ಸಂಜುಗೆ ತವರಿನ ಭವಿಷ್ಯ – ಒಲಿಯುತ್ತಾ ಉರುಳುತ್ತಾ?
ವರ್ಲ್ಡ್ ಕಪ್ ಮೇನಿಯಾ ತೊಲಗುತ್ತಾ?

ಸಂಜುಗೆ ತವರಿನ ಭವಿಷ್ಯ – ಒಲಿಯುತ್ತಾ ಉರುಳುತ್ತಾ?ವರ್ಲ್ಡ್ ಕಪ್ ಮೇನಿಯಾ ತೊಲಗುತ್ತಾ?

ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡಿದ್ದ ಟೀಂ ಇಂಡಿಯಾ 4ನೇ ಪಂದ್ಯದಲ್ಲಿ ಬೇಡದೇ ಇರೋ ಪ್ರಯೋಗ ಮಾಡಿ ಸೋಲು ಕಂಡಿತ್ತು.   ಈಗ ಸರಣಿಯ ಕೊನೇ ಪಂದ್ಯಕ್ಕೆ ಸಿದ್ಧವಾಗಿದೆ. ಶನಿವಾರ ತಿರುವನಂತಪುರದಲ್ಲಿ 5ನೇ ಮ್ಯಾಚ್ ನಡೆಯಲಿದ್ದು ಮಸ್ಟ್ ಌಂಡ್ ಶುಡ್ ಈ ಮ್ಯಾಚ್ ಗೆಲ್ಲಲೇಬೇಕಿದೆ. ವಿಕ್ಟರಿ ಟ್ರ್ಯಾಕ್​ನಲ್ಲೇ ವಿಶ್ವಕಪ್​ಗೆ ಕಾಲಿಡಬೇಕು. ಹಾಗೇ ಭಾರತಕ್ಕೆ ಈ ಪಂದ್ಯ ಗೆಲ್ಲೋದು ಎಷ್ಟು ಮುಖ್ಯನೋ ಅದಕ್ಕಿಂತ ಜಾಸ್ತಿ ಸಂಜು ಸ್ಯಾಮ್ಸನ್ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ. ಕಳೆದ ನಾಲ್ಕೂ ಪಂದ್ಯಗಳಲ್ಲೂ ನಿರಾಸೆ ಮೂಡಿಸಿರೋ ಸಂಜು ಐದನೇ ಮ್ಯಾಚ್​ನಲ್ಲಾದ್ರೂ ಕಂ ಬ್ಯಾಕ್ ಮಾಡ್ಬೇಕು.

ಇದನ್ನೂ ಓದಿ  : ಪಾಕ್ ಷರತ್ತಿಗೆ ಬೆಲೆ ಇದ್ಯಾ? – ICC ಮುಂದೆ ಹುಚ್ಚು ಡಿಮ್ಯಾಂಡ್

ಭಾರತದ ಟಿ-20ಐ ಟೀಂ ಅಂದ್ರೆ ಜಗತ್ತಿನಲ್ಲೇ ದಿ ಬೆಸ್ಟ್ ಌಂಡ್ ನಂಬರ್ 1 ಟೀಂ.. ನಂಬರ್ 1 ಬ್ಯಾಟರ್, ನಂಬರ್ 1 ಬೌಲರ್ ಕೂಡ ಭಾರತದವ್ರೇ. ಅದೆಲ್ಲಕ್ಕಿಂತ ಹೆಚ್ಚಾಗಿ 2024ರ ಟಿ-20 ವಿಶ್ವಕಪ್ ಬಳಿಕ ಒಂದೇ ಒಂದು ದ್ವಿಪಕ್ಷೀಯ ಸರಣಿ ಸೋತಿಲ್ಲ. ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನೇ ಬಿಟ್ಟುಕೊಟ್ಟಿಲ್ಲ. ಸತತ 13 ಸಿರೀಸ್​ಗಳನ್ನ ಗೆದ್ದು ಬೇಟೆಗಾರರ ಬೇಟೆಯಾಡೋ ರಣಬೇಟೆಗಾರರಂತೆ ವಿಶ್ವಕಪ್ ಅಖಾಡಕ್ಕೆ ಕಾಲಿಡ್ತಿದ್ದಾರೆ. 10ನೇ ಆವೃತ್ತಿಯ ಚುಟುಕು ಮಾದರಿಯಲ್ಲಿ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಆದ್ರೆ ವಿಶ್ವಕಪ್ ಹೊಸ್ತಿಲಲ್ಲಿ ಮ್ಯಾನೇಜ್​ಮೆಂಟ್ ಮತ್ತು ಅಭಿಮಾನಿಗಳಿಗೆ ಸಂಜು ಸ್ಯಾಮ್ಸನ್ ಅವ್ರ ಕಳಪೆ ಫಾರ್ಮೇ ದೊಡ್ಡ ತಲೆಬಿಸಿಯಾಗಿದೆ. ಮಾಜಿ ಕ್ರಿಕೆಟಿಗರು ಆಲ್ಟರ್ನೇಟಿವ್ ಸಜೇಷನ್ಸ್ ಕೊಡ್ತಿದ್ದಾರೆ. ತಿರುವನಂತಪುರದಲ್ಲಿ ಸರಣಿಯ ಕೊನೇ ಪಂದ್ಯ ನಡೆಯಲಿದ್ದು ಸಂಜು ಪಾಲಿಗೆ ಒಂಥರಾ ಫ್ಯೂಚರ್ ಡಿಸೈಡರ್​ನಂತೆಯೇ ಕಾಣ್ತಿದೆ.

ಮೊದಲ ಬಾರಿಗೆ ತವರಿನಲ್ಲಿ ಸಂಜು ಅಂತಾರಾಷ್ಟ್ರೀಯ ಪಂದ್ಯ!

ನ್ಯೂಜಿಲೆಂಡ್‌ನ ವಿರುದ್ಧದ ಟಿ-20ಐ ಸರಣಿಯ ಕೊನೇ ಪಂದ್ಯ ಜನವರಿ 31 ರಂದು ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಜು ಸಂಜು ಪಾಲಿಗೂ ತುಂಬಾನೇ ಸ್ಪೆಷಲ್. ಯಾಕಂದ್ರೆ ಇದೇ ಮೊದಲ ಬಾರಿಗೆ ತಮ್ಮ ತವರು ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಸರಣಿಯಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲೂ ಸಂಜು ಕಡೆಯಿಂದ ಕನ್ವಿನ್ಸಿಂಗ್ ಬ್ಯಾಟಿಂಗ್ ಬಂದಿಲ್ಲ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಆಡಿಸಬೇಡಿ ಎನ್ನುವಂಥ ಕೂಗು ಎದ್ದಿದೆ. ಪ್ರೆಶರ್​ನಲ್ಲಿರೋ ಸಂಜು ವಿಶ್ವಕಪ್ ಆಡ್ಬೇಕು ಫಾರ್ಮ್ ಕಂಡುಕೊಳ್ಬೇಕು ಅಂದ್ರೆ ಇದು ಬೆಸ್ಟ್ ಚಾಯ್ಸ್. ತಿರುವನಂತಪುರಂ ಕ್ರೀಡಾಂಗಣದಲ್ಲಿ ಸಂಜು ಬಾಲ್ಯದಿಂದಲೂ ಆಡುತ್ತಿದ್ದು, ಈಗ ಭಾರತೀಯ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ. ಈ ಪಂದ್ಯಕ್ಕಾಗಿ ಲೋಕಲ್ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.  ಪಂದ್ಯದ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ ಆಗಿವೆ. ಕ್ಯೂರಿಯಾಸಿಟಿ ಬಿಲ್ಡ್ ಆಗಿದ್ದು ಸಂಜು ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಮುಖ್ಯ ಆಗುತ್ತೆ.

4 ಪಂದ್ಯ.. 40 ರನ್ಸ್.. ಮತ್ತೆ ಫೇಲ್ಯೂರ್ ಆದ್ರೆ ಗೇಟ್ ಪಾಸ್?

ಕಿವೀಸ್ ವಿರುದ್ಧದ ಕಳೆದ 4 ಪಂದ್ಯಗಳಲ್ಲೂ ಓಪನರ್ ಆಗಿ ಸಂಜು ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿಲ್ಲ.   ಕೇವಲ 40 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು 10 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ 6 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಡಕ್ ಔಟ್.. ನಾಲ್ಕನೇ ಪಂದ್ಯದಲ್ಲಿ 24 ರನ್. ಸೋ ಈ ನಂಬರ್​ಗಳನ್ನ ನೋಡ್ದಾಗ ಅವ್ರು ಪ್ರೆಶರ್​ನಲ್ಲಿ ಇದ್ದಾರಾ ಅನ್ನೋ ಪ್ರಶ್ನೆ ಮೂಡ್ತಿದೆ. ಌಂಡ್ ಅವ್ರು ಔಟ್ ಆಗ್ತಿರೋ ರೀತಿ ನೋಡ್ದಾಗಲೂ ಕನ್ವಿನ್ಸಿಂಗ್ ಆಗಿ ಕಾಣ್ತಿಲ್ಲ. ಹೀಗಾಗೇ ಸರಣಿಯ ಕೊನೇ ಪಂದ್ಯವು ಟಿ20 ವಿಶ್ವಕಪ್‌ಗೂ ಮುನ್ನ ಕೊನೇ ಅವಕಾಶ ಆಗಬಹುದು. ಯಾಕಂದ್ರೆ ಈ ಮ್ಯಾಚಲ್ಲಿ ಬಿಗ್ ಸ್ಕೋರ್ ಬಂದ್ರೆ ವಿಶ್ವಕಪ್​ನಲ್ಲಿ ಕಣಕ್ಕಿಳೀಬಹುದು. ಇಲ್ದಿದ್ರೆ ಅವ್ರ ಭವಿಷ್ಯ ವಿಶ್ವಕಪ್​ ಮೂಲಕವೇ ಕೊನೆಯಾಗಬಹುದು. ಅದೂ ಅಲ್ದೇ ಪ್ರತೀ ಸಲ ಸಂಜು ವಿಶ್ವಕಪ್ ಟೀಮ್​ನಲ್ಲಿ ಇರ್ತಾನೇ ಇರ್ಲಿಲ್ಲ. ಬಟ್ ಈಗ ರೈಟ್ ಟೈಮಲ್ಲಿ ರೈಟ್ ಟೀಮ್​ನಲ್ಲಿದ್ದಾರೆ. 2023ರ ವಿಶ್ವಕಪ್ ವೇಳೆ ಟಿ-20 ಟೀಮ್​ನಲ್ಲಿದ್ರು. ಸೋ ಭಾರತ ತಂಡಕ್ಕೆ ಸೆಲೆಕ್ಟ್ ಮಾಡಿರಲಿಲ್ಲ. ಆಮೇಲೆ 2024ರ ವಿಶ್ವಕಪ್ ವೇಳೆಗೆ ಏಕದಿನ ತಂಡದಲ್ಲಿದ್ರು. ಹೀಗಾಗಿ ಅಲ್ಲೂ ಚಾನ್ಸ್ ಸಿಕ್ಕಿರಲಿಲ್ಲ. ಈಗ ಟಿ-20 ಟೀಮ್​ನಲ್ಲಿದ್ದಾರೆ. ವಿಶ್ವಕಪ್ ಕೂಡ ಬಂದಿದೆ. ಅವಕಾಶವೂ ಸಿಕ್ಕಿದೆ. ಹೀಗಿದ್ರೂ ತಮ್ಮದೇ ತಪ್ಪಿಂದ ಎಡವುತ್ತಿದ್ದಾರೆ.

ಫುಟ್ ವರ್ಕ್ ಕಳಪೆ.. ಸ್ಪಿನ್ನರ್ಸ್ ವಿರುದ್ಧ ಸಂಜು ಫೇಲ್!

ಇನ್ನು ಸಂಜು ವೀಕ್​ನೆಸ್ ಅಂದ್ರೆ ಬ್ಯಾಟಿಂಗ್ ವೇಳೆ ಕಾನ್ಫಿಡೆಂಟಾಗಿ ಕಾಣ್ತಿಲ್ಲ. ಎಡಗೈ ಸ್ಪಿನ್ನರ್‌ಗಳನ್ನ ಫೇಸ್ ಮಾಡಲು ಕಷ್ಟ ಪಡ್ತಿದ್ದಾರೆ. ಸ್ವಿಂಗ್ ಆಗಿ ಬರುವ ಬಾಲ್​ಗಳನ್ನ ಕರೆಕ್ಟ್ ಟೈಮಲ್ಲಿ ಜಡ್ಜ್ ಮಾಡೋಕೆ ಆಗ್ದೇ ಕ್ಲೀನ್ ಬೌಲ್ಡ್ ಆಗ್ತಿದ್ದಾರೆ. ಌಂಡ್ ಏರಿಯಲ್ ರೂಟ್ ತಗೊಂಡ್ರೂ ಕೂಡ ಅನ್ಕೊಂಡ ಮಟ್ಟಿಗೆ ಕನೆಕ್ಟ್ ಆಗ್ತಿಲ್ಲ. ಬಾಲ್ ರೀಚ್ ಆಗ್ತಿಲ್ಲ. ನೇರವಾಗಿ ಫೀಲ್ಡರ್​ಗಳ ಕೈ ಸೇರ್ತಿದೆ. ಫುಟ್‌ವರ್ಕ್ ಕೂಡ ತೀರಾ ಕಳಪೆಯಾಗಿದೆ. ಇನ್ನು ವಿಕೆಟ್ ಕೀಪಿಂಗ್​ನಲ್ಲಿ ಕ್ವಿಕ್​ನೆಸ್ ಕಮ್ಮಿಯಾಗಿದೆ. ಕ್ಯಾಚ್​ಗಳನ್ನ ಮಿಸ್ ಮಾಡ್ತಿದ್ದಾರೆ.. ರನ್​ಔಟ್ ಅವಕಾಶಗಳೂ ತಪ್ಪುತ್ತಿವೆ. ಹೀಗಾಗೇ ಅವಕಾಶಗಳು ಸಿಗದೇ ಇದ್ದಾಗ ಜಸ್ಟೀಸ್ ಫಾರ್ ಸಂಜು ಅಂತಾ ಧ್ವನಿ ಎತ್ತಿದ್ದ ಅದೇ ಫ್ಯಾನ್ಸ್ ಈಗ ತಿರುಗಿ ಬಿದ್ದಿದ್ದಾರೆ. ಮಾಜಿ ಕ್ರಿಕೆಟರ್ಸ್ ಕೂಡ ಸಂಜುಗೆ ಯಾಕಿಷ್ಟು ಚಾನ್ಸ್ ಅಂತಿದ್ದಾರೆ.

ಸಂಜು ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರ ಪರ-ವಿರೋಧ!

2024ರಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಹೊಡೆದಿದ್ದ ಸಂಜು 2025ರಲ್ಲಿ ಕಂಪ್ಲೀಟ್ ಡಲ್ ಆಗಿದ್ರು. ಕಳೆದ ವರ್ಷದಿಂದ 20ಕ್ಕಿಂತ ಕಡಿಮೆ ಆವರೇಜ್​ನಲ್ಲಿ ರನ್ಸ್ ಬಂದಿದೆ. ಹೀಗಾಗಿ 5ನೇ ಪಂದ್ಯಕ್ಕೆ ಸಂಜುಗೆ ಅವಕಾಶ ಕೊಡೋದೇ ಬೇಡ ಅಂತಾ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.   ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಅವರನ್ನು ಪಿಕ್ ಮಾಡುವಂತೆ ಮ್ಯಾನೇಜ್​ಮೆಂಟ್​ನ ಒತ್ತಾಯಿಸಿದ್ದಾರೆ. ಎರಡೂವರೆ ವರ್ಷಗಳ ಬಳಿಕ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ಕಿಶನ್ ಬ್ಯಾಟಿಂಗ್ ಅಬ್ಬರ ಚೆನ್ನಾಗಿದ್ದು ಅವ್ರನ್ನೇ ಆಡ್ಸಿ.. ಕಿಶನ್ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು ಅವ್ರ ಕೈಗೇ ಗ್ಲೌಸ್ ಕೊಡಿ ಎಂದಿದ್ದಾರೆ. ಮತ್ತೊಂದೆಡೆ ಯುಜ್ವೇಂದ್ರ ಚಹಾಲ್ ಕೂಡ ಸಂಜು ಫಾರ್ಮ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮೂರು ಅಥವಾ ನಾಲ್ಕು ವೈಫಲ್ಯಗಳನ್ನ ಒಪ್ಪಿಕೊಳ್ಳೋದು ಕಷ್ಟ ಎಂದಿದ್ದಾರೆ. ಪ್ರೆಶರ್ ಇದೆ ಅಂತಾ ಸಂಜು ನೆಪ ಹೇಳಬಾರದು. ಅವ್ರ ಹಿಂದೆಯೇ ಇರುವಂಥ ಇಶಾನ್ ಕಿಶನ್ ಸ್ಟ್ರಾಂಗ್ ಆಗ್ತಿದ್ದಾರೆ. ಸಂಜು ಸ್ಯಾಮ್ಸನ್ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಐಪಿಎಲ್​ನಲ್ಲಿ ಮಿಡಲ್ ಆರ್ಡರ್​ನಲ್ಲೇ ಆರಂಭ ಮಾಡಿದ್ರು. ಆ ನಂತ್ರ ಓಪನರ್ ಆದ್ರು. 10-12 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ, ಪ್ರೆಶರ್ ಅನ್ನೋದು ಒಂದು ನೆಪವಾಗಬಾರದು. ಈಗಾಗ್ಲೇ ನ್ಯೂಜಿಲೆಂಡ್ ವಿರುದ್ಧ 4 ಅವಕಾಶ ಸಿಕ್ಕಿವೆ. ಒಂದು ಅಥವಾ 2 ಫೇಲ್ಯೂರ್ ಒಪ್ಪಿಕೊಳ್ಳಬಹುದು.. ಮೂರು ಅಥವಾ 4 ಪಂದ್ಯಗಳಲ್ಲಿ ಅಲ್ಲ. ಬ್ಯಾಕಪ್ ಆಗಿರುವ ಕಿಶನ್​ ಕೂಡ ಕಾಯ್ತಿದ್ದಾರೆ ಎಂದಿದ್ದಾರೆ. ಹೀಗಿದ್ರೂ ಮಾಜಿ ಆಟಗಾರ ಸುರೇಶ್ ರೈನಾ ಸಂಜು ಬೆನ್ನಿಗೆ ನಿಂತಿದ್ದಾರೆ. ಸೂರ್ಯಕುಮಾರ್ ಫೇಲ್ಯೂರ್ ಆದಾಗ್ಲೂ ಸಾಕಷ್ಟು ಅವಕಾಶ ಕೊಟ್ಟಿದ್ದಾರೆ. ಈಗ ಸಂಜು ಕೂಡ ಹೋರಾಟ ಮಾಡುತ್ತಿದ್ದಾರೆ. ಅವಕಾಶಗಳು ಹೆಚ್ಚಿಗೆ ಸಿಕ್ಕಾಗ ಅವ್ರೂ ಕಂ ಬ್ಯಾಕ್ ಮಾಡ್ತಾರೆ. ಬಿಸಿಸಿಐ ಬಾಸ್​ಗಳು ಸೂರ್ಯನ ಜೊತೆ ನಿಂತಂತೆ ಸಂಜು ಜೊತೆಗೂ ನಿಲ್ಲಬೇಕು ಎಂದಿದ್ದಾರೆ. ಇದೇ ವೇಳೆ ಸಂಜು ಕ್ಲಾಸಿಕ್ ಬ್ಯಾಟರ್.. ಪೇಸ್ ಮತ್ತು ಸ್ಪಿನ್ ಎರಡನ್ನೂ ಸಮರ್ಥವಾಗಿ ಎದುರಿಸ್ತಾರೆ. ಅವ್ರ ಈ ಸಾಮರ್ಥ್ಯವೇ ಭಾರತ ತಂಡಕ್ಕೆ ಆಸ್ತಿಯನ್ನಾಗಿ ಮಾಡುತ್ತೆ ಎಂದಿದ್ದಾರೆ. ಅಂದ್ರೆ ಸಂಜು ಕಂ ಬ್ಯಾಕ್ ಮಾಡೇ ಮಾಡ್ತಾರೆ ಅನ್ನೋ ಭರವಸೆ ಅವ್ರದ್ದು. ಸಂಜು ಬಗ್ಗೆ ಇಲ್ಲಿ ಯಾರು ಎಷ್ಟೋ ಪರ-ವಿರೋಧ ಮಾಡಿದ್ರೂ ತಂಡದಲ್ಲಿ ಉಳೀಬೇಕು ಬಿಡಬೇಕು ಅನ್ನೋದನ್ನ ಅವ್ರ ಬ್ಯಾಟಿಂಗ್ ಡಿಸೈಡ್ ಮಾಡುತ್ತೆ. ಸತತ ನಾಲ್ಕು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಬರದೇ ಇದ್ರೂ ಅಟ್​ಲಿಸ್ಟ್ 5ನೇ ಪಂದ್ಯದಲ್ಲಿ ಬಂದ್ರೆ ವಿಶ್ವಕಪ್​ನಲ್ಲೂ ಓಪನರ್ ಸ್ಥಾನ ಗಟ್ಟಿಯಾಗುತ್ತೆ. ಇಲ್ಲದೇ ಇದ್ರೆ ಬಿಸಿಸಿಐ ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ಬೇಕಿದ್ರೂ ತಗೊಳ್ಬೋದು. ಯಾಕಂದ್ರೆ ಅದು ಸರಣಿ ಅಲ್ಲ ಈ ಪಂದ್ಯ ಇಲ್ದಿದ್ರೆ ನೆಕ್ಸ್​ಟ್ ಮ್ಯಾಚ್ ಗೆಲ್ತೀವಿ ಅನ್ನೋಕೆ. ಪ್ರತೀ ಪಂದ್ಯವನ್ನೂ ಮಸ್ಟ್ ವಿನ್ ಮ್ಯಾಚ್​ನಂತೆಯೇ ಗೆಲ್ಲಬೇಕು. ಹೀಗಾಗಿ ತವರಿನ ಭಾಷ್ಯ ಸಂಜು ಪಾಲಿಗೆ ಏನಾಗುತ್ತೆ.. ಒಲಿಯುತ್ತೋ ಅಥವಾ ಉರುಳುತ್ತೋ ನೋಡ್ಬೇಕು.

Shantha Kumari