ನೀವೂ ತೂಕ ಇಳಿಸಬೇಕಾ? - ಕೊಹ್ಲಿ ಫಿಟ್‌ನೆಸ್‌ನ ಸೂಪರ್ ಟಿಪ್ಸ್!

ಇತ್ತೀಚೆಗೆ ತೂಕ ಹೆಚ್ಚಾಗೋದು ಕಾಮನ್ ಆಗಿದೆ. ತೂಕ ಇಳಿಸೋದು ಹೇಗೆ ಅನ್ನೋದು ಅನೇಕರ ಚಿಂತೆ. ಏನ್ ಮಾಡಿದ್ರೂ ತೂಕ ಇಳಿತಾ ಇಲ್ಲ ಅನ್ನೋ ಡೈಲಾಗ್ ಸಾಮಾನ್ಯ ಆಗಿದೆ. ಇದೀಗ ತೂಕ ಇಳಿಸುವವರಿಗೆ ವಿರಾಟ್ ಕೊಹ್ಲಿ ನ್ಯೂಟ್ರಿಷನಿಸ್ಟ್ ಕೆಲವೊಂದು ಟಿಪ್ಸ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನನ್ನು ರಕ್ಷಿಸಿದ್ದಕ್ಕೆ ಧನ್ಯವಾದಗಳು! – ಕಿಚ್ಚ ಸುದೀಪ್ ಬಗ್ಗೆ ರಕ್ಷಿತಾ ಭಾವುಕ ಪೋಸ್ಟ್!
ಹೌದು, ಭಾರತದ ಸೆಲೆಬ್ರಿಟಿ ಸ್ಫೋರ್ಟ್ಸ್ ನ್ಯೂಟ್ರಿಷನಿಸ್ಟ್ ಹಾಗೂ ಕ್ವಾ ನ್ಯೂಟ್ರಿಷನ್ ಸಂಸ್ಥಾಪಕ ರಯಾನ್ ಫೆರ್ನಾಂಡೋ ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ ಮಾಡೋದಿಕ್ಕೆ ಹೇಳಿದ್ದಾರೆ. ಅದೇನಂದ್ರೆ ತೂಕ ಇಳಿಸಲು ಟ್ರೈ ಮಾಡೋರು ಒಂದು ತಿಂಗಳು ಆಹಾರ ಕ್ರಮಗಳನ್ನ ಗಮನಿಸಬೇಕು. 30 ದಿನಗಳ ಫುಡ್ ಚಾರ್ಟ್ ರೆಡಿ ಮಾಡಬೇಕು. ಆ 30 ದಿನ ಏನು ತಿನ್ಬೇಕು. ಏನು ತಿನ್ಬಾರ್ದು ಅನ್ನೋದನ್ನ ಪಟ್ಟಿ ಮಾಡ್ಬೇಕು. ಒಂದು ತಿಂಗಳಲ್ಲಿ. ಏನು ತಪ್ಪು ಮಾಡಿದ್ದೀರಿ ಅನ್ನೋದು ಗೊತ್ತಾಗುತ್ತೆ ಅಂದಿದ್ದಾರೆ.
ತೂಕ ಇಳಿಸುವವರು ಊಟ ಎಲ್ಲ ಬಿಟ್ಟು, ಓವರ್ ಡಯೆಟ್ ಮಾಡಬಾರದು ಎಂದು ರಯಾನ್ ಹೇಳಿದ್ದಾರೆ. ಡೈಲಿ ತಿನ್ನೋದ್ರಲ್ಲಿ 20% ಊಟವನ್ನು ಕಡಿಮೆ ಮಾಡಿ. ಹಾಗೇ ಅನಾರೋಗ್ಯಕರ ಆಹಾರ ಸೇವನೆ ಮಾಡೋದನ್ನ ನಿಲ್ಲಿಸಿ. ಇನ್ನು ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸೊಪ್ಪು, ತರಕಾರಿ, ಕಾಳು, ದ್ವಿದಳ ಧಾನ್ಯಗಳನ್ನ ಆದಷ್ಟು ಸೇವನೆ ಮಾಡಿ. ಇನ್ನು ಮೈದಾ ಕಂಟೆಂಟ್ ಇರೋ ಆಹಾರ, ಸ್ವೀಟ್ ಮತ್ತು ಎಣ್ಣೆಯಲ್ಲಿ ಕರಿದ ಆಹಾರ ಸೇವಿಸೋದನ್ನ ಆದಷ್ಟು ಕಡಿಮೆ ಮಾಡಿಬೇಕು. ಹಾಗೇ ಮಧ್ಯಾಹ್ನದ ಅಥವಾ ರಾತ್ರಿಯ ಊಟ 200 ಗ್ರಾಂಕ್ಕಿಂತ ಹೆಚ್ಚಾಗಬಾರದು. ಸಂಜೆ ಆರುವರೆ ಒಳಗೆ ರಾತ್ರಿಯ ಊಟ ಮಾಡಬೇಕು. ಇದ್ರ ಜೊತೆಗೆ ಸಾಧ್ಯವಾದಷ್ಟು ಸೈಕ್ಲಿಂಗ್ ಮಾಡೋದು, ವಾಕಿಂಗ್, ವ್ಯಾಯಾಮ ಮಾಡಬೇಕು. ಈ ಟಿಪ್ಸ್ ಫಾಲೋ ಮಾಡಿದ್ರೆ ತೂಕ ಇಳಿಸಬಹುದು ಎಂದ ರಯಾನ್ ಹೇಳಿದ್ದಾರೆ.

ನೋಡಿರಿ

