ಮಲ್ಲಮ್ಮಗೆ ಖುಲಾಯಿಸಿತು ಅದೃಷ್ಠ! – ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಸಿಕ್ಕಿತು ಚಾನ್ಸ್!

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ಈಗ ಸಖತ್ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಫ್ಯಾನ್ಸ್‌ನ ಮೀಟ್ ಆಗ್ತಿದ್ದಾರೆ. ಇದೀಗ ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮಗೆ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ. ಮಲ್ಲಮ್ಮಗೆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು, ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಬಸ್ ದುರಂತ! – ಶಿವಮೊಗ್ಗದಲ್ಲಿ ಧಗಧಗನೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್!
ಬಿಗ್ ಬಾಸ್ 12ರ ಸ್ಪರ್ಧಿ ಮಲ್ಲಮ್ಮಗೆ ಈಗ ಅದೃಷ್ಛ ಖುಲಾಯಿಸಿದೆ. ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ಮಲ್ಲಮ್ಮ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾದಲ್ಲಿ ಮಲ್ಲಮ್ಮ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭಭೆಗಳ ನಡುವೆ ಮಲ್ಲಮ್ಮ ಭಾರಿ ಗಮನಸೆಳೆದಿದ್ದಾರೆ. ಈ ಮೂಲಕ ಮಲ್ಲಮ್ಮ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.
ವಿನಾಶ ಕಾಲೆ ಸಿನಿಮಾದಲ್ಲಿ ಮಲ್ಲಮ್ಮ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 12ನೇ ಆವೃತ್ತಿಯಲ್ಲೂ ಮನೆಯಲ್ಲಿ ತಾಯಿಯಂತೆ ಎಲ್ಲಾ ಸ್ಪರ್ಧಿಗಳ ಜೊತೆ ಪ್ರೀತಿ ತೋರಿದ ಮಲ್ಲಮ್ಮ ಇದೀಗ ವಿನಾಶ ಕಾಲೆ ಸಿನಿಮಾದಲ್ಲೂ ತಾಯಿ ಪಾತ್ರ ಮಾಡುತ್ತಿದ್ದಾರೆ. ಈಗಾಲೇ ಸಿನಿಮಾ ಶೂಟಿಂಗ್ ಆರಂಭಗೊಂಡಿದೆ.
ಹೊಸ ಸಿನಿಮಾ ಹಾಗೂ ಪಾತ್ರದ ಕುರಿತು ಮಲ್ಲಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಟನೆ ನನಗೆ ಗೊತ್ತಿಲ್ಲ. ಆದರೆ ಅವಕಾಶ ಬಂದಿದೆ. ಹೀಗಾಗಿ ನಟನೆ ಕಲಿಯುತ್ತಿದ್ದೇನೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತೇನೆ ಎಂದು ಮಲ್ಮಮ್ಮ ಹೇಳಿದ್ದಾರೆ. ಅವಕಾಶಗಳು ಬರುತ್ತಿದೆ. ಧಾರವಾಹಿಗಳ ಆಫರ್ ಬಂದಿದೆ. ಆದರೆ ಮೊದಲು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಮಲ್ಮಮ್ಮ ಹೇಳಿದ್ದಾರೆ.
ವಿನಾಶ ಕಾಲೆ ಸಿನಿಮಾವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲ್ಲಮ್ಮ ಮಾತ್ರವಲ್ಲ, ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ. ನೈಜ ಕತೆಯನ್ನೇ ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಕಿರುಣ್ ಕುಮಾರ್ ಹೇಳಿದ್ದಾರೆ.

ನೋಡಿರಿ

