ಟಿ-20 ವಿಶ್ವಕಪ್ ನಿಂದ ಪಾಕ್ ಔಟ್? – ನೌಟಂಕಿ ತೋರಿಸಿದ್ರೆ ಬಾಂಗ್ಲಾಗೆ ಟಿಕೆಟ್
PCB ಕಳ್ಳಾಟಕ್ಕೆ ICC ಗುನ್ನಾ

ಟಿ-20 ವಿಶ್ವಕಪ್ ನಿಂದ ಪಾಕ್ ಔಟ್? – ನೌಟಂಕಿ ತೋರಿಸಿದ್ರೆ ಬಾಂಗ್ಲಾಗೆ ಟಿಕೆಟ್PCB ಕಳ್ಳಾಟಕ್ಕೆ ICC ಗುನ್ನಾ

ಟಿ-20 ವಿಶ್ವಕಪ್​ ವಿಚಾರದಲ್ಲಿ ಪಾಕಿಸ್ತಾನದ ನೌಟಂಕಿ ಆಟ ಇನ್ನೂ ನಿಂತಿಲ್ಲ. ಒಂದ್ಸಲ ಬಾಂಗ್ಲಾದೇಶಕ್ಕೆ ಕಂಪ್ಲೀಟ್ ಸಪೋರ್ಟ್ ಅಂದ್ರು. ಇನ್ನೊಂದ್ಸಲ ಟಿ-20 ವಿಶ್ವಕಪ್​ನೇ ಆಡಲ್ಲ ಅಂದ್ರು. ಮತ್ತೊಂದ್ಸಲ ಭಾರತ ವಿರುದ್ಧದ ಪಂದ್ಯ ಮಾತ್ರ ಬಾಯ್ಕಾಟ್ ಮಾಡ್ತೀವಿ ಅಂದ್ರು. ಈಗ ಟೂರ್ನಿಯಲ್ಲಿ ಕಣಕ್ಕಿಳೀಬೇಕಾ ಬೇಡ್ವಾ ಅಂತಾ ನಾವು ಸರ್ಕಾರದ ಜೊತೆ ಚರ್ಚೆ ಮಾಡಿ ಆಮೇಲೆ ಡಿಸೈಡ್ ಮಾಡ್ತೀವಿ ಅಂತಾ ನಾಟಕ ಮಾಡ್ತಿದ್ದಾರೆ. ಹೀಗೆ ಕ್ಷಣಕ್ಕೊಂದು ಬಣ್ಣ ಬದಲಿಸ್ತಿರೋ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸೋಕೆ ಐಸಿಸಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ : 400 ಮೀಟರ್ ದೂರಕ್ಕೆ 18,000 ರೂ. ದರ! – ಮಹಿಳೆಗೆ ಪಂಗನಾಮ ಹಾಕಿದ ಕ್ಯಾಬ್‌ ಚಾಲಕ!

ಭಾರತದಲ್ಲಿ ಪಂದ್ಯಗಳನ್ನ ಆಡಲ್ಲ ಎಂದಿದ್ದ ಬಾಂಗ್ಲಾದೇಶ ಟೂರ್ನಿಯಿಂದಲೇ ಹೊರಬಿದ್ದಿದೆ. ಅವ್ರ ಚಾಪ್ಟರ್ ಕ್ಲೋಸ್ ಆಯ್ತು ಅನ್ಕೊಂಡ್ರೆ ಪಾಕಿಸ್ತಾನ ದಿನಕ್ಕೊಂದು ಊಸರವಳ್ಳಿ ಆಟ ಆಡ್ತಿದೆ. ವಿಶ್ವಕಪ್ ಟೂರ್ನಿಗೆ ಟೀಂ ಅನೌನ್ಸ್ ಮಾಡಿದ್ರೂ ಟೂರ್ನಿ ಆಡ್ಬೇಕಾ ಬೇಡ್ವಾ ಅಥವಾ ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್ ಮಾಡ್ಬೇಕಾ ಅಂತಾ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಸಮಾಲೋಚನೆ ನಡೆಸಿ ಫೆಬ್ರವರಿ 2ರೊಳಗೆ ಅಂತಿಮ ನಿರ್ಧಾರ ಮಾಡ್ತೇವೆ ಅಂತಾ ಪಿಸಿಬಿ ಹೇಳಿದೆ. ಒಂದು ವೇಳೆ ಪಾಕ್ ವಿಶ್ವಕಪ್​ನಿಂದ ಹಿಂದೆ ಸರಿದರೆ ಯಾರಿಗೇನು ನಷ್ಟ ಆಗಲ್ಲ. ಌಕ್ಚುಲಿ ಇದ್ರಿಂದ ಬಾಂಗ್ಲಾದೇಶಕ್ಕೆ ಲಾಭ ಆಗುತ್ತೆ.

ಪಾಕಿಸ್ತಾನ ವಿಶ್ವಕಪ್ ನಿಂದ ಹಿಂದೆ ಸರಿದ್ರೆ ಬಾಂಗ್ಲಾದೇಶಕ್ಕೆ ಟಿಕೆಟ್!

ವಿಶ್ವಕಪ್ ವಿಚಾರದಲ್ಲಿ ಪಾಕಿಸ್ತಾನ ಇಷ್ಟೆಲ್ಲಾ ಡ್ರಾಮಾ ಮಾಡೋಕೆ ಕಾರಣನೇ ಬಾಂಗ್ಲಾ. ಐಪಿಎಲ್​ನಿಂದ ಬಾಂಗ್ಲಾ ಆಟಗಾರನನ್ನ ಕೈಬಿಟ್ಟಿದ್ದಕ್ಕೆ ನಾವು ಕೂಡ ಭಾರತಕ್ಕೆ ಹೋಗಿ ವಿಶ್ವಕಪ್ ಆಡಲ್ಲ ಅಂತಾ ಬಾಂಗ್ಲಾ ಹಠ ಹಿಡಿದಿತ್ತು. ಲಂಕಾಗೆ ಪಂದ್ಯಗಳನ್ನ ಶಿಫ್ಟ್ ಮಾಡಿ ಅಂದಿದ್ರು. ಬಟ್ ಲಾಸ್ಟ್ ಮೂಮೆಂಟ್​ನಲ್ಲಿ ಅದು ಸಾಧ್ಯ ಇಲ್ಲ ಆಡೋದಾದ್ರೆ ಆಡಿ ಇಲ್ದಿದ್ರೆ ಬಿಡಿ ಅಂತಾ ಐಸಿಸಿ ವಾರ್ನ್ ಮಾಡಿತ್ತು. ಹೀಗಾಗಿ ಬಾಂಗ್ಲಾ ಟೂರ್ನಿಯನ್ನೇ ಬಹಿಷ್ಕರಿಸಿದೆ. ಬಾಂಗ್ಲಾದೇಶ್ ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದಕ್ಕೆ ಉರಿದು ಬಿದ್ದಿರೋ ಪಾಕಿಸ್ತಾನ್ ತಾನೂ ಕೂಡ ವಿಶ್ವಕಪ್ ಆಡಲ್ಲ ಅಂತಾ ಕ್ಯಾತೆ ತೆಗೆದಿದೆ. ಒಂದು ವೇಳೆ ಮೊಂಡಾಟ ಆಡ್ಕೊಂಡು ಪಾಕಿಸ್ತಾನ್ ಕೂಡ  ಟಿ20 ವಿಶ್ವಕಪ್​ನಿಂದ ಹೊರಗುಳಿದ್ರೆ ಬಾಂಗ್ಲಾದೇಶಕ್ಕೆ ಲಾಭ ಆಗುತ್ತೆ. ಯಾಕಂದ್ರೆ ಪಾಕ್ ಬದಲಿಗೆ ಬಾಂಗ್ಲಾದೇಶ್ ತಂಡಕ್ಕೆ ಮತ್ತೆ ಅವಕಾಶ ನೀಡಲು ಐಸಿಸಿ ಮುಂದಾಗಲಿದೆ. ಯಾಕಂದ್ರೆ ಪಾಕಿಸ್ತಾನದ ಪಂದ್ಯಗಳು ನಡೆಯಬೇಕಿರುವುದು ಶ್ರೀಲಂಕಾದಲ್ಲಿ. ಅತ್ತ ಬಾಂಗ್ಲಾದೇಶ್ ತಂಡದ ಬೇಡಿಕೆ ಕೂಡ ಪಂದ್ಯಗಳನ್ನ ಶಿಫ್ಟ್ ಮಾಡಿ ಅನ್ನೋದು. ಹೀಗಾಗಿ ಪಾಕ್ ತಂಡ ಹೊರಗುಳಿದರೆ ಐಸಿಸಿ ಬಾಂಗ್ಲಾದೇಶ ತಂಡಕ್ಕೆ ಚಾನ್ಸ್ ನೀಡಲು ಪ್ಲ್ಯಾನ್ ಬಿ ರೆಡಿ ಮಾಡಿದೆ. ಬಾಂಗ್ಲಾ ಇದ್ದ ಗುಂಪಿನಲ್ಲಿ ಆಲ್ರೆಡಿ ಸ್ಕಾಟ್ಲೆಂಡ್ ಬಂದಿದೆ. ಸೋ ಪಾಕ್ ಇರೋ ಗುಂಪಿಗೆ ಬಾಂಗ್ಲಾ ರಿಪ್ಲೇಸ್ ಆಗುತ್ತೆ.

ಮ್ಯಾಚ್ ಆಡದೇ ಬಿಲ್ಡಪ್ ಕೊಟ್ರೆ ಖೇಲ್ ಖತಂ!

ಬಾಂಗ್ಲಾಗೆ ನಾವಿದ್ದೇವೆ ಅಂತಾ ಪಾಕ್ ಇಷ್ಟೆಲ್ಲಾ ಆಟ ಆಡ್ತಿದೆ. ಪಾಕ್​ನ ಈ ನವರಂಗಿ ಆಟಕ್ಕೆ ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ. ಟಿ20 ವಿಶ್ವಕಪ್​ನಿಂದ ಹಿಂದೆ ಸರಿದರೆ ಪಾಕ್ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಮಾನ್ಯತೆಯನ್ನೇ ರದ್ದು ಮಾಡುವುದಾಗಿ ವಾರ್ನ್ ಮಾಡಿದೆ. ಅಷ್ಟೇ ಅಲ್ದೇ ಪಾಕಿಸ್ತಾನ ಏನಾದ್ರೂ ಹೊರಗುಳಿದ್ರೆ ನಿಮ್ಮ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡವನ್ನು ಕಣಕ್ಕಿಳಿಸೋದಾಗಿ ಟ್ವಿಸ್ಟ್ ಕೊಟ್ಟಿದ್ದಾರೆ. ಯಾವ ತಂಡಕ್ಕಾಗಿ ಇಷ್ಟೆಲ್ಲಾ ಆಟ ಆಡ್ತಿದ್ದಾರೋ ಅದೇ ತಂಡವನ್ನ ಮತ್ತೆ ವಿಶ್ವಕಪ್​ಗೆ ಕರೆತರೋದಾಗಿ ಗುನ್ನಾ ಇಟ್ಟಿದೆ.  ಅಷ್ಟೇ ಅಲ್ಲದೇ ಪಾಕಿಸ್ತಾನ ಹೆಜ್ಜೆ ಹೆಜ್ಜೆಗೂ ಹೊಡೆತ ತಿನ್ನಬೇಕಾಗುತ್ತೆ.

ಪಾಕ್ ಗೆ ಮುಂದೈತೆ ಮಾರಿಹಬ್ಬ

ಐಸಿಸಿಗೆ ಪಾಕಿಸ್ತಾನ್ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲು ಅವಕಾಶ

ವಾರ್ಷಿಕ 311 ಕೋಟಿ ರೂಪಾಯಿ ಪೈಕಿ ಹೆಚ್ಚು ಭಾಗ ನಷ್ಟ

ಕೆಲ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ನಿಷೇಧಿಸಬಹುದು

16 ಕೋಟಿಗೂ ಹೆಚ್ಚು ದಂಡ ವಿಧಿಸೋ ಅವಕಾಶ ಐಸಿಸಿಗಿದೆ

ವಿದೇಶಿ ಆಟಗಾರರಿಗೆ ಪಾಕಿಸ್ತಾನದಲ್ಲಿ ಆಡಲು ಐಸಿಸಿ ಅನುಮತಿ ಸಿಗಲ್ಲ

2028ರ ಮಹಿಳಾ ಟಿ20 ವಿಶ್ವಕಪ್‌ ನಂತಹ ಭವಿಷ್ಯದ ಟೂರ್ನಿಗಳು ಮಿಸ್

ಕೆಲ ವರ್ಷಗಳ ಕಾಲ ಪಾಕ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ​ನಿಂದ ಬ್ಯಾನ್

ಅಷ್ಟಕ್ಕೂ ಇಲ್ಲಿ ಪಾಕಿಸ್ತಾನ ಹೀಗೆ ಲಂಗು ಲಗಾಮಿಲ್ಲದಂತೆ ಆಡೋಕೆ ಕಾರಣ ಐಸಿಸಿಯ ನಿರ್ಲಕ್ಷ್ಯ. ಭಾರತದಿಂದ ಪಂದ್ಯಗಳನ್ನು ಸ್ಥಳಾಂತರಿಸುವ ಬಾಂಗ್ಲಾದೇಶದ ಬೇಡಿಕೆಯನ್ನು ಪಾಕಿಸ್ತಾನ ಕೂಡ ಬೆಂಬಲಿಸಿತ್ತು. ಹೀಗಿದ್ರೂ ಐಸಿಸಿ ಇದಕ್ಕೆ ಕ್ಯಾರೇ ಎನ್ಲಿಲ್ಲ. ಹೀಗಾಗಿ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಶೇಪ್ ಔಟ್ ಆಗಿದೆ. ಆಗಿರೋ ಡ್ಯಾಮೇಜ್​ನ ತೇಪೆ ಹಚ್ಚೋಕೆ ಈ ರೀತಿ ಬಾಯ್ಕಾಟ್ ನಾಟಕ ಮಾಡ್ತಿದ್ದಾರೆ. ಆದ್ರೆ ಪಾಕಿಸ್ತಾನ ಎಷ್ಟೇ ಹಾರಾಡಿದ್ರೂ ಸೂತ್ರ ಮಾತ್ರ ಐಸಿಸಿ ಬಳಿಯೇ ಇದೆ. ನಾವ್ ಇರೋದೇ ಹಿಂಗೆ ಅಂತಾ ಬಾಲ ಬಿಚ್ಚಿದ್ರೆ ಕಟ್ ಮಾಡೋಕೆ ಎಲ್ಲಾ ತಯಾರಿನೂ ಮಾಡ್ಕೊಂಡಿದೆ.

Shantha Kumari