ಮತ್ತೊಬ್ಬ ಚಾಪೆಲ್ ಆದ್ರಾ ಗಂಭೀರ್ – ಶಿಷ್ಯ ಪ್ರೇಮಕ್ಕೆ ಸೋತ ಭಾರತ
SKYಗೆ ಬೇಕಾ ಸೋಲಿನ ಪ್ರಯೋಗ?

ಟಿ-20 ವಿಶ್ವಕಪ್ಗೆ ಇನ್ನೊಂದೇ ವಾರ ಬಾಕಿ. ಇಂಥಾ ಟೈಮಲ್ಲಿ ಟೀಂ ಇಂಡಿಯಾ ಬೇಡದೇ ಇರೋ ಪ್ರಯೋಗಕ್ಕಿಳಿದಿದೆ. ಚೆನ್ನಾಗೇ ಇರೋ ಟೀಮ್ನ ಹಳಿ ತಪ್ಪಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 4ನೇ ಪಂದ್ಯದಲ್ಲಿ ತನ್ನದೇ ಎಡವಟ್ಟುಗಳಿಂದ ಪಂದ್ಯವನ್ನ ಸೋತಿದ್ದಾರೆ. ಅದ್ರಲ್ಲೂ ಗೌತಮ್ ಗಂಭೀರ್ ಅಂತೂ ಮತ್ತೊಬ್ಬ ಗ್ರೆಗ್ ಚಾಪೆಲ್ ಆದ್ರಾ ಎನ್ನುವಂತ ಪ್ರಶ್ನೆಗಳು ಮೂಡಿವೆ. ಸತತ ಮೂರು ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿದ್ದ ಭಾರತ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿದೆ. ಅದಕ್ಕೆ ಕಾರಣವೇ ಭಾರತದ ಪ್ಲೇಯಿಂಗ್ 11. ಬೌಲರ್ಗಳಿಗೆ ಜಾಸ್ತಿ ಪ್ರಿಫರೆನ್ಸ್ ಕೊಟ್ಟು ಎಲ್ರುನ್ನೂ ಆಡಿಸ್ಬೇಕು ಚಾನ್ಸ್ ಕೊಡ್ಬೇಕು ಅಂತಾ ಬ್ಯಾಟಿಂಗ್ ವಿಭಾಗವನ್ನ ವೀಕ್ ಮಾಡಿ ಕೈಸುಟ್ಟುಕೊಂಡಿದ್ದಾರೆ. ಗೌತಮ್ ಗಂಭೀರ್ ಅವ್ರ ತಾಳಕ್ಕೆ ತಕ್ಕೆಂತೆ ಹೆಜ್ಜೆ ಹಾಕ್ತಿರೋ ಸೂರ್ಯಕುಮಾರ್ ಯಾದವ್ ಪಂದ್ಯ ಸೋತ್ರೂ ಇಟ್ಸ್ ಓಕೆ ಎಂದಿರೋದು ಸಿಟ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ : 4ನೇ T20I ಪಂದ್ಯದಲ್ಲಿ ಗೆದ್ದ ಕಿವೀಸ್ – ಟೀಂ IND ಸೋಲಿಗೆ ಕಾರಣವೇನು?
ಇಶಾನ್ ಕಿಶನ್ ಕೈಬಿಟ್ಟಾಗ ಶ್ರೇಯಸ್ ಗೆ ಯಾಕೆ ಚಾನ್ಸ್ ಕೊಡ್ಲಿಲ್ಲ?
ಌಕ್ಚುಲಿ ಬುಧವಾರ ಮ್ಯಾಚಲ್ಲಿ ಭಾರತ ಬ್ಯಾಟಿಂಗ್ಗೆ ಒತ್ತು ನೀಡದೆ ಬೌಲರ್ಗಳನ್ನೇ ಆಡ್ಸಿತ್ತು. ನಂಬರ್ 3ನಲ್ಲಿ ಅದ್ಭುತವಾಗಿ ಪರ್ಫಾಮ್ ಮಾಡಿದ್ದ ಇಶಾನ್ ಕಿಶನ್ರನ್ನ ಇಂಜುರಿ ನೆಪ ಹೇಳಿ ಡ್ರಾಪ್ ಮಾಡಿದ್ರು. ನಿಗಲ್ ಇಂಜುರಿ ಕಾರಣಕ್ಕೆ ಇಶಾನ್ ಕಿಶನ್ ಆಡ್ತಿಲ್ಲ ಅಂಥಾ ಟಾಸ್ ಟೈಮಲ್ಲಿ ಸೂರ್ಯ ಹೇಳಿದ್ರು. ಆದ್ರೆ ಮ್ಯಾಚ್ ಟೈಮಲ್ಲಿ ಕಿಶನ್ ವಾಟರ್ ವಾಯ್ ಆಗಿ ಸಾಕಷ್ಟು ಸಲ ಮೈದಾನಕ್ಕೆ ಬಂದಿದ್ರು. ಌಂಡ್ ಇಲ್ಲಿ ಕಿಶನ್ ಇಲ್ಲ ಅಂದಾಗ ಶ್ರೇಯಸ್ಗೆ ಅವಕಾಶ ಕೊಡ್ಬೇಕಿತ್ತು. ಆದ್ರೆ ಅದನ್ನ ಬಿಟ್ಟು ತಮ್ಮ ಪರಮಶಿಷ್ಯ ಹರ್ಷಿತ್ ರಾಣಾ ತಂಡದಲ್ಲಿ ಇರ್ಲೇಬೇಕು ಅನ್ನೋ ಕಾರಣಕ್ಕೆ ಗಂಭೀರ್ ಮೂವರೂ ಫಾಸ್ಟ್ ಬೌಲರ್ಗಳನ್ನ ಆಡ್ಸಿದ್ರು. ಅರ್ಶದೀಪ್, ಬುಮ್ರಾ ಮತ್ತು ರಾಣಾ ಮೂವರೂ ಇದ್ರು. ಮತ್ತೊಂದೆಡೆ ಪಾಂಡ್ಯ ಮತ್ತು ದುಬೆ ಕೈಯಿಂದಲೂ ಬೌಲಿಂಗ್ ಮಾಡಿಸ್ಲಿಲ್ಲ. ಹೀಗಾಗಿ ಬೌಲಿಂಗ್ನಲ್ಲೇ ಹಿಗ್ಗಾಮುಗ್ಗಾ ಹೊಡೆಸ್ಕೊಂಡು ಬ್ಯಾಟಿಂಗ್ನಲ್ಲೂ ಟಾರ್ಗೆಟ್ ಚೇಸ್ ಮಾಡೋಕಾಗ್ದೇ ಸೋತ್ರು. ಌಕ್ಚುಲಿ ತುಂಬಾ ಚೆನ್ನಾಗೇ ಹೋಗ್ತಿರೋ ತಂಡವನ್ನ ಗೌತಮ್ ಗಂಭೀರ್ ಅವ್ರೇ ಹಳ್ಳ ಹಿಡಿಸ್ತಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ.
ಗ್ರೆಗ್ ಚಾಪೆಲ್ ರಂತೆಯೇ ಆಗ್ತಿದ್ದಾರಾ ಗಂಭೀರ್?
ಟೀಂ ಇಂಡಿಯಾ ಪರ ಹಲವು ಲೆಜೆಂಡರಿ ಕೋಚ್ಗಳು ಕೆಲಸ ಮಾಡಿದ್ದಾರೆ. ಆದ್ರೆ ಗ್ರೆಗ್ ಚಾಪೆಲ್ ಕಾಲದಲ್ಲಿ ಮಾತ್ರ ಭಾರತ ಸೋಲೋದನ್ನೇ ಅಭ್ಯಾಸ ಮಾಡ್ಕೊಂಡಿತ್ತು. ಅದಕ್ಕೆ ಕಾರಣ ಚಾಪೆಲ್ ಮಾಡ್ತಿದ್ದ ಪ್ರಯೋಗಗಳು. ತಲೆಬುಡ ಇಲ್ಲದ ಪ್ಲ್ಯಾನ್ಗಳು. ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ಓಪನರ್ ಬ್ಯಾಟರ್. ಆದ್ರೆ ಚಾಪೆಲ್ ಕೋಚ್ ಆಗಿದ್ದಾಗ ಸಚಿನ್ಗೂ ಕೂಡ ತಮ್ಮ ಸ್ಲಾಟ್ ಯಾವ್ದು ಅಂತಾ ಅವ್ರಿಗೂ ಗೊತ್ತಿರಲಿಲ್ಲ. ಯಾಕಂದ್ರೆ ಮೈದಾನದಲ್ಲೇ ಸ್ಲಾಟ್ಗಳನ್ನ ಚೇಂಜ್ ಮಾಡಿ ಟೀಂ ಹಳ್ಳ ಹಿಡಿಸ್ತಿದ್ರು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆಯಂಥ ಸ್ಟಾರ್ ಪ್ಲೇಯರ್ಗಳೇ ತುಂಬಿದ್ದ ತಂಡ ಅದು. ಆದ್ರೆ ಚಾಪೆಲ್ ಕೂಡ ಸ್ಟಾರ್ ಸಂಸ್ಕೃತಿ ಬೇಡ ಯುವಪಡೆ ಕಟ್ಟೋಣ ಅನ್ನೋ ಥರನೇ ನಿರ್ಧಾರಗಳನ್ನ ಮಾಡ್ತಿದ್ರು. ಆದರೆ ಅದನ್ನ ಅಳವಡಿಸುವಲ್ಲಿ ಎಡವಟ್ಟು ಮಾಡಿದ್ರು. ಅದ್ರಲ್ಲೂ ಬಂಗಾಳದ ಹುಲಿ ಅಂತಾ ಕರೆಸಿಕೊಳ್ತಿದ್ದ ಸೌರವ್ ಗಂಗೂಲಿ ಜೊತೆಗೂ ಸಾಕಷ್ಟು ಕಿರಿಕ್ ಮಾಡ್ಕೊಂಡಿದ್ರು. 2005ರ ಕಾಲಘಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಅಂದಿನ ಕೋಚ್ ಆಸ್ಟ್ರೇಲಿಯಾ ಮೂಲದ ಗ್ರೆಗ್ ಚಾಪೆಲ್ ನಡುವಿನ ಸಮರ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಕೊನೆಗೆ ಗಂಗೂಲಿ ತಮ್ಮ ಕ್ಯಾಪ್ಟನ್ಸಿಯನ್ನೇ ಬಿಟ್ಟುಕೊಡಬೇಕಾಯ್ತು. ಆ ನಂತ್ರ ಸಾಕಷ್ಟು ಹೈಡ್ರಾಮಾಗಳೇ ನಡೆದು 2007ರ ವಿಶ್ವಕಪ್ನಲ್ಲಿ ಭಾರತ ಸೋತ ಬೆನ್ನಲ್ಲೇ ಚಾಪೆಲ್ಗೆ ಕೋಚ್ ಸ್ಥಾನದಿಂದ ಗೇಟ್ಪಾಸ್ ಕೊಡಲಾಗಿತ್ತು. ಭಾರತದ ಹಿಸ್ಟರಿಯನ್ನ ಕೆದಕಿದ್ರೆ ಗ್ರೆಗ್ ಚಾಪೆಲ್ ವಿವಾದಿತ ಕೋಚ್ ಆಗಿಯೇ ಇದ್ದಾರೆ. ಸೋ ಇದೇ ಸಾಲಿಗೆ ಗಂಭೀರ್ ಕೂಡ ಸೇರುತ್ತಿದ್ದಾರಾ ಅನ್ನೋ ಪ್ರಶ್ನೆಗಳು ಮೂಡಿವೆ.
ದ್ರಾವಿಡ್ ಗೆ ಇದ್ದ ಕ್ಲಾರಿಟಿ ಗಂಭೀರ್ ಗೆ ಯಾಕಿಲ್ಲ..?
2024ರಲ್ಲಿ ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ಅಜಾತಶತ್ರು ರಾಹುಲ್ ದ್ರಾವಿಡ್ಗೆ ತಂಡದ ಬಗ್ಗೆ ಇದ್ದ ಕ್ಲಾರಿಟಿ ಗಂಭೀರ್ ಗೆ ಇದ್ದಂತೆ ಕಾಣ್ತಿಲ್ಲ. ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಭಾರತ 24 ಟೆಸ್ಟ್ ಪಂದ್ಯಗಳನ್ನು ಆಡಿತು. ಇದರಲ್ಲಿ 14 ಪಂದ್ಯಗಳಲ್ಲಿ ಗೆದ್ದಿತು, 7 ಪಂದ್ಯಗಳಲ್ಲಿ ಸೋತಿತು. ಗೆಲುವಿನ ಶೇಕಡಾ 58.33% ಆಗಿತ್ತು ಮತ್ತು ಗೆಲುವು-ಸೋಲು ಅನುಪಾತ ಉತ್ತಮವಾಗಿತ್ತು. ದ್ರಾವಿಡ್ ಅವರ ಕಾಲದಲ್ಲಿ ಭಾರತ ಮನೆಯಂಗಣದಲ್ಲಿ ಬಲಿಷ್ಠವಾಗಿತ್ತು ಮತ್ತು ವಿದೇಶಿ ಸರಣಿಗಳಲ್ಲೂ ಯಶಸ್ಸು ಕಂಡಿತು. 2024ರ ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ಕೊನೇ ಐದು ಓವರ್ಗಳಲ್ಲಿ ಆಲ್ಮೋಸ್ಟ್ ಗೆಲ್ಲೋ ಹಂತದಲ್ಲೇ ಇತ್ತು. ಇಂಥಾ ಟೈಮಲ್ಲಿ ಗೇಮ್ ಟರ್ನಿಂಗ್ ಮಾಡಿದ್ದು ಕೋಚ್ ಮತ್ತು ಕ್ಯಾಪ್ಟನ್ ಐಡಿಯಾ. ಬೌಲಿಂಗ್ ಆಪ್ಶನ್ಸ್.. ಬುಮ್ರಾ ಮತ್ತು ಪಾಂಡ್ಯನ ಕರೆಕ್ಟ್ ಆಗಿ ಬಳಸಿಕೊಂಡಿದ್ರಿಂದಲೇ ಕಪ್ ಗೆದ್ರು. ಌಂಡ್ ರೋಹಿತ್ಗೆ ಇರುವಷ್ಟು ಎಕ್ಸ್ಪೀರಿಯನ್ಸ್, ನಾಲೆಡ್ಜ್, ಗೇಮ್ ವಿನ್ನಿಂಗ್ ಮೂಮೆಂಡ್ ಸೂರ್ಯನಿಗೆ ಇಲ್ಲದೆ ಇರೋದು ಕೂಡ ಹೊಡೆತ ಕೊಡ್ತಿದೆ. ಅದೆಲ್ಲಕ್ಕಿಂತ ಜಾಸ್ತಿ ಕೋಚ್ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಹಾಗೇ ದ್ರಾವಿಡ್ ಕಾಲದಲ್ಲಿ ಯಾರು ಯಾವ ಸ್ಲಾಟ್ನಲ್ಲಿ ಆಡ್ತಾರೆ ಅವ್ರ ಜವಾಬ್ದಾರಿ ಏನು ಅನ್ನೋದು ಗೊತ್ತಿತ್ತು. ಬಟ್ ಈಗ ಒಂದು ಪಂದ್ಯದಿಂದ ಇನ್ನೊಂದು ಪಂದ್ಯ ಅವ್ರ ಸ್ಲಾಟ್ಗಳೂ ಗೊತ್ತಿರಲ್ಲ. ಪ್ಲೇಯಿಂಗ್ 11ನಲ್ಲಿ ಆಡ್ತಾರೆ ಇಲ್ವಾ ಅನ್ನೋದೇ ಗೊತ್ತಿರಲ್ಲ. ಌಂಡ್ ಸೂರ್ಯ ಸೋತ್ರೂ ಪರ್ವಾಗಿಲ್ಲ. ಎಲ್ಲರನ್ನೂ ಆಡಿಸಿದ್ವಿ ಎಂದಿದ್ದಾರೆ. ಟ್ರಯಲ್ ಌಂಡ್ ಎರರ್ ಆಡ್ಸೋಕೆ ಇದು ಟ್ರಯಲ್ ಮ್ಯಾಚ್ ಅಲ್ಲ. ಅಥವಾ ಬಾಂಗ್ಲಾ ಮೇಲೋ ಜಿಂಬಾಂಬ್ವೆ ಮೇಲೋ ಇಂಥಾ ಪ್ರಯೋಗ ಮಾಡ್ಬೋದಿತ್ತು. ನ್ಯೂಜಿಲೆಂಡ್ನಂಥ ಸ್ಟ್ರಾಂಗ್ ಟೀಂ ಎದುರು ವಿಶ್ವಕಪ್ ಹೊತ್ತಲ್ಲಿ ಇಂಥಾ ಪ್ರಯೋಗ ಬೇಕಿರಲಿಲ್ಲ. ಬಟ್ ನ್ಯೂಜಿಲೆಂಡ್ ರೈಟ್ ಟೈಮಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸರಣಿ ಸೋತಿರಬಹುದು. ಆದ್ರೆ ವಿಶ್ವಕಪ್ಗೆ ಒಂದು ಕಾನ್ಫಿಡೆನ್ಸ್ ಬಂದಿದೆ. ಆದ್ರೆ ಭಾರತ ರಾಂಗ್ ಪ್ರಯೋಗ ಮಾಡಿದ್ದಾರೆ. ಇಂಡಿಯನ್ ಪಿಚ್ನಲ್ಲಿ ಇಬ್ರು ಫಾಸ್ಟ್ ಬೌಲರ್ ಸಾಕಿತ್ತು. ಹೀಗಿದ್ರೂ ಎಲ್ಲನ್ನೂ ಆಡ್ಸಿ ಕೈಸುಟ್ಟುಕೊಂಡಿದ್ದಾರೆ. ಟೀಂ ಇಂಡಿಯಾ ಟೆಸ್ಟ್ ಮತ್ತು ಏಕದಿನದಲ್ಲಿ ಸೋತ್ರೂ ಟಿ-20ಐನಲ್ಲಿ ಅದ್ಭುತವಾಗೇ ಪರ್ಫಾಮ್ ಮಾಡ್ತಿದೆ. ಅದನ್ನೇ ಕಂಟಿನ್ಯೂ ಮಾಡಿದ್ರೆ ಸಾಕು. ಅದನ್ನ ಬಿಟ್ಟು ವಿಶ್ವಕಪ್ಗೆ ಇನ್ನೊಂದು ವಾರ ಬಾಕಿ ಇದ್ದಾಗ ಈ ಥರ ಅರ್ಥವಿಲ್ಲದ ಟೀಂ ಸೆಟ್ ಮಾಡಿದ್ರೆ ಬ್ಯಾಕ್ ಫೈರ್ ಆಗೋದು ಗ್ಯಾರಂಟಿ. ಹೀಗಾಗೇ ಗಂಭೀರ್ ಮಾಡೋ ಎಡವಟ್ಟಿಗೆ ಭಾರತ ತಂಡ ಬೆಲೆ ತೆರುವಂತಾಗಿದೆ.

ನೋಡಿರಿ

