ಬ್ಯಾಟರ್ಸ್ ಇಲ್ಲದೇ ಸೋತ ಭಾರತ – ವಿಶ್ವಕಪ್ ಹೊತ್ತಲ್ಲಿ ಪ್ರಯೋಗ ಯಾಕೆ?
ಗೆಲ್ಲೋ ಟೀಂ ಟ್ರ್ಯಾಕ್ ತಪ್ಪಿಸಿದ್ರಾ?

ಬ್ಯಾಟರ್ಸ್ ಇಲ್ಲದೇ ಸೋತ ಭಾರತ – ವಿಶ್ವಕಪ್ ಹೊತ್ತಲ್ಲಿ ಪ್ರಯೋಗ ಯಾಕೆ?ಗೆಲ್ಲೋ ಟೀಂ ಟ್ರ್ಯಾಕ್ ತಪ್ಪಿಸಿದ್ರಾ?

ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳನ್ನ ಗೆದ್ದಿದ್ದ ಭಾರತ ನಾಲ್ಕನೇ ಪಂದ್ಯವನ್ನ ಸೋತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಪೂರ್ ಪರ್ಫಾಮೆನ್ಸ್ ನೀಡಿದ ಟೀಂ ಇಂಡಿಯಾ ಹೊಡೆತ ತಿಂದಿದೆ. ಶಿವಂ ದುಬೆ ಬ್ಯಾಟಿಂಗ್ ವೇಳೆ ಭಾರತಕ್ಕೆ ಗೆಲ್ಲುವಂಥ ಹೋಪ್ಸ್ ಬಂದ್ರೂ ಕೂಡ ಹರ್ಷಿತ್ ರಾಣಾ ಹೊಡೆತಕ್ಕೆ ಅದೂ ಕೈ ತಪ್ಪಿತು. ಸತತ ಮೂರು ಮ್ಯಾಚ್ ಗೆದ್ದು ಸರಣಿಯನ್ನ ವೈಟ್ ವಾಶ್ ಮಾಡೋ ಅವಕಾಶ ಹೊಂದಿದ್ದ ಭಾರತ ಅದನ್ನ ಕೈಚೆಲ್ಲಿಕೊಂಡಿದೆ. ಬ್ಯಾಟಿಂಗ್ ನಲ್ಲೇ ಪಂದ್ಯಗಳನ್ನ ಗೆಲ್ತಿದ್ದವ್ರಿಗೆ ನಾಲ್ಕನೇ ಪಂದ್ಯದಲ್ಲಿ ಸೋಲಿಗೂ ಅದೇ ಕಾರಣವಾಯ್ತು. ಹಾಗೇ ಭಾರತ ತಂಡದ ವೀಕ್​ನೆಸ್ ಕೂಡ ಬಟಾಬಯಲಾಗಿದೆ.

ಹೆಚ್ಚಿನ ಬೌಲರ್ ಗಳೊಂದಿಗೆ ಕಣಕ್ಕಿಳಿದ್ರೂ ನೋ ಯೂಸ್!

ನಿನ್ನೆ ಮ್ಯಾಚಲ್ಲಿ ಪ್ಲೇಯಿಂಗ್ 11ನಲ್ಲೇ ಟೀಂ ವೀಕ್ ಅನ್ಸಿತ್ತು. ಯಾಕಂದ್ರೆ 6 ಬ್ಯಾಟರ್ಸ್ ಜೊತೆ ಮಾತ್ರ ಕಣಕ್ಕಿಳಿದಿದ್ರು. ಪ್ಯೂರ್ ಬ್ಯಾಟರ್ಸ್ ಅಂತಾ ಇದ್ದಿದ್ದೇ ನಾಲ್ವರು. ಹೀಗಿದ್ರೂ ಎದ್ವಾತದ್ವಾ ರನ್ಸ್ ಕೊಟ್ರು. ಆರಂಭದಲ್ಲಿ ಟಿಮ್ ಸೈಫರ್ಟ್ ಅಂತಾ ಸರಿಯಾಗೇ ಬಾರಿಸಿದ್ರು. ಟಿಮ್ ಸೀಫರ್ಟ್ 36 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 62 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 215 ರನ್​ ಗಳಿಸಿತ್ತು. 216 ರನ್​ಗಳ ಗುರಿಯನ್ನ ಬೆನ್ನಟ್ಟಿದ ಭಾರತ 18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 165 ರನ್​ಗಳಿಗೆ ಆಲೌಟ್ ಆಗಿ 50 ರನ್​ಗಳ ಸೋಲು ಕಂಡಿತು. ಅಷ್ಟಕ್ಕೂ ಭಾರತದ ಸೋಲಿಗೆ ಕಾರಣವೇ ಕಳಪೆ ಬ್ಯಾಟಿಂಗ್.

ಟಾಪ್ ಆರ್ಡರ್ ಫೇಲ್.. ದುಬೆ ಏಕಾಂಗಿ ಹೋರಾಟ!

216 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಮೊದಲ ಮತ್ತು ಮೂರು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ನಾಲ್ಕನೇ ಪಂದ್ಯದಲ್ಲಿ ಗೋಲ್ಡನ್ ಡಕ್. ಕಳೆದ ಮೂರು ಪಂದ್ಯಗಳಲ್ಲಿ ನಾನ್ ಸ್ಟ್ರೈಕರ್ ಆಗಿ ಇನ್ನಿಂಗ್ಸ್ ಆರಂಭಿಸಿದ್ದ ಅಭಿಷೇಕ್ ಈ ಪಂದ್ಯದಲ್ಲಿ ಸ್ಟ್ರೈಕರ್ ಆಗಿಯೇ ಓಪನಿಂಗ್ ಮಾಡಿದ್ರು. ಬಟ್ ಬ್ಯಾಡ್​​ಲಕ್ ಫಸ್ಟ್ ಬಾಲ್​ನಲ್ಲೇ ವಿಕೆಟ್. ಇನ್ನು 2ನೇ ಓವರ್​ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 8 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಟೈಮಲ್ಲಿ ಸಂಜು ಮತ್ತು ರಿಂಕು ಚೆನ್ನಾಗೇ ಪರ್ಫಾಮ್ ಮಾಡ್ತಿದ್ರು. ಆದ್ರೆ ಸ್ಯಾಮ್ಸನ್​ 15 ಎಸೆತಗಳಲ್ಲಿ 24 ರನ್​ಗಳಿಸಿ ಕ್ಲೀನ್ ಬೌಲ್ಡ್ ಆದರು. ಸತತ 4ನೇ ಪಂದ್ಯದಲ್ಲೂ ವಿಫಲರಾದರು. ಆ ನಂತ್ರ ರಿಂಕು 39 ರನ್ ಗಳಿಸಿದ್ರೆ ಪಾಂಡ್ಯ 2 ರನ್​ಗಳಿಗೆ ಔಟಾದ್ರು. ಈ ಟೈಮಲ್ಲಿ ಏಕಾಂಗಿಯಾಗಿ ಹೋರಾಡಿದ ದುಬೆ ರನ್​ ರೇಟ್​ನ 12ಕ್ಕೆ ತಂದಿದ್ರು. 15 ಓವರ್​ ಮುಗಿಯುವುದರೊಳಗೆ ಸ್ಕೋರ್ 145ಕ್ಕೇರಿಸಿದರು. ಆದರೆ 15ನೇ ಓವರ್​ನ ಕೊನೆಯ ಎಸೆತದಲ್ಲಿ ಹರ್ಷಿತ್ ರಾಣಾ ಹೊಡೆದ ಚೆಂಡು ಬೌಲರ್​ ಕೈಗೆ ತಾಗಿ ಸ್ಟಂಪ್​ಗೆ ಬಡಿಯಿತು. ದುಬೆ ಅಷ್ಟರಲ್ಲಿ ಕ್ರೀಸ್ ಬಿಟ್ಟಿದ್ದರಿಂದ ರನ್​ ಔಟ್ ಆದ್ರು. 23 ಎಸೆತಗಳಲ್ಲಿ  65 ರನ್​ಗಳಿಸಿದ್ದ ದುಬೆ ಆಟ ಮುಗಿದಿತ್ತು. ಆ ನಂತ್ರ  18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತ 165ಕ್ಕೆ ಆಲೌಟ್ ಆಯ್ತು. ಅಲ್ಲಿಗೆ ಭಾರತ ಪಂದ್ಯವನ್ನ ಸೋತು ವೈಟ್ ವಾಶ್ ಅವಕಾಶ ತಪ್ಪಿಸಿಕೊಳ್ತು.

ಬಿಗ್ ಟಾರ್ಗೆಟ್ ಕೊಟ್ರೆ ಗೆಲ್ಲಲ್ವಾ ಭಾರತ?

ಈ ಪಂದ್ಯದ ಮೂಲಕ ಭಾರತದ ವೀಕ್ ನೆಸ್ ಬಯಲಾಗಿದೆ. ಅದೇನಂದ್ರೆ 210ಕ್ಕಿಂತ ಹೆಚ್ಚಿನ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಭಾರತದ ವಿರುದ್ಧ ಗೆಲ್ಲಬಹುದು ಎನ್ನುವಂತಾಗಿದೆ. ಭಾರತ ಟಿ-20ಐನಲ್ಲಿ  ಒಮ್ಮೆಯೂ 210 ರನ್​ಗಳನ್ನು ಚೇಸ್ ಮಾಡಿ ಗೆದ್ದಿಲ್ಲ. ಭಾರತ ತಂಡದ ಯಶಸ್ವಿ ಚೇಸಿಂಗ್ ಎಂಬುದು 209 ರನ್​ಗಳು. ಹೀಗಾಗಿ 210 ಕ್ಕಿಂತ ಹೆಚ್ಚಿನ ರನ್​ಗಳಿಸಿದರೆ ಎದುರಾಳಿ ತಂಡಕ್ಕೆ ಗೆಲುವು ಖಚಿತ ಎಂಬಂತಾಗಿದೆ. ಈ ಪಂದ್ಯದಲ್ಲಿ ಕಿವೀಸ್ ಪಡೆ ಕಲೆಹಾಕಿದ್ದು 215 ರನ್​ಗಳು. ಈ ಗುರಿಯನ್ನು ಬೆನ್ನತ್ತಲಾಗದೇ ಟೀಮ್ ಇಂಡಿಯಾ 50 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ವಿಶ್ವಕಪ್​ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡೋ ಟೀಂ ಭಾರತ 210ಕ್ಕಿಂತ ಜಾಸ್ತಿ ಸ್ಕೋರ್ ಕೊಡೋಕೆ ನೋಡಲಿದೆ. ಹೀಗಾಗಿ ಭಾರತಕ್ಕೆ ಈಗ ಬಿಗ್ ಟಾರ್ಗೆಟ್ ಚಾಲೆಂಜ್ ಶುರುವಾಗಿದೆ. ಇನ್ನು ಈ ಪಂದ್ಯದ ಸೋಲಿಗೆ ಗೌತಮ್ ಗಂಭೀರ್ ಅವ್ರ ಶಿಷ್ಯ ಪ್ರೇಮವೂ ಕಾರಣವೇ.. ಇಶಾನ್ ಕಿಶನ್ ಕೈಬಿಟ್ಟಾಗ ಶ್ರೇಯಸ್ ಅಯ್ಯರ್ ಆಡಿಸ್ಬೋದಿತ್ತು. ಅದನ್ನ ಬಿಟ್ಟು ಐವರು ಫಾರ್ಸ್ ಬೌಲರ್ಸ್ ಆಡ್ಸಿದ್ರು. ಹರ್ಷಿತ್ ರಾಣಾ ಅವಶ್ಯಕತೆ ಇರ್ಲಿಲ್ಲ. ಹಾಗೇ ರಾಣಾ ಬೌಲಿಂಗ್​ನಲ್ಲಿ ದುಬಾರಿಯಾದ್ರು ಕೂಡ. ಹಾರ್ದಿಕ್ ಪಾಂಡ್ಯ ಮತ್ತು ದುಬೆ ಕೈಯಿಂದ ಬೌಲಿಂಗ್ ಕೂಡ ಮಾಡಿಸಿಲ್ಲ. ಇದೂ ಕೂಡ ಸೋಲಿಗೆ ಕಾರಣವೇ. ಆದ್ರೆ ಪಂದ್ಯ ಸೋತ್ರೂ ನಮ್ಮ ಪ್ರಯೋಗ ಸರಿಯಾಗಿದೆ ವಿಶ್ವಕಪ್ ಹೊತ್ತಲ್ಲಿ ಎಲ್ಲರಿಗೂ ಅವಕಾಶ ಕೊಡಬೇಕಿತ್ತು ಅದಕ್ಕೆ ಈ ಥರ ಪ್ಲೇಯಿಂಗ್ 11 ಮಾಡಿದ್ವಿ ಅಂತಾ ಸೂರ್ಯಕುಮಾರ್ ಯಾದವ್ ಹೇಳಿದ್ದು ನಿಜಕ್ಕೂ ಹಾಸ್ಪಾಸ್ಪದ.

Shantha Kumari