ಅಜಿತ್ ಪವಾರ್ ಸಾವಿನ ಸುದ್ದಿ ಕೇಳಿ ಶರದ್ ಪವಾರ್‌ಗೆ ಆಘಾತ – ಆಸ್ಪತ್ರೆಯಲ್ಲಿ ಹಿರಿಯ ನಾಯಕನಿಗೆ ಚಿಕಿತ್ಸೆ

ಮಹಾರಾಷ್ಟ್ರ ರಾಜಕೀಯದ ಅನಭಿಷಿಕ್ತ ರಾಜ ಎಂದು ಕರೆಸಿಕೊಂಡವರು ಅಜಿತ್ ಪವಾರ್. ಚಿಕ್ಕಪ್ಪ ಶರದ್ ಪವಾರ್ ಅವರ ಕೈಬೆರಳು ಹಿಡಿದುಕೊಂಡು ರಾಜಕೀಯ ಪ್ರವೇಶಿಸಿದರು. ತಮ್ಮ ರಾಜಕೀಯ ಚಾಣಾಕ್ಷತನದ ಮೂಲಕ ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸಿದ್ದ ಚಿಕ್ಕಪ್ಪ ಶರದ್ ಪವಾರ್ ಜೊತೆ ರಾಜಕೀಯ ರಣತಂತ್ರ ಹೆಣೆಯುವಲ್ಲಿ ಅಜಿತ್ ಪವಾರ್ ಎತ್ತಿದ ಕೈ. ಇದೀಗ ಶರದ್ ಪವಾರ್ ಕುಟುಂಬದ ಪವರ್ ಫುಲ್ ಉತ್ತರಾಧಿಕಾರಿ ಅಜಿತ್ ಪವಾರ್ ಇನ್ನಿಲ್ಲ. ಈ ಸುದ್ದಿ ಪವಾರ್ ಕುಟುಂಬಕ್ಕೆ ಬರಸಿಡಿಲಿನಂತೆ ಬಂದಪ್ಪಳಿಸಿದೆ. ಮಗನ ಸಾವಿನ ಸುದ್ದಿ ಕೇಳಿ ಚಿಕ್ಕಪ್ಪ ಶರದ್ ಪವಾರ್ ಆಘಾತಕ್ಕೊಳಗಾಗಿದ್ದಾರೆ. ಇವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗುದ್ದು, ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಪವರ್ ಕೊಟ್ಟ ಕ್ಷೇತ್ರದಲ್ಲೇ ಪ್ರಾಣ ಬಿಟ್ಟ ಪವಾರ್! – ಆ 35 ನಿಮಿಷ ಏನಾಯ್ತು!
ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾಗಿದ್ದಾರೆ. ಈ ಸುದ್ದಿ ಮಹಾರಾಜಕೀಯವನ್ನೆ ಶೋಕ ಸಾಗರದಲ್ಲಿ ಮುಳುಗಿಸಿದೆ. ಅಜಿತ್ ಪವಾರ್ ನಿಧನದ ಸುದ್ದಿ ಕೇಳಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಘಾತಕ್ಕೊಳಗಾಗಿದ್ದಾರೆ. ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಫವರ್ ಫುಲ್ ರಾಜಕಾರಣಿಗಳು. ಚಿಕ್ಕಪ್ಪನ ಕೈ ಹಿಡಿದುಕೊಂಡು ರಾಜಕೀಯ ಪ್ರವೇಶ ಮಾಡಿರುವ ಅಜಿತ್ ಪವಾರ್ ಎಲ್ಲರಿಗಿಂತಲೂ ಭಿನ್ನವಾಗಿ ಕಾಣುತ್ತಿದ್ದರು. ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಅಂತಾ ಬಂದಾಗಲೆಲ್ಲಾ ಶರದ್ ಪವಾರ್ ಅವರೊಂದಿಗೆ ಅಜಿತ್ ಪವಾರ್ ಹೆಸರೂ ಕೇಳುತ್ತಿತ್ತು. ಆದರೆ, ಕೆಲ ವರ್ಷಗಳಿಂದೀಚೆಗೆ ಎನ್‌ಸಿಪಿಯನ್ನು ಇಬ್ಬಾಗ ಮಾಡಿದ್ದಲ್ಲದೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಚಿಹ್ನೆಯಾದ ಗಡಿಯಾರವನ್ನೂ ತೆಗೆದುಕೊಂಡು ಹೋಗಿದ್ದರು. ಇದೀಗ ಅವರ ಪಾಲಿಗೆ ಟೈಮ್ ಕೂಡಾ ಕೈಕೊಟ್ಟಿದ್ದು ವಿಪರ್ಯಾಸವಷ್ಟೇ.
ಚಿಕ್ಕಪ್ಪ ಶರದ್ ಪವಾರ್‌ಗೆ ವಯಸ್ಸಾಗಿದೆ. ಅವರಿನ್ನು ಎನ್‌ಸಿಪಿ ಪಕ್ಷ ಮುನ್ನಡೆಸುವುದು ಸರಿಯಲ್ಲ ಎನ್ನುವ ಕಾರಣ ನೀಡಿ ಬೇರೆಯಾಗಿದ್ದ ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದ ‘ಪವರ್’ ಆಗಿ ಗುರುತಿಸಿಕೊಂಡಿದ್ದರು. ಪವಾರ್ ಅವರಿಗೆ 66 ವರ್ಷ ವಯಸ್ಸಾಗಿತ್ತು. 1959 ಜುಲೈ 22 ರಂದು ಅಹ್ಮದ್‌ನಗರ ಜಿಲ್ಲೆಯ ದಿಯೋಲಾಲಿ ಪ್ರವರದಲ್ಲಿ ಜನಿಸಿದ ಅಜಿತ್ ಪವಾರ್, ಮಹಾರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಆಳವಾಗಿ ಹೆಣೆದುಕೊಂಡಿದ್ದ ಕುಟುಂಬದಲ್ಲಿ ಬೆಳೆದಿದ್ದರು. ಅಜಿತ್ ಪವಾರ್ ಅವರು ಪತ್ನಿ ಸುನೇತ್ರಾ ಪವಾರ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನೋಡಿರಿ

