ಅರಮನೆ ನಗರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮಗು ಮೇಲೆ ಚಿರತೆ ದಾ*ಳಿ

ಅರಮನೆ ನಗರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮಗು ಮೇಲೆ ಚಿರತೆ ದಾ*ಳಿ

ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಮಗು ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹದೇವಸ್ವಾಮಿ ಎಂಬುವವರು ತನ್ನ ಪತ್ನಿ ಮಗುವಿನ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಈ ವೇಳೆ ದಂಪತಿ ಮಗು ಬೈಕ್ ನಿಂದ ಕೆಳಗೆ ಬಿದ್ದಿದ್ದು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಗಂಡ ತಮಾಷೆ ಮಾಡಿದ್ದೇ ತಪ್ಪಾಯ್ತಾ? – ಮಂಗ ಎಂದು ಕರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಮಾಡೆಲ್‌!

ಗಾಯಾಳುಗಳಿಗೆ ತಗಡೂರು ಸರ್ಕಾರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು  ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಒಂದು ದಿನ ಹಿಂದೆ ಗುಂಡ್ಲುಪೇಟೆ  ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವರ ಮೇಲೆ  ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ರಾತ್ರಿ 10.30 ರ ಸುಮಾರಿನಲ್ಲಿ ಜಮೀನಿನಲ್ಲಿ ಅರಿಶಿನ ಬೇಯಿಸಿ ಒಣಗಲು ಹಾಕಿರುವುದನ್ನು ನೋಡಲು ತೆರಳುತ್ತಿದ್ದಾಗ ಚಿರತೆ ಬೈಕ್ ಮೇಲೆ ಎಗರಿದೆ. ಇದರಿಂದ ಆಯತಪ್ಪಿ ಬಿದ್ದರೂ ಜೋರಾಗಿ ಹಾರನ್ ಒತ್ತಿ ಹಿಡಿದಿದ್ದರಿಂದ ಶಬ್ದಕ್ಕೆ ಚಿರತೆ ಓಡಿ ಹೊಗಿದೆ. ಕೂಡಲೇ ಅಕ್ಕಪಕ್ಕದ ಜಮೀನುಗಳವರ ನೆರವಿನಿಂದ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

Kishor KV