ಗಂಡ ತಮಾಷೆ ಮಾಡಿದ್ದೇ ತಪ್ಪಾಯ್ತಾ? – ಮಂಗ ಎಂದು ಕರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಮಾಡೆಲ್‌!

ಗಂಡ ತಮಾಷೆ ಮಾಡಿದ್ದೇ ತಪ್ಪಾಯ್ತಾ? – ಮಂಗ ಎಂದು ಕರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಮಾಡೆಲ್‌!

ಗಂಡ ಹೆಂಡತಿ ಅಂದ್ಮೇಲೆ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುವುದು, ತಮಾಷೆ ಮಾಡಿಕೊಂಡಿರುವುದು ಎಲ್ಲಾ ಕಾಮನ್‌. ಕೆಲವೊಮ್ಮೆ ತಮಾಷೆಯಿಂದ ಜಗಳಗಳು ಕೂಡ ಶುರುವಾಗೋದು ಇದೆ. ಇದೀಗ ಇಲ್ಲೊಂದು ಕಡೆ ಗಂಡ, ಹೆಂಡತಿಗೆ ತಮಾಷೆ ಮಾಡಿದ್ದಕ್ಕೆ ಖ್ಯಾತ ಮಾಡೆಲ್ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ಯಶ್‌ ತಾಯಿ ಬೀದಿಯಲ್ಲೇ ರಂಪಾಟ! – ಕಾಂಪೌಂಡ್ ವಿಚಾರಕ್ಕೆ ಜಮೀನು ಮಾಲೀಕನಿಗೆ ಪುಷ್ಪಾ ಧಮ್ಕಿ!

ಈ ಘಟನೆ ಉತ್ತರ ಪ್ರದೇಶದ ಲಕ್ನೋ ದಲ್ಲಿ ನಡೆದಿದೆ. ಯುವ ಮಾಡೆಲ್  ಒಬ್ಬಳು ತನ್ನ ಪತಿಯ ತಮಾಷೆಯ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನು ಸಿಂಗ್ ಮೃತಪಟ್ಟ ಮಹಿಳೆ.

‌ಅಷ್ಟಕ್ಕೂ ಆಗಿದ್ದೇನು?

ವೃತ್ತಿಯಲ್ಲಿ ಮಾಡೆಲ್ ಆಗಿದ್ದು ಆಕೆ ಸೀತಾಪುರದಲ್ಲಿರುವ ಕುಟುಂಬಸ್ಥರ ಮನೆಗೆ ಹೋಗಿ ಸಮಯ ಕಳೆದಿದ್ದರು. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಈ ಸಂವಾದದ ಸಮಯದಲ್ಲಿ, ತನ್ನು ಪತಿ ರಾಹುಲ್ ಸಿಂಗ್ “ಬಂಡಾರಿಯಾ” (ಮಂಗ) ಎಂದು ತಮಾಷೆಯಾಗಿ ಕರೆದಿದ್ದಾರೆ.  ತಮಾಷೆಗೆ ಆತ ಮಂಗ ಎಂದು ಹೇಳಿದ್ದರೂ ಆಕೆ ಇದನ್ನು ಸಿರೀಯಸ್ ಆಗಿ ತೆಗೆದುಕೊಂಡಿದ್ದಾರೆ. ಪತಿಯ ಮಾತಿನಿಂದ ಬೇಸರಗೊಂಡ ಆಕೆ ಅಲ್ಲಿಂದ ಎದ್ದು ರೂಮ್‌ಗೆ ತೆರಳಿದ್ದಾರೆ. ಸ್ಪಲ್ಪ ಹೊತ್ತಾದ ಮೇಲೆ ಸರಿಯಾಗುತ್ತಾಳೆ ಎಂದು ಯಾರೂ ತಕ್ಷಣ ಮಧ್ಯಪ್ರವೇಶಿಸಲಿಲ್ಲ. ಆದ್ರೆ, ಸುಮಾರು ಒಂದು ಗಂಟೆಯ ನಂತರ, ಊಟಕ್ಕೆ ಪದೇ ಪದೇ ಕರೆದ್ರು ಆಕೆ ರೂಮ್‌ ಡೋರ್‌ ಓಪನ್‌ ಮಾಡಿಲ್ಲ. ಹೀಗಾಗಿ  ಸಂಬಂಧಿಕರು ಆತಂಕ ಗೊಂಡಿದ್ದಾರೆ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ಹೋದಾಗ, ತನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಆಕೆ ಬ್ಯೂಟಿ ಮೇಲೆ ಅತಿಯಾದ ಕಾಳಜಿ ಹೊಂದಿದ್ದಳು. ಸೌಂದರ್ಯದ ಬಗ್ಗೆ ಕಮೆಂಟ್‌ ಮಾಡಿದ್ರೆ ಆಕೆ ಸಹಿಸಿಕೊಳ್ಳುತ್ತಿರಲಿಲ್ಲ ಕುಟುಂಬಸ್ಥರು ತಿಳಿಸಿದ್ದಾರೆ. ತನ್ನುವಿನ ಸಹೋದರಿ ಅಂಜಲಿ, ತನ್ನ ಸಹೋದರಿ ತುಂಬಾ ಸೂಕ್ಷ್ಮಳಾಗಿದ್ದಳು, ವಿಶೇಷವಾಗಿ ವೃತ್ತಿಜೀವನ ಮತ್ತು ಸೌಂದರ್ಯದ ಬಗ್ಗೆ ಆಕೆ ಅತೀವ ಕಾಳಜಿ ಹೊಂದಿದ್ದಳು ಎಂದು ನೋವು ವ್ಯಕ್ತಪಡಿಸಿದ್ದಾರೆ.

ಈ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸ ಲಾಗಿದೆ. ಪ್ರಾಥಮಿಕ ಸಂಶೋಧನೆಗಳು ಭಾವನಾತ್ಮಕ ಯಾತನೆಯಿಂದ ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ ಎಂದು ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ತಿವಾರಿ ಹೇಳಿದ್ದಾರೆ.

Shwetha M