ಜೋಡೋ ಯಾತ್ರೆ ವೇಳೆ ಓಡಿ ಬಂದು ರಾಹುಲ್​ರನ್ನ ತಬ್ಬಿಕೊಂಡ ಯುವಕ – ಭದ್ರತಾ ವೈಫಲ್ಯ ಆಗಿದ್ದೇಗೆ..?

ಜೋಡೋ ಯಾತ್ರೆ ವೇಳೆ ಓಡಿ ಬಂದು ರಾಹುಲ್​ರನ್ನ ತಬ್ಬಿಕೊಂಡ ಯುವಕ – ಭದ್ರತಾ ವೈಫಲ್ಯ ಆಗಿದ್ದೇಗೆ..?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರೋ ಭಾರತ್ ಜೋಡೋ ಯಾತ್ರೆ ವೇಳೆ ಭದ್ರತಾ ವೈಫಲ್ಯ ಉಂಟಾಗಿದೆ. ಯುವಕನೊಬ್ಬ ಓಡಿ ಬಂದು ರಾಹುಲ್​ರನ್ನ ತಬ್ಬಿಕೊಂಡಿದ್ದಾನೆ.

ಇದನ್ನೂ ಓದಿ: ಕರ್ನಾಟಕದ ಮೇಲೆ ಕಣ್ಣಿಟ್ಟ ಮೋದಿ – ಬಿಎಸ್​ವೈ ಜೊತೆ ಗುಟ್ಟಾಗಿ ಮಾತನಾಡಿದ್ದೇನು..?

ಪಂಜಾಬ್​ನ ಹೋಶಿಯಾರ್​ಪುರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವಾಗ ಭದ್ರತೆ ಉಲ್ಲಂಘನೆಯಾಗಿದೆ. ರಾಹುಲ್ ಗಾಂಧಿ ಸುತ್ತಲಿನ ಭದ್ರತೆಯನ್ನೂ ಲೆಕ್ಕಿಸದೆ ಯುವಕ ಓಡಿ ಬಂದು ರಾಹುಲ್ ಗಾಂಧಿಯನ್ನ ತಬ್ಬಿಕೊಂಡಿದ್ದಾನೆ. ತಕ್ಷಣ ಭದ್ರತಾ ಅಧಿಕಾರಿಗಳು ಆತನನ್ನ ವಶಕ್ಕೆ ಪಡೆದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೂ ಭದ್ರತಾ ಉಲ್ಲಂಘನೆಯಾಗಿತ್ತು. ಕಾಂಗ್ರೆಸ್ ಈ ಬಗ್ಗೆ ದೂರು ನೀಡಿದ ಕೆಲ ದಿನಗಳಲ್ಲೇ ಈ ಘಟನೆ ನಡೆದಿದೆ.

ಕಾಂಗ್ರೆಸ್ ಪಕ್ಷದ ಭದ್ರತಾ ಉಲ್ಲಂಘನೆಯ ಆರೋಪಕ್ಕೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ  ಈ ಹಿಂದೆಯೇ ಸ್ಪಷ್ಟನೆ ನೀಡಿತ್ತು. ಸಂಸದ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಸಾಕಷ್ಟು ಸಲ ಭದ್ರತಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಾರೆ. ರಾಹುಲ್ ಗಾಂಧಿಗೆ ಎಲ್ಲಾ ಭದ್ರತೆಯನ್ನೂ ಒದಗಿಸಲಾಗಿದೆ. ಆದರೇ ಅವರೇ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana