ಪವರ್ ಕೊಟ್ಟ ಕ್ಷೇತ್ರದಲ್ಲೇ ಪ್ರಾಣ ಬಿಟ್ಟ ಪವಾರ್! – ಆ 35 ನಿಮಿಷ ಏನಾಯ್ತು!

ಪವರ್ ಕೊಟ್ಟ ಕ್ಷೇತ್ರದಲ್ಲೇ ಪ್ರಾಣ ಬಿಟ್ಟ ಪವಾರ್! –  ಆ 35 ನಿಮಿಷ ಏನಾಯ್ತು!

ಮಹಾರಾಷ್ಟ್ರದ ಒಬ್ಬ ಪವರ್ ಫುಲ್ ನಾಯಕರಾಗಿದ್ದ ಅಜಿತ್ ಪವಾರ್‌ರನ್ನ ನಾವು ಇವತ್ತು ಕಳೆದುಕೊಂಡಿದ್ದೇವೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಈ ದುರ್ಘಟನೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾವನ್ನಪ್ಪಿದ್ದಾರೆ. ಅಜಿತ್ ಪವಾರ್,  ಇಬ್ಬರು ಫೈಲಟ್‌ಗಳು, ಒಬ್ಬರು ಎನ್‌ಸಿಪಿ ಮುಖಂಡ, ಇಬ್ಬರು ಪಿಎಗಳು ಸೇರಿ 6 ಜನ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.. ಇಡೀ ದೇಶ ಎನ್‌ಸಿಪಿಯ ಪವರ್ ಫುಲ್ ನಾಯಕನ್ನ ಕಳೆದುಕೊಂಡು ದುಖಃದಲ್ಲಿದೆ.

ಆಗಿದ್ದೇನು ಅಂತ ನೋಡೋದಾದ್ರೆ.. ಇವತ್ತು ಬೆಳಗ್ಗೆ 8.10ರ ಸುಮಾರಿಗೆ ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಪವಾರ್ ಇದ್ದ 45 XR  ಚಾರ್ಟರ್ಡ್ ವಿಮಾನದಲ್ಲಿ 8.45ಕ್ಕೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಷಕ್ಕೆ ಯತ್ನಿಸಿದ್ದಾರೆ. ಆದ್ರೆ ಸಮಸ್ಯೆ ಹೆಚ್ಚಾಗಿದೆ..  ನಂತ್ರ ವಿಮಾನವು ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಿಮಾನದಲ್ಲಿ 6 ಜನ ಮೃತಪಟ್ಟಿದ್ದಾರೆ. ಅಪಘಾತಕ್ಕೆ ನಿಖರ ಕಾರಣವನ್ನು ತಿಳಿಸಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸುರಕ್ಷತಾ ಕ್ರಮವಾಗಿ ಬಾರಾಮತಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಅಜಿತ್‌ ಪವಾರ್‌ಗೆ ಮೋದಿ, ಡಿಕೆಶಿ ಸೇರಿ ರಾಜಕೀಯ ಗಣ್ಯರ ಸಂತಾಪ

ಅಪಘಾತ ಮಾಹಿತಿ ಲಭ್ಯವಾದ ತಕ್ಷಣ ಪ್ರಧಾನಿ ನರೇಂದ್ರ ಮೋದಿ  ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ   ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆಯ ವಿವರಗಳನ್ನು ವಿಚಾರಿಸಿದ್ದಾರೆ.ವರದಿಗಳ ಪ್ರಕಾರ ಇಂದು ಪವಾರ್‌ ನಾಲ್ಕು ಇಂದು  ಪ್ರಮುಖ ಬಾರಾಮತಿ  ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು.ಆದ್ರೆ ರಾಜಕೀಯ ಜೀವನ ಕೊಟ್ಟ ಕ್ಷೇತ್ರವಾದ ಬಾರಾಮತಿಯಲ್ಲೇ ಅಜಿತ್  ಪವರ್ ದುರಂತ ಅಂತ್ಯ ಕಂಡಿದ್ದಾರೆ.

ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ ನಾಯಕರಾಗಿ, ಬಾರಾಮತಿ ಕ್ಷೇತ್ರದಿಂದ ಗೆದ್ದು ಒಟ್ಟು 6 ಬಾರಿ ಡಿಸಿಎಂ ಆಗಿದ್ದಾರೆ. ಈಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.  ಇನರನ್ನ ಮಹಾರಾಷ್ಟ್ರದ ಜನ ಪ್ರೀತಿಯಿಂದ  ದಾದಾ ಎಂದು  ಕರೆಯುತ್ತಿದ್ದರು. ಅಭಿವೃದ್ಧಿ ಕಾರ್ಯಗಳು, ರೈತರ ಕಲ್ಯಾಣ, ಗ್ರಾಮೀಣ ಅಭಿವೃದ್ಧಿ ಮುಂತಾದವುಗಳಲ್ಲಿ ಇವರು ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಆದ್ರೆ ಇವರ ಅಕಾಲಿಕ ಮರಣ ಕೇವಲ ಮಹಾರಾಷ್ಟ್ರಕ್ಕೆ ಅಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ..

Kishor KV