ಇನ್ಸ್ಟಾಗ್ರಾಂ ಗೆಳೆಯನ ಮೇಲೆ ಲವ್! – ಪ್ರೀತಿ ಒಪ್ಪದ ತಂದೆ, ತಾಯಿಗೆ ಸ್ಲೀಪಿಂಗ್ ಇಂಜೆಕ್ಷನ್ ಕೊಟ್ಟು ಕೊಂದ್ಲು ಪಾಪಿ!

ಪ್ರೀತಿ ಕುರುಡು. ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿದೆ. ಒಮ್ಮೆ ಲವ್ವಲ್ಲಿ ಬಿದ್ರೆ ಮುಗಿತು. ಪ್ರೀತಿಗಾಗಿ ಏನ್ ಬೇಕಾದ್ರೂ ಮಾಡಲು ರೆಡಿ ಇರ್ತಾರೆ. ಇದೀಗ ಇಲ್ಲೊಬ್ಬಳು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಯ್‌ಫ್ರೆಂಡ್‌ಗಾಗಿ ತನ್ನ ಹೆತ್ತವರ ಕಥೆಯನ್ನೇ ಮುಗಿಸಿದ್ದಾಳೆ. ತಂದೆ, ತಾಯಿಗೆ ಸ್ಲೀಪಿಂಗ್ ಇಂಜೆಕ್ಷನ್ ನೀಡಿ ಕೊಂಡಿದ್ದಾಳೆ.
ಇದನ್ನೂ ಓದಿ: ಮುನಿದ ಚಿನ್ನ ಒಲಿಯಲಿ.. ಬಂಗಾರದ ದರ ಇಳಿಯಲಿ! – ದೇವಿ ಮುಂದೆ ವಿಶೇಷ ಬೇಡಿಕೆ ಇಟ್ಟ ಭಕ್ತ!
ಏನಿದು ಘಟನೆ?
ಈ ಘಟನೆ ಹೈದರಾಬಾದ್‌ನ ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿದಾತನಿಗಾಗಿ ನರ್ಸ್ ಒಬ್ಬಳು ತಂದೆ ತಾಯಿಗೆ ಸ್ಲೀಪಿಂಗ್ ಇಂಜೆಕ್ಷನ್ ನೀಡಿ ಕೊಂದಿದ್ದಾಳೆ. ಇದೀಗ ಆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲಕ್ಷ್ಮಿ (54) ಮತ್ತು ದಶರತ್ (58) ಮೃತಪಟ್ಟವರು. ಸುರೇಖಾ ಬಂಧಿತ ಆರೋಪಿ.
ಪ್ರೀತಿಗಾಗಿ ಹೆತ್ತವರನ್ನೇ ಕೊಂದಳು!
ಸುರೇಖಾ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದವನಾದ್ದ. ಹೀಗಾಗಿ ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು. ಸುರೇಖಾ ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ಇಂಜೆಕ್ಷನ್ ನೀಡುವ ಜ್ಞಾನವನ್ನು ಹೊಂದಿದ್ದಳು. ಇದೇ ಕೌಶಲವನ್ನು ಆಕೆ ಕೊಲೆಗೆ ಬಳಸಿಕೊಂಡಿದ್ದಾಳೆ. ಆಕೆ ತಂದೆ, ತಾಯಿಗೆ ಆರ್ಟಾಸಿಲ್ ಎಂಬ ನಿದ್ರಾಜನಕ ಔಷಧವನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್ ಮಾಡಿ ಸಾಯಿಸಿದ್ದಾಳೆ.
ಇಂಜೆಕ್ಷನ್ ನೀಡಿದ್ರೆ ತನ್ನ ಮೇಲೆ ಯಾವುದೇ ಅನುಮಾನ ಬರಲ್ಲ ಎಂದು ಆಕೆ ಇಂಜೆಕ್ಷನ್ ಕೊಡುವ ಪ್ಲ್ಯಾನ್ ಮಾಡಿದ್ದಳು. ಜನವರಿ 24 ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವಳು ತನ್ನ ಹೆತ್ತವರಿಗೆ ನಿದ್ರಾಜನಕ ಇಂಜೆಕ್ಷನ್‌ನ ಹೈ ಡೋಸ್ ನೀಡಿದ್ದಾಳೆ. ಇಂಜೆಕ್ಷನ್ ಚುಚ್ಚಿದ ನಂತರ, ಇಬ್ಬರೂ ಪೋಷಕರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಸುರೇಖಾ ತನ್ನ ಸಹೋದರನಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.ಇಬ್ಬರೂ ಸೇರಿ ತಂದೆ-ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಕೊಲೆಗಾರ್ತಿ ಸಿಕ್ಕಿಬಿದ್ದಿದ್ದು ಹೇಗೆ?
ಲಕ್ಷ್ಮೀ ಹಾಗೂ ದಶರತ್ ಮೃತಪಟ್ಟ ಬೆನ್ನಲ್ಲೇ ಆಕೆಯ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮನೆಯನ್ನು ಪರಿಶೀಲಿಸಿದಾಗ, ಸಿರಿಂಜ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿ ಪತ್ತೆಯಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಹೆಚ್ಚಿನ ತನಿಖೆಯಲ್ಲಿ ಈ ಸಾವುಗಳಲ್ಲಿ ಸುರೇಖಾ ಅವರ ಪಾತ್ರ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ನೋಡಿರಿ

