ಈಗ ಫಿಲ್ಮ್ ಆಫರ್.. ನೆಕ್ಸ್ಟ್ ಬಿಗ್ಬಾಸ್.. ಹೂವಿನ ಬಾಣದ ಹುಡುಗಿಗೆ ಬಂಪರ್! – ವೈರಲ್ ಹಾಡು.. ಭವಿಷ್ಯವೇ ಬದಲು!

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಈ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ.. ತನ್ನದೇ ಸ್ಟೈಲ್ನಲ್ಲಿ ಹಾಡಿದ ನಿತ್ಯಶ್ರೀ ರಾತ್ರೋ ರಾತ್ರಿ ಫೇಮಸ್ ಆದ್ಲು. ಆಕೆ ಹಾಡಿಗೆ ಅದೆಷ್ಟೋ ಮಂದಿ ರೀಲ್ಸ್ ಮಾಡಿದ್ರು. ಈ ಸಾಂಗ್ ವೈರಲ್ ಆಗಿದ್ದೇ ಆಗಿದ್ದು.. ಈಕೆಯ ಬದುಕೇ ಬದಲಾಗಿದೆ. ಇದೀಗ ನಿತ್ಯಶ್ರೀಗೆ ಒಂದಾದ ಮೇಲೊಂದು ಅವಕಾಶಗಳು ಹುಡುಕಿಕೊಂಡು ಬರ್ತಿದೆ. ಈಗ ನಿತ್ಯಶ್ರೀಗೆ ಸಿನಿಮಾದಲ್ಲೂ ಚಾನ್ಸ್ ಸಿಕ್ಕಿದೆ. ಅಷ್ಟಕ್ಕೂ ನಿತ್ಯಶ್ರೀ ಯಾವ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾಳೆ.
ಇದನ್ನೂ ಓದಿ: ಇನ್ಸ್ಟಾಗ್ರಾಂ ಗೆಳೆಯನ ಮೇಲೆ ಲವ್! – ಪ್ರೀತಿ ಒಪ್ಪದ ತಂದೆ, ತಾಯಿಗೆ ಸ್ಲೀಪಿಂಗ್ ಇಂಜೆಕ್ಷನ್ ಕೊಟ್ಟು ಕೊಂದ್ಲು ಪಾಪಿ!
ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ. ಜಸ್ಟ್ ಒಂದು ರೀಲ್ಸ್ ಯಾರನ್ನ ಬೇಕಾದ್ರೂ ಫೇಮಸ್ ಮಾಡಿ ಬಿಡುತ್ತೆ. ಈಗಾಗಲೇ ಸೋಶಿಯಲ್ ಮೀಡಿಯಾ ವೇದಿಕೆ ಮೂಲಕ ಸಾಕಷ್ಟು ಮಂದಿ ಸೇಮಸ್ ಆಗಿದ್ದಾರೆ. ರೀಲ್ಸ್ ಮಾಡ್ತಾ ಮಾಡ್ತಾ ಸೀರಿಯಲ್, ಸಿನಿಮಾದಲ್ಲಿ ಚಾನ್ಸ್ ಪಡ್ಕೊಂಡವರೂ ಇದ್ದಾರೆ. ಇದೀಗ ಗಾಯಕಿ ಶ್ರೇಯಾ ಘೋಷಲ್ ಅವರ ಹೂವಿನ ಬಾಣದಂತೆ ಹಾಡನ್ನು ವಿಭಿನ್ನವಾಗಿ ಹಾಡಿದ ಕೆಆರ್ ಪೇಟೆ ಹುಡುಗಿ ನಿತ್ಯಶ್ರೀಗೂ ಚಾಕ್ಪಾಟ್ ಒಲಿದಿದೆ. ಇದೀಗ ನಿತ್ಯಶ್ರೀಗೆ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ಹೂವಿನ ಬಾಣದಂತೆ ಹಾಡು ವೈರಲ್ ಆಗ್ತಿದ್ದಂತೆ ನಿತ್ಯಶ್ರೀ ಸೆಲೆಬ್ರಿಟಿ ಆಗಿದ್ದಾಳೆ. ಆಕೆಗೆ ಸಾಕಷ್ಟು ಫ್ಯಾನ್ಸ್ ಹುಟ್ಟಿಕೊಂಡ್ರು. ಅರ್ಜುನ್ ಜನ್ಯ ಕೂಡ ಈಕೆ ಹಾಡಿಗೆ ಫುಲ್ ಇಂಪ್ರೆಸ್ ಆಗಿದ್ರು. ಆಕೆ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ರು. ಇದಿಷ್ಟೇ ಅಲ್ಲ ಹಲವರು ತಮ್ಮ ಕಾರ್ಯಕ್ರಮಗಳಿಗೆ ಈಕೆಯನ್ನು ಗೆಸ್ಟ್ ಆಗಿ ಇನ್ವೈಟ್ ಮಾಡಿದ್ರು. ಅದಾದ ಬಳಿಕ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋಗೂ ಆಕೆಯನ್ನ ಕರೆಸಲಾಯ್ತು. ಒಂದು ಎಪಿಸೋಡ್ನಲ್ಲಿ ನಿತ್ಯಶ್ರೀಗೆ ಸ್ಕಿಟ್ ಮಾಡಲು ಚಾನ್ಸ್ ಕೊಡಲಾಯ್ತು. ಆದ್ರೆ ಈ ಬಗ್ಗೆ ಜನ ಅಸಮಧಾನ ಹೊರ ಹಾಕಿದ್ರು. ಆಕ್ಟಿಂಗ್ ಬರಲ್ಲ.. ಏನು ಟ್ಯಾಲೆಂಟ್ ಇದೆ ಅಂತ ಕರೆಸಿದ್ರಿ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ ಅನ್ನೋ ಕಾರಣಕ್ಕೆ ಅವಕಾಶ ಕೊಟ್ಟಿದ್ದು ಸರಿಯಲ್ಲ. ಏನ್ ಸಾಧನೆ ಮಾಡಿದ್ದಾಳೆ ಎಂದು ಈಕೆಗೆ ಚಾನ್ಸ್ ಕೊಟ್ರಿ ಎಂದು ಅನೇಕರು ಪ್ರಶ್ನೆ ಮಾಡಿದ್ರು. ಈ ಬೆನ್ನಲ್ಲೇ ನಿತ್ಯಶ್ರೀ ಲೈವ್ ಬಂದು. ನಾನು ಹಾಗೇ ಸೆಲೆಕ್ಟ್ ಆಗಿಲ್ಲ. ಆಡಿಷನ್ನಲ್ಲಿ ಪಾಸ್ ಆಗೇ ಶೋಗೆ ಸೆಲೆಕ್ಟ್ ಆದೆ ಎಂದು ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸಿದ್ಲು. ಇವೆಲ್ಲದ್ರ ನಡುವೆ ಈಗ ವೈರಲ್ ಹುಡುಗಿ ನಿತ್ಯಶ್ರೀ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಡುತ್ತಿದ್ದಾಳೆ.
ಹೌದು.. ಸಿನಿಮಾದಲ್ಲಿ ನಟಿಸೋದಾಗಿ ನಿತ್ಯಶ್ರೀ ಹೇಳಿಕೊಂಡಿದ್ದಾಳೆ. ಆದ್ರೆ ಆಕೆಗೆ ಯಾವ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ? ಯಾವ ರೋಲ್ ಮಾಡ್ತಿದ್ದಾಳೆ ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. ಆದ್ರೆ ನಿತ್ಯಶ್ರೀ ಕಿರಣ್ ಕುಮಾರ್ ನಿರ್ದೇಶನದ ವಿನಾಶ ಕಾಲೆ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾಳೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗುತ್ತಾ ಅಂತ ಕಾದು ನೋಡ್ಬೇಕು.
ಇನ್ನು ನಿತ್ಯಶ್ರೀ ಬಿಗ್ಬಾಸ್ ನೆಕ್ಸ್ಟ್ ಸೀಸನ್ ಗೆ ಹೋಗಲು ಚಾನ್ಸ್ ಸಿಕ್ಕಿದ್ರೂ ಹೋಗೋದಿಕ್ಕೆ ರೆಡಿ ಎಂದು ಹೇಳಿದ್ದಾಳೆ. ಈ ಮಾತು ಹೇಳ್ತಿದ್ದಂತೆ ಆಕೆ ಫ್ಯಾನ್ಸ್ ನಾನು ನಿತ್ಯಶ್ರೀಗೆ ಸಪೋರ್ಟ್ ಮಾಡ್ತಿವಿ ಎಂದು ಕಮೆಂಟ್ಸ್ ಮಾಡ್ತಿದ್ದಾರೆ. ಈಕೆಗೂ ಬಿಗ್ಬಾಸ್ ಮನೆಗೆ ಹೋಗಲು ಚಾನ್ಸ್ ಸಿಗುತ್ತಾ ಅಂತ ಕಾದು ನೋಡ್ಬೇಕು.
ಒಟ್ಟಾರೆ. ಒಂದು ಸಾಂಗ್ ಮೂಲಕ ಫೇಮಸ್ ಆದ ನಿತ್ಯಶ್ರೀಗೆ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿಕೊಂಡು ಬರ್ತಿದೆ. ಮುಂದಿನ ದಿನಗಳಲ್ಲಿ ನಿತ್ಯಶ್ರೀ ಒಳ್ಳೆ ವಿಚಾರಗಳಿಂದಲೇ ಸುದ್ದಿಯಾಗ್ಲಿ. ಇನ್ನಷ್ಟು ಹೊಸ ಹೊಸ ಅವಕಾಶಗಳು ಆಕೆಯನ್ನ ಹುಡುಕಿಕೊಂಡು ಬರಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

