ಮದುವೆ ಮಂಟಪಕ್ಕೆ ಹೋಗುವಾಗ ವರನಿಗೆ ಚೂರಿ ಇರಿತ!‌ – ಯುವತಿ ಮಾಜಿ ಬಾಯ್‌ಫ್ರೆಂಡ್‌ನಿಂದ ಅಟ್ಯಾಕ್‌?

ಮದುವೆ ಮಂಟಪಕ್ಕೆ ಹೋಗುವಾಗ ವರನಿಗೆ ಚೂರಿ ಇರಿತ!‌ – ಯುವತಿ ಮಾಜಿ ಬಾಯ್‌ಫ್ರೆಂಡ್‌ನಿಂದ ಅಟ್ಯಾಕ್‌?

ಚಾಮರಾಜನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಅಟ್ಯಾಕ್‌ ಆಗಿದೆ. ವರನಿಗೆ  ಚಾಕು ಚುಚ್ಚು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಶ್ರೀಮಂತರೇ ಈಕೆಯ ಟಾರ್ಗೆಟ್‌! – ದುಡ್ಡಿಗಾಗಿ ಪ್ರೀತಿ, ಮದುವೆ.. ಮೂವರು ಗಂಡಂದಿರಿಗೆ ಲಕ್ಷ ಲಕ್ಷ ಪಂಗನಾಮ!

ಈ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕುಣಗಳ್ಳಿ ಗ್ರಾಮದ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾದ ಯುವಕ. ಅದೃಷ್ಟವಶಾತ್ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಎಲ್. ರವೀಶ್​ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳ ಜೊತೆ ವಿವಾಹ ನಿಶ್ಚಯವಾಗಿತ್ತು. 6 ತಿಂಗಳ ಹಿಂದೆ ಎಂಗೇಜ್ಮೆಂಟ್ ನಡೆದಿತ್ತು. ಜ.30 ರಂದು ಮದುವೆ ನಿಶ್ಚಯವಾಗಿದ್ದರಿಂದ, ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್​ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಹೀಗಾಗಿ ರವೀಶ್‌ ಕುಟುಂಬದವರೊಂದಿಗೆ ಕಾರಿನಲ್ಲಿ ಹಾಲ್‌ಗೆ ತೆರಳಿದ್ದರು. ಕೊಳ್ಳೇಗಾಲದ ಎಂಜಿಎಸ್​ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ರವೀಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ.  ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಘಟನೆ ಬಗ್ಗೆ ರವೀಶ್‌ ಮಾಧ್ಯಮದವರ ಜತೆ ಮಾತನಾಡಿ, 6 ತಿಂಗಳ ಹಿಂದೆಯಷ್ಟೇ ನನಗೆ ಹೊಸಅಣಗಳ್ಳಿ ಗ್ರಾಮದ ಯುವತಿಯ ಜೊತೆ ಎಂಗೇಜ್ಮೆಂಟ್ ಆಗಿತ್ತು. ಜ.30 ರಂದು ಮದುವೆ ನಿಶ್ಚಯವಾಗಿದ್ದರಿಂದ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವಾಗ ಹಿಂಬದಿಯಿಂದ ಮತ್ತೊಂದು ಕಾರಿನಲ್ಲಿ ಬಂದವರು ನನಗೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದರು. ನನ್ನ ಮೇಲೆ ಹಲ್ಲೆ ನಡೆಸಿದವರು ಯಾರೆಂದು ಗೊತ್ತಿಲ್ಲ ಎಂದು ತಿಳಿಸಿದರು. ಸದ್ಯ ವಧುವಿನ ಮಾಜಿ ಬಾಯ್ ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ರವೀಶ್ ನ ಭೇಟಿ ಮಾಡಿ  ಘಟನೆ ವಿವರ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Shwetha M