ದೇವಸ್ಥಾನಗಳಲ್ಲಿ ಈ ತರ ಕೆಟ್ಟ ಯೋಚನೆ ಮಾಡ್ತೀರಾ? – ಈ ಎಲ್ಲಾ ಕೆಟ್ಟ ಆಲೋಚನೆ ಬಿಟ್ಟು ಬಿಡಿ

ದೇವಸ್ಥಾನಗಳಲ್ಲಿ ಈ ತರ ಕೆಟ್ಟ ಯೋಚನೆ ಮಾಡ್ತೀರಾ? – ಈ ಎಲ್ಲಾ ಕೆಟ್ಟ ಆಲೋಚನೆ ಬಿಟ್ಟು ಬಿಡಿ

ದೇವಾಲಯಕ್ಕೆ ಹೋಗ್ತಾ ಸ್ನಾನ ಮಾಡಿ, ಶುದ್ಧ ಬಟ್ಟೆ ಧರಿಸಿ, ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ಪರಿಶುದ್ಧ ಮನಸ್ಸಿನಿಂದ ತೆರಳುತ್ತೇವೆ. ಹಾಗೆ ಹಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡಿರುತ್ತೇವೆ.  ಆದ್ರೆ ದೇವಾಲಯದ ಒಳಗೆ ಹೋದಾಗ ನಿಮ್ಮ ತಲೆಯಲ್ಲಿ ಹಲವು ರೀತಿ ಆಲೋಚನೆಗಳು ಬರಬಹುದು. ಪೂಜೆಯ ಸಮಯದಲ್ಲಿ ನೀವು ನಿಮ್ಮ ಬಯಕೆ, ಬೇಡಿಕೆಗಳನ್ನು ದೇವರ ಮುಂದಿಡಬಹುದು. ಆದ್ರೆ ದೇವಾಲಯದಲ್ಲಿ ಇದ್ದಾಗ ಕೆಲವೊಂದು ವಿಚಾರಗಳ ಕುರಿತಾಗಿ ಅಪ್ಪಿತಪ್ಪಿತೂ ಆಲೋಚಿಸಬಾರದಂತೆ. ಈ ವಿಚಾರಗಳನ್ನು ದೇವಸ್ಥಾನದಲ್ಲಿ ನೆನಪಿಸಿಕೊಳ್ಳುವುದು ಅಥವಾ ಆಲೋಚಿಸುವುದು ನಿಮ್ಮ ಪಾಪ ಕರ್ಮಗಳ ಹೆಚ್ಚಾಗುವಂತೆ ಮಾಡುತ್ತದೆ ಎಂದು ಪುರಾಣಗಳು ಹೇಳುತ್ತವೆ. ಹಾಗಿದ್ರೆ ಯಾವುದರ ಬಗ್ಗೆ ಯೋಚನೆ ಮಾಡಬಾರದು ಅನ್ನೋದ್ದನ್ನ ನೋಡೋಣ.

ಬೇರೆಯವರಿಗೆ ಕೆಟ್ಟದ್ದು ಬಯಸಬೇಡಿ

ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿ ಎಂಬ ಉದ್ದೇಶದಿಂದ ದೇವಾಲಯಕ್ಕೆ ತೆರಳುತ್ತಾರೆ. ಆದ್ರೆ ದೇವಾಲಯದಲ್ಲಿ ನೀವು ಬೇರೆಯವರಿಗೆ ಕೆಟ್ಟದನ್ನು ಬಯಸಬಾರದಂತೆ, ಬೇರೆಯವರಿಂದ ನಿಮಗೆ ಸಮಸ್ಯೆಗಳಾಗಿದ್ದರೂ ಅವರ ಬಗ್ಗೆಯೂ ಒಳ್ಳೆಯದನ್ನೇ ಬಯಸುವುದು ಉತ್ತಮವಂತೆ. ನೀವು ಬೇರೆಯವರಿಗೆ ಕೆಟ್ಟದ್ದು ಬಯಸಿದರೆ ನಿಮ್ಮ ಕರ್ಮಫಲವು ನಿಮ್ಮನ್ನೇ ಕಾಡಬಹುದು ಎಂದು ಹೇಳಲಾಗಿದೆ.

ಮಹಿಳೆಯರು ಅಥವಾ ಪುರುಷರ ಕುರಿತಾದ ಕೆಟ್ಟ ಆಲೋಚನೆ ಮಾಡಬಾರದು

ದೇವಾಲಯದೊಳಗೆ ಇರುವಷ್ಟು ಸಮಯ ದೇವರ ನಾಮಸ್ಮರಣೆ, ಪ್ರಾರ್ಥನೆ ಮಾಡಬೇಕು. ಆದ್ರೆ ಆ ಸಮಯದಲ್ಲಿ ಮಹಿಳೆಯ ಕುರಿತಾಗಿ ಅಥವಾ ಪುರುಷರ ಕುರಿತಾದ ಕೆಟ್ಟ ಆಲೋಚನೆಗಳ ಮಾಡಬಾರದು. ಇದು ನಿಮಗೆ ಅಶುಭವಾಗಲಿದೆ.

 ಶೌಚಾಲಯ ವಿಚಾರಗಳಿಂದ ಮುಕ್ತಿ ಪಡೆದಿರಬೇಕು

ಶೌಚಾಲಯ ತೆರಳುವ ಕುರಿತು ಆಲೋಚಿಸುವುದು ದೇವಾಲಯ ತೆರಳುವ ಮುನ್ನವೇ ಶೌಚಾಲಯ ವಿಚಾರಗಳಿಂದ ಮುಕ್ತಿ ಪಡೆದಿರಬೇಕು. ಒಮ್ಮೆ ದೇವಾಲಯಕ್ಕೆ ಪ್ರವೇಶಿಸಿದ ಬಳಿಕ ಸೌಚಾಲಯ ತೆರಳುವ ಕುರಿತಾಗಿ ಆಲೋಚಿಸಬಾರದು ಹಾಗೆ ಮಾತುಕತೆಯಲ್ಲಿ ಭಾಗಿಯಾಗಬಾರದು. ಇತ್ತೀಚಿಗೆ ಬಹುತೇಕ ದೇವಾಲಯದ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಇರುತ್ತದೆ. ದೇವಸ್ಥಾನದ ಒಳಗೆ ತೆರಳುವ ಮುನ್ನ ಈ ಎಲ್ಲಾ ಕೆಲಸಗಳ ಮುಗಿಸುವುದು ಬಹಳ ಉತ್ತಮ.

Kishor KV