4ನೇ T20I ಪಂದ್ಯದಲ್ಲಿ ಗೆದ್ದ ಕಿವೀಸ್ – ಟೀಂ IND ಸೋಲಿಗೆ ಕಾರಣವೇನು?

ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತದ ವಿರುದ್ಧ 50 ರನ್ಗಳಿಂದ ಗೆಲುವು ಪಡೆಯಿತು. ಆ ಮೂಲಕ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಭಾರತ ತಂಡಕ್ಕೆ ಕಿವೀಸ್ ತಿರುಗೇಟು ನೀಡಿತು. ಈ ಪಂದ್ಯದ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಈಗಾಗಲೇ ಟಿ20ಐ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಹಾಗಾಗಿ ಈ ಪಂದ್ಯದ ಸೋಲಿನಿಂದ ಭಾರತಕ್ಕೆ ಯಾವುದೇ ನಷ್ಟವಿಲ್ಲ.
ಇದನ್ನೂ ಓದಿ: ಟಿ-20 ವಿಶ್ವಕಪ್ ನಿಂದ ಪಾಕ್ ಔಟ್? – ನೌಟಂಕಿ ತೋರಿಸಿದ್ರೆ ಬಾಂಗ್ಲಾಗೆ ಟಿಕೆಟ್
ಬುಧವಾರ ಆಂಧ್ರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 216 ರನ್ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶಿವಂ ದುಬೆ ಅರ್ಧಶತಕದ ಹೊರತಾಗಿಯೂ 18.4 ಓವರ್ಗಳಿಗೆ 165 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ ಈ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು. ಭಾರತದ ಪರ ಶಿವಂ ದುಬೆ (65 ರನ್) ಅವರ ಜೊತೆ ರಿಂಕು ಸಿಂಗ್ ಹಾಗೂ ಸಂಜು ಸ್ಯಾಮ್ಸನ್ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು.
ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ವಿಫಲರಾದರು. ಇನ್ನು ಕಳೆದ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್, 24 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿಗಣಿಸುವಲ್ಲಿ ವಿಫಲರಾದರು. ರಿಂಕು ಸಿಂಗ್ 39 ರನ್ ಗಳಿಸಿದ ಬಳಿಕ ಔಟ್ ಆದರು. ಆದರೆ, ಶಿವಂ ದುಬೆ ದೀರ್ಘಾವಧಿ ಬ್ಯಾಟ್ ಮಾಡಿ, ಕೇವಲ 23 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 65 ರನ್ ಗಳಿಸಿ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಮ್ಯಾಟ್ ಹೆನ್ರಿ ರನ್ಔಟ್ ಮಾಡಿದರು. ಅಂತಿಮವಾಗಿ ಭಾರತದ ಇನಿಂಗ್ಸ್ ಮುಕ್ತಾಯವಾಯಿತು.

ನೋಡಿರಿ

