ಟ್ರಾಫಿಕ್ ಇದೆ ಎಂದು ಡಿವೈಡರ್ ಮೇಲೆ ಬೈಕ್ ಹತ್ತಿಸಿದ ಯುವಕರು! – 5 ನಿಮಿಷ ಉಳಿಸಲು ಈ ಹುಚ್ಚಾಟ ಬೇಕಾ?

ಈಗೀಗ ಎಲ್ಲಿ ನೋಡಿದ್ರೂ ಟ್ರಾಫಿಕ್ ಕಿರಿಕಿರಿ. ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಗಂಟೆಗಟ್ಟಲೆ ಕಳೆಯಬೇಕಾಗಿದೆ. ಇದೀಗ ಇಲ್ಲೊಂದು ಕಡೆ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾದ ಯುವಕರು ತಮ್ಮ ಬೈಕ್ ಅನ್ನ ಡಿವೈಡರ್ ಮೇಲೆ ಹತ್ತಿಸಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಕೆಲಸ ಕೊಡಿಸುತ್ತೇನೆಂದು ಮಂಗಳೂರಿಗೆ ಕರೆತಂದ! – ಸ್ನೇಹಿತ ನಾಪತ್ತೆ.. ಉದ್ಯೋಗವಿಲ್ಲದೆ ಮರವೇರಿ ಕುಳಿತ ಯುವಕ!
ಟ್ರಾಫಿಕ್ ಜಾಮ್ ಆದ್ರೆ ಈ ಬೈಕ್ ಸವಾರರು ಎಲ್ಲೆಂದರಲ್ಲಿ ನುಗ್ಗಿಸಿ ಬಿಡುತ್ತಾರೆ. ತಮ್ಮ ಸುರಕ್ಷತೆ ಬಗ್ಗೆಯೂ ಒಂಚೂರು ಯೋಚನೆ ಮಾಡಲ್ಲ. ಇದೀಗ ಮಧ್ಯ ಪ್ರದೇಶದಲ್ಲಿ ಯುವಕರು ಟ್ರಾಫಿಕ್ ಇದೆ ಬೈಕ್ ಅನ್ನ ಡಿವೈಡರ್ ಮೇಲೆ ಹತ್ತಿಸಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಎಲ್ಲರೂ ನಿಧಾನಕ್ಕೆ ವಾಹನ ಚಲಾಯಿಸುತ್ತಿದ್ದರೆ, ಯುವಕರು ದೊಡ್ಡ ಸಾಹಸಕ್ಕೆ ಮುಂದಾಗಿದ್ದಾರೆ. ಬೈಕ್‌ನಿಂದ ಇಳಿದ ಯುವಕರು, ತಮ್ಮ ಬೈಕ್‌ನ ಡಿವೈಡರ್ ಮೇಲೆ ಹತ್ತಿಸಿ, ಸ್ವಲ್ಪ ದೂರ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಯುವಕನೊಬ್ಬ ಬೈಕನ್ನು ಎತ್ತಿ ಪಕ್ಕದ ರಸ್ತೆಗೆ ಕೊಂಡೊಯ್ದಿದ್ದಾನೆ. ಇದೀಗ ಯುವಕರ ಈ ಸಾಹಸ ರಸ್ತೆಯಲ್ಲಿದ್ದ ಇತರ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದು ಎಷ್ಟು ಅಪಾಯಕಾರಿ ಎಂಬುದು ಎದ್ದು ಕಾಣುತ್ತದೆ. ನೇರ ಸಂಚಾರದಲ್ಲಿ ಇಡೀ ಬೈಕ್ ಅನ್ನು ಡಿವೈಡರ್ ಮೇಲೆ ಎತ್ತುವುದು ಜೀವಕ್ಕೆ ಅಪಾಯ ಎಂದಿದ್ದಾರೆ. ಮತ್ತೊಬ್ಬರು ಕೇವಲ ಐದು ನಿಮಿಷ ಉಳಿಸಲು ಹೋಗಿ ಇಂತಹ ಪ್ರಾಣಾಪಾಯದ ಕೆಲಸ ಮಾಡಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. “ಭಾರತದಲ್ಲಿ ಟ್ರಾಫಿಕ್ ನಿಯಮಗಳು ಹೇಳಲು ಅಷ್ಟೇ.. ಎಂದು ಹಲವರು ವ್ಯಂಗ್ಯವಾಡಿದ್ದಾರೆ.

ನೋಡಿರಿ

