5 ದಿನದಲ್ಲಿ ಬಾರ್ಡರ್ 2 ಸಿನಿಮಾ ಭರ್ಜರಿ ಗಳಿಕೆ – 200 ಕೋಟಿ ಗಡಿ ದಾಟಿದ ಬಾರ್ಡರ್ 2

ಬಾಲಿವುಡ್ ಸ್ಟಾರ್ ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ ನಟಿಸಿರುವ Border 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಯಶಸ್ಸು ಕಾಣುತ್ತಿದೆ. ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಐದೇ ದಿನದಲ್ಲಿ ಈ ಸಿನಿಮಾ 200 ಕೋಟಿಯ ಗಡಿ ದಾಟಿದೆ.
ಇದನ್ನೂ ಓದಿ:ಅಭಿಮಾನಿಗಳಿಗೆ ಶಾಕ್ ಕೊಟ್ಟ ಅರಿಜಿತ್ ಸಿಂಗ್ – ಹಾಡು ನಿಲ್ಲಿಸಿದ ಖ್ಯಾತ ಗಾಯಕ ಅರಿಜಿತ್ ಸಿಂಗ್
ಬಾಲಿವುಡ್ನಲ್ಲಿ 1997ರಲ್ಲಿ ಬ್ಲಾಕ್ಬಸ್ಟರ್ ಸಿನಿಮಾ Border ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರದ ಮುಂದುವರಿದ ಭಾಗವಾಗಿ ಬಾರ್ಡರ್ ಟು ಚಿತ್ರ 5 ದಿನಗಳ ಹಿಂದೆ ರಿಲೀಸ್ ಆಗಿದೆ. ಇದೀಗ ಈ ಚಿತ್ರ ಕೂಡಾ ಗಲ್ಲಾಪೆಟ್ಟಿಗೆ ಲೂಟಿ ಮಾಡುತ್ತಿದೆ. ಐದು ದಿನಗಳಲ್ಲೇ ಅದ್ಭುತ ಪ್ರದರ್ಶನ ಕಂಡು ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಬಾರ್ಡರ್ ಟು ಸಿನಿಮಾ ಈಗಾಗಲೇ 200 ಕೋಟಿ ರೂಪಾಯಿ ಗಡಿ ದಾಟಿದೆ. Border 2 ಚಿತ್ರವು ಸೋಮವಾರ 56 ಕೋಟಿ ರೂಪಾಯಿ ಗಳಿಸಿದೆ. ಇದು ಇದುವರೆಗೆ ಒಂದೇ ದಿನದ ಗರಿಷ್ಠ ಸಂಗ್ರಹ. ಮಂಗಳವಾರ 23.21 ಕೋಟಿ ರೂಪಾಯಿ ಗಳಿಸಿದ್ದು, ಐದು ದಿನಗಳಲ್ಲಿ ಒಟ್ಟು ದೇಶೀಯ ಬಾಕ್ಸ್ ಆಫೀಸ್ ಸಂಗ್ರಹ 200 ಕೋಟಿ ರೂಪಾಯಿಯನ್ನು ದಾಟಿದೆ. ಶುಕ್ರವಾರ 30 ಕೋಟಿ ರೂಪಾಯಿ, ಶನಿವಾರ 36.5 ಕೋಟಿ ರೂಪಾಯಿ, ಭಾನುವಾರ 54.5 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು 121 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಧುರಂಧರ್ ಚಿತ್ರವು ಮೊದಲ ಮೂರು ದಿನಗಳಲ್ಲಿ 103 ಕೋಟಿ ರೂಪಾಯಿ ಗಳಿಸಿದ್ದು, Border 2 ಚಿತ್ರವು ಮೊದಲ ವಾರಾಂತ್ಯದಲ್ಲೇ ಇದನ್ನು ದಾಟಿದೆ. Border 2 ಚಿತ್ರದ ಮೊದಲ ದಿನದ ಸಂಗ್ರಹ 30 ಕೋಟಿ ರೂಪಾಯಿ, ಇದು ಧುರಂಧರ್ ಚಿತ್ರದ 28 ಕೋಟಿ ರೂಪಾಯಿಯನ್ನು ಮೀರಿದೆ.

ನೋಡಿರಿ

