ಅಮೆಜಾನ್‌ನಿಂದ ಬಿಗ್ ಶಾಕ್ – ಉದ್ಯೋಗ ಕಡಿತ, ಬೀದಿಗೆ ಬಿದ್ದ 16,000 ಉದ್ಯೋಗಿಗಳು

ಅಮೆಜಾನ್‌ನಿಂದ ಬಿಗ್ ಶಾಕ್ – ಉದ್ಯೋಗ ಕಡಿತ, ಬೀದಿಗೆ ಬಿದ್ದ 16,000 ಉದ್ಯೋಗಿಗಳು

ಅಮೆಜಾನ್ ಈ ವಾರ ಜಾಗತಿಕ ಮಟ್ಟದಲ್ಲಿ ಸುಮಾರು 16,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ದೃಢಪಡಿಸಿದೆ. ಇದರಲ್ಲಿ ಭಾರತವೂ ಒಳಗೊಂಡಿದೆ. ಲೇಆಫ್‌ಗಳ  ಹೆಚ್ಚಿನ ಭಾಗವು ಅಮೆರಿಕದಲ್ಲಿ ನಡೆದಿದ್ದರೂ, ಭಾರತದಲ್ಲಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಂತಹ ನಗರಗಳಲ್ಲಿ ವಿವಿಧ ತಂಡಗಳಿಗೆ ಸೇರಿದ ನೂರಾರು ಉದ್ಯೋಗಿಗಳ   ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಈ ಘೋಷಣೆಯ ನಂತರ, ಕಂಪನಿಯು ತನ್ನ ಉದ್ಯೋಗಿಗಳಿಗೆ ಅಧಿಕೃತ ಇಮೇಲ್‌ಗಳ ಮೂಲಕ ಅಧಿಸೂಚನೆ ಹೊರಡಿಸಲು ಪ್ರಾರಂಭಿಸಿದೆ. ಇತ್ತೀಚಿನ ಲೇಆಫ್‌ಗಳು ಕೇವಲ ಮೂರು ತಿಂಗಳಲ್ಲಿ FAANG ಕಂಪನಿಯ ಎರಡನೇ ಪ್ರಮುಖ ಸುತ್ತಿನ ಉದ್ಯೋಗ ಕಡಿತವಾಗಿದೆ. 2025ರ ಅಂತ್ಯದ ವೇಳೆಗೆ ಈಗಾಗಲೇ ಸುಮಾರು 14,000 ಹುದ್ದೆಗಳನ್ನು ರದ್ದುಪಡಿಸಿದ್ದಕ್ಕೆ ಸೇರಿವೆ. ವಜಾ ಪ್ಯಾಕೇಜ್‌ಗಳು, ವರ್ಗಾವಣೆಯ ಅವಧಿಗಳು ಮತ್ತು ಮುಂದುವರಿದ ಪ್ರಯೋಜನಗಳನ್ನು ವಿವರಿಸುವ ಇಮೇಲ್‌ಗಳು, ಅಮೆಜಾನ್ ಉದ್ಯೋಗಿಗಳ ಇನ್‌ಬಾಕ್ಸ್‌ಗಳಲ್ಲಿ ಬರುತ್ತಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್‍ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಇದನ್ನೂ ಓದಿ: ರಾತ್ರೋರಾತ್ರಿ ಕಿಂಗ್‌ ಕೊಹ್ಲಿ ಶಾಕಿಂಗ್‌ ನಿರ್ಧಾರ! – ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟ ವಿರಾಟ್!‌

ಅಮೆಜಾನ್ ಬುಧವಾರ, ಜನವರಿ 28ರಂದು, ತನ್ನ ಚೀಫ್ ಪೀಪಲ್ ಆಫೀಸರ್ ಬೆತ್ ಗ್ಯಾಲೆಟ್ಟಿ ಬರೆದ ಬ್ಲಾಗ್ ಪೋಸ್ಟ್ ಮೂಲಕ ಲೇಆಫ್‌ಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಘೋಷಣೆಯಲ್ಲಿ, ಹೆಚ್ಚುವರಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಕಂಪನಿ ದೃಢಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ಸುಮಾರು 16,000 ಹುದ್ದೆಗಳ ಮೇಲೆ ಇದರ ಪರಿಣಾಮ ಬೀರುವುದಾಗಿ ತಿಳಿಸಿದೆ.

ಈ ಇತ್ತೀಚಿನ ಹಂತದ ಅಮೆಜಾನ್‌ನಲ್ಲಿ ನಡೆದ ಉದ್ಯೋಗ ಕಡಿತಗಳ ಸಂಖ್ಯೆ ಸುಮಾರು 30,000ಕ್ಕೆ ತಲುಪಿದ್ದು, 2023ರಲ್ಲಿ ಘೋಷಿಸಲಾದ 27,000 ಲೇಆಫ್‌ಗಳ ಸಂಖ್ಯೆಯನ್ನು ಮೀರಿಸಿದೆ.ಅಮೆಜಾನ್ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಲೇಆಫ್‌ಗಳು ಕಂಪನಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಳಗೊಳಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಸಂಘಟನಾ ಮರುಹೊಂದಾಣಿಕೆಯ ಭಾಗವಾಗಿದೆ. ಅಕ್ಟೋಬರ್‌ನಲ್ಲಿ ನಾನು ಹಂಚಿಕೊಂಡಂತೆ, ಲೇಯರ್ಸ್ ಕಡಿತಗೊಳಿಸುವುದು, ಜವಾಬ್ದಾರಿಯನ್ನು ಹೆಚ್ಚಿಸುವುದು ಮತ್ತು ಬ್ಯೂರೋಕ್ರಸಿಯನ್ನು ದೂರಮಾಡುವ ಮೂಲಕ ನಮ್ಮ ಸಂಸ್ಥೆಯನ್ನು ಬಲಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಗ್ಯಾಲೆಟ್ಟಿ ತಿಳಿಸಿದ್ದಾರೆ.

Kishor KV