ನನ್ನನ್ನು ರಕ್ಷಿಸಿದ್ದಕ್ಕೆ ಧನ್ಯವಾದಗಳು! – ಕಿಚ್ಚ ಸುದೀಪ್‌ ಬಗ್ಗೆ ರಕ್ಷಿತಾ ಭಾವುಕ ಪೋಸ್ಟ್!‌

ನನ್ನನ್ನು ರಕ್ಷಿಸಿದ್ದಕ್ಕೆ ಧನ್ಯವಾದಗಳು! – ಕಿಚ್ಚ ಸುದೀಪ್‌ ಬಗ್ಗೆ ರಕ್ಷಿತಾ ಭಾವುಕ ಪೋಸ್ಟ್!‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆಗಿದ್ದಾರೆ. ದೊಡ್ಮನೆಯಿಂದ ಆಚೆ ಬಂದ್ಮೇಲೆ ರಕ್ಷಿತಾ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದುಕಾರ್ಯಕ್ರಮ, ಇಂಟರ್ವ್ಯೂಗಳಲ್ಲಿ ಭಾಗವಹಿಸುತ್ತಿದ್ದಾಳೆ. ಇವೆಲ್ಲದ್ರ ನಡುವೆ ರಕ್ಷಿತಾ ಶೆಟ್ಟಿ ಕಿಚ್ಚ ಸುದೀಪ್‌ಗೆ ಭಾವುಕ ಪತ್ರ ಬರೆದಿದ್ದಾಳೆ. ಇದನ್ನ ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಮಾಡಿದ್ದಾಳೆ.

ಇದನ್ನೂ ಓದಿ: ಬಾಲಕನಿಗೆ ಮನಬಂದಂತೆ ಥಳಿಸಿದ ಶಿಕ್ಷಕಿ! – ಮನೆಯಲ್ಲಿ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ ಎಂದು ಧಮ್ಕಿ!

ಬಿಗ್‌ಬಾಸ್‌ ಮನೆಯಲ್ಲಿರುವಾಗ ರಕ್ಷಿತಾ ಶೆಟ್ಟಿ ತಪ್ಪು ಮಾಡಿದ್ರೆ ಕಿಚ್ಚ ಸುದೀಪ್‌ ಬುದ್ದಿವಾದ ಹೇಳ್ತಿದ್ರು. ಚೆನ್ನಾಗಿ ಆಟ ಆಡ್ತಿದ್ದಾಗ ಹೊಗಳುತ್ತಿದ್ರು. ಇನ್ನು ಫಿನಾಲೆ ದಿನವೂ ನೀವು ನನಗೆ ತುಂಬಾ ಸಪೋರ್ಟ್‌ ಮಾಡಿದ್ರಿ. ತಂದೆ ಸ್ಥಾನದಲ್ಲಿ ನಿಂತು ಬುದ್ದಿವಾದ ಹೇಳಿದ್ರು. ನನಗೆ ಮುಂದೆಯೂ ಸಪೋರ್ಟ್‌ ಮಾಡ್ತೀರಾ ಎಂದು ಕೇಳಿದ್ರು. ಸುದೀಪ್‌ ಕೂಡ ಸಪೋರ್ಟ್‌ ಮಾಡ್ತೀನಿ ಎಂದಿದ್ದರು. ಇದೀಗ ರಕ್ಷಿತಾ ಶೆಟ್ಟಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಬಗ್ಗೆ ಹೇಳಿದ್ದೇನು?

ಕೆಲವು ವ್ಯಕ್ತಿಗಳು ಕೇವಲ ಮಾರ್ಗದರ್ಶನವನ್ನಷ್ಟೇ ನೀಡುವುದಿಲ್ಲ… ಇಡೀ ಜಗತ್ತು ನಿಮ್ಮನ್ನು ಪ್ರಶ್ನೆ ಮಾಡುವಾಗ ಅವರು ನಿಮ್ಮ ಪರವಾಗಿ ನಿಲ್ಲುತ್ತಾರೆ. ಸುದೀಪ್ ಸರ್, ಈ ಬಿಗ್ ಬಾಸ್ ಕನ್ನಡ ಸೀಸನ್‌ 12 ಶೋ ಪ್ರಯಾಣದ ಉದ್ದಕ್ಕೂ ನೀವು ನನಗೆ ತಂದೆಯ ಸಮಾನವಾಗಿದ್ದೀರಿ. ನಾನು ಸರಿಯಾಗಿದ್ದಾಗ, ಕೋಟಿಗಟ್ಟಲೆ ಜನರ ಮುಂದೆ ನೀವು ನನಗಾಗಿ ದೃಢವಾಗಿ ನಿಂತಿರಿ. ನಾನು ಏನಾದರೂ ಒಳ್ಳೆಯದನ್ನು ಮಾಡಿದಾಗ, ಹೆಮ್ಮೆಯಿಂದ ನನ್ನನ್ನು ಪ್ರೋತ್ಸಾಹಿಸಿದಿರಿ. ಹಾಗೆಯೇ ನಾನು ತಪ್ಪು ಮಾಡಿದಾಗ, ಒಬ್ಬ ನಿಜವಾದ ಹಿತೈಷಿಯಂತೆ ಪ್ರಾಮಾಣಿಕವಾಗಿ, ಕಠಿಣವಾಗಿ, ಆದರೆ ಅಷ್ಟೇ ಕಾಳಜಿಯಿಂದ ನನ್ನನ್ನು ತಿದ್ದಿದ್ದೀರಿ.

ನನಗೇ ನಾನು ಶತ್ರುವಾದ ಕ್ಷಣಗಳಿದ್ದವು, ನನ್ನ ವರ್ತನೆಯೇ ನನಗೆ ವಿರುದ್ಧವಾಗಿ ಕೆಲಸ ಮಾಡಿದ ಸಮಯವೂ ಇತ್ತು. ಆ ಸಂದರ್ಭದಲ್ಲಿ ನನ್ನ ಕಣ್ಣಲ್ಲಿ ಕಣ್ಣಿಟ್ಟು, “ರಕ್ಷಿತಾ, ನೀನು ಇದಕ್ಕಿಂತಲೂ ಬಲಿಷ್ಠಳು” ಎಂದು ಸತ್ಯವನ್ನು ಹೇಳಿದ್ದಿರಿ. ನಿಮ್ಮ ಆ ಪ್ರಾಮಾಣಿಕ ಮಾರ್ಗದರ್ಶನ ನನ್ನನ್ನು ಬದಲಿಸಿದೆ.

ಬಿಗ್ ಬಾಸ್‌ನಲ್ಲಿ ಮೊದಲ ರನ್ನರ್ ಅಪ್ ಆಗಿದ್ದು ಕೇವಲ ನನ್ನ ಸಾಧನೆಯಲ್ಲ. ಅದರಲ್ಲಿ ನಿಮ್ಮ ಶ್ರಮ, ಬೆಂಬಲ ಮತ್ತು ನನ್ನ ಮೇಲಿದ್ದ ನಿಮ್ಮ ನಂಬಿಕೆಯೂ ಅಡಗಿದೆ. ಇಂದು ನಾನು ಇಲ್ಲಿ ನಿಂತಿದ್ದೇನೆ ಎಂದರೆ, ನನಗೆ ನಿಮ್ಮ ಅವಶ್ಯಕತೆ ಅತ್ಯಂತ ಹೆಚ್ಚಿದ್ದಾಗ ನೀವು ನನ್ನ ಪಕ್ಕದಲ್ಲಿ ನಿಂತಿದ್ದೇ ಕಾರಣ.

ನನ್ನನ್ನು ರಕ್ಷಿಸಿದ್ದಕ್ಕೆ, ಬೆಂಬಲಿಸಿದ್ದಕ್ಕೆ, ಒಬ್ಬ ತಂದೆಯಂತೆ ನನ್ನನ್ನು ಕಾಳಜಿಯಿಂದ ನಡೆಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ನೀವು ನನಗಾಗಿ ಮಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಕೃತಜ್ಞತೆ ಮತ್ತು ಪ್ರೀತಿಯನ್ನು ನಾನು ಎಂದೆಂದಿಗೂ ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ ಎಂದು ಬರೆದಿದ್ದಾರೆ.

Shwetha M