ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ಕೇಸ್! – ತನಿಖಾ ರಿಪೋರ್ಟ್ ಕೇಳಿ ಕಮಿಷನರ್ ಗೆ ಪತ್ರ ಬರೆದ ಡಿಜಿ ಅಲೋಕ್ ಕುಮಾರ್!

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಇದೀಗ ಮತ್ತೆ ಜೈಲಿನಲ್ಲಿ ನಟ ದರ್ಶನ್ ರಾಜಾತಿಥ್ಯ ಕೇಸ್ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ತನಿಖಾ ರಿಪೋರ್ಟ್ ನೀಡುವಂತೆ ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್ ಸಿಟಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಊರಿನ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತಾ? – ಯುವಕನ ಬೆನ್ನಿಗೆ ಕಚ್ಚಿದ ಗ್ರಾಮ ಪಂಚಾಯತಿ ಅಧ್ಯಕ್ಷ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗಿರುವ ಫೋಟೋ ವೈರಲ್ ಆಗಿದ್ದು, ಜೈಲಿನಲ್ಲಿ ಸಿಗರೇಟ್ ಸೇದುವುದು, ರೌಡಿಗಳ ಜೊತೆ ಕುಳಿತು ಹರಟೆ ಹೊಡೆಯುವಂತಹ ಸೌಲಭ್ಯಗಳನ್ನು ಅಧಿಕಾರಿಗಳು ಒದಗಿಸಿದ್ದರು. ಜೈಲಾಧಿಕಾರಿಗಳ ಈ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ 7ಕ್ಕೂ ಹೆಚ್ಚು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಈ ವಿಶೇಷ ಸೌಲಭ್ಯಗಳನ್ನು ಸ್ಥಗಿತಗೊಳಿಸಿ, ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಈ ಪ್ರಕರಣದ ತನಿಖೆ ಪೂರ್ಣಗೊಂಡರೂ ಸಹ ಇನ್ನೂ ಚಾರ್ಜ್ ಶೀಟ್ ಆಗಿಲ್ಲ. ಈ ನಡುವೆ ತಮ್ಮದು ತಪ್ಪಿಲ್ಲ, ಅಮಾನತಿನಲ್ಲಿದ್ದೇವೆಂದ ಅಲೋಕ್ ಕುಮಾರ್ ಭೇಟಿ ನೀಡಿದ್ದು ಈ ಹಿನ್ನೆಲೆ ಕೇಸ್ ಹಿನ್ನಲೆ, ತನಿಖಾ ವರದಿಯಲ್ಲಿ ಏನಿದೆ ಎಂದು ರಿಪೋರ್ಟ್ ಕೇಳಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಸಿಸಿಬಿ ಟೀಂ ಹಾಗೂ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ನಡೆದಿದ್ದ ಕೇಸ್ ಪ್ರಾಸಿಕ್ಯೂಷನ್ ಪರ್ಮಿಷನ್ ಪಡೆದು ಅಕ್ರಮ ಹಾಗೂ ಭ್ರಷ್ಟಾಚಾರದಡಿ ತನಿಖೆ ನಡೆಸಲಾಗಿತ್ತು.

ನೋಡಿರಿ

