಕ್ ಅಗ್ರೇಡಾರ್ ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಮತ್ತು ವರ್ತೂರು ಕೋಡಿ ವರೆಗೂ ವಿಸ್ತರಣೆ ಮಾಡುವ ಬಗ್ಗೆ ಪ್ರಸ್ತಾವನೆಗಳಿದೆ.

ನೋಡಿರಿ

