ಶ್ರೀಲಂಕಾದ ಟಿ20 ಲೀಗ್ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ – ತಮೀಮ್ ರೆಹಮಾನ್ಗೆ 4 ವರ್ಷಗಳ ಜೈಲು ಶಿಕ್ಷೆ

ಶ್ರೀಲಂಕಾದ ಟಿ20 ಲೀಗ್ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೊಲಂಬೊ ಹೈಕೋರ್ಟ್ ಬಾಂಗ್ಲಾದೇಶದ ತಮೀಮ್ ರೆಹಮಾನ್ ( ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, 24 ಮಿಲಿಯನ್ ಶ್ರೀಲಂಕಾ ರೂಪಾಯಿ (ಸುಮಾರು 80 ಸಾವಿರ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ. ತಮೀಮ್ ರೆಹಮಾನ್ ಒಂದೆಡೆ ಬಾಂಗ್ಲಾದೇಶ ಮೂಲದವರಾಗಿದ್ದರೆ, ಮತ್ತೊಂದೆಡೆ ಬ್ರಿಟಿಷ್ ಪ್ರಜೆ. ಪಂದ್ಯಾವಳಿಯ ಸಮಯದಲ್ಲಿ ಬೆಟ್ಟಿಂಗ್ ವ್ಯವಸ್ಥೆ ಮಾಡಿದ್ದಾಗಿ ಮತ್ತು ಆಟಗಾರನೊಂದಿಗೆ ಫಿಕ್ಸಿಂಗ್ ಬಗ್ಗೆ ಚರ್ಚಿಸಿದ್ದಾಗಿ ತಮೀಮ್ ರೆಹಮಾನ್ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾಟರ್ಸ್ ಇಲ್ಲದೇ ಸೋತ ಭಾರತ – ವಿಶ್ವಕಪ್ ಹೊತ್ತಲ್ಲಿ ಪ್ರಯೋಗ ಯಾಕೆ?
ಶ್ರೀಲಂಕಾದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ತಮೀಮ್ ರೆಹಮಾನ್ ಅವರನ್ನು ದೋಷಿ ಎಂದು ಘೋಷಿಸಲಾಗಿದೆ. ಆಟಗಾರನ ಬಳಿ ತಮೀಮ್ ರೆಹಮಾನ್ ಮ್ಯಾಚ್ ಫಿಕ್ಸಿಂಗ್ ಆಮೀಷ ಒಡ್ಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಆಟಗಾರ ಈ ಮಾಹಿತಿಯನ್ನು ಅಧಿಕಾರಿ ಬಳಿ ಹೇಳಿದ್ದಾನೆ. ಕೂಡಲೇ ಈ ಬಗ್ಗೆ ದೂರು ದಾಖಲಿಸಿ 2024 ರಲ್ಲಿ ತಮೀಮ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು. ಕೊಲಂಬೊ ವಿಮಾನ ನಿಲ್ದಾಣದಲ್ಲಿ ದುಬೈಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ರೆಹಮಾನ್ ಅವರ ಬಂಧನವಾಗಿತ್ತು. ರೆಹಮಾನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಹಲವಾರು ವಾರಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.
ಶ್ರೀಲಂಕಾ ಪ್ರೀಮಿಯರ್ ಲೀಗ್ ಆರಂಭವಾದ ನಂತರ ಅಧಿಕಾರಿಯೊಬ್ಬರ ವಿರುದ್ಧ ಇದು ಮೊದಲ ಪ್ರಮುಖ ಕಾನೂನು ಕ್ರಮವಾಗಿದೆ. ದಂಬುಲ್ಲಾ ಥಂಡರ್ಸ್ ತಂಡದ ವ್ಯವಸ್ಥಾಪಕ ಮುಜಿಬುರ್ ರೆಹಮಾನ್ ಕೂಡ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆ ಮುಜಿಬುರ್ ರೆಹಮಾನ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ ಎಂದು ವರದಿಯಾಗಿದೆ. ಈ ತೀರ್ಪಿನೊಂದಿಗೆ, ಶ್ರೀಲಂಕಾ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ನೋಡಿರಿ

