ನಿಮ್ಮ ಮಕ್ಕಳು ಸರಿಯಾಗಿ ಓದುತ್ತಿಲ್ಲವೇ? – ಈಗಲೇ ಈ ಕೆಲಸ ಮಾಡಿ

ಈಗಿನ ಕಾಲದಲ್ಲಿ ಮಕ್ಕಳು ಹೆಚ್ಚಿನ ಸಮಯವನ್ನು ಓದಿನಲ್ಲೇ ಕಳೆಯುತ್ತಿದ್ದು, ಕೆಲವರಂತೂ ದಿನವಿಡೀ ಶ್ರಮಪಟ್ಟರೂ ನಿರೀಕ್ಷಿಸಿದ ಅಂಕಗಳು ದೊರೆಯುವುದಿಲ್ಲ.. ಹೀಗೆ ಅಂದುಕೊಂಡಂತೆ ಯಶಸ್ಸು ಸಿಗದೇ ಹೋದರೆ ನಿರಾಸೆ, ಆತಂಕ ಹಾಗೂ ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೇವಲ ಓದಿನ ಕೊರತೆ ಮಾತ್ರ ಕಾರಣವಲ್ಲ, ಓದುವ ವಾತಾವರಣ, ಏಕಾಗ್ರತೆ ಹಾಗೂ ಮನಸ್ಸಿನ ಸ್ಥಿತಿಯೂ ಪ್ರಮುಖ ಪಾತ್ರ ವಹಿಸಲಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಹಾಸಿಗೆ ಮೇಲೆ ಕುಳಿತು ಆಹಾರ ಸೇವಿಸುತ್ತೀರಾ? – ಎಚ್ಚರ.. ತಪ್ಪದೇ ಈ ಸ್ಟೋರಿ ನೋಡಿ!
* ಅಧ್ಯಯನ ಕೊಠಡಿಯಲ್ಲಿ ಮಗುವಿನ ಬೆನ್ನಿನ ಹಿಂದೆ ಕಿಟಕಿ ಇರುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಕಡಿಮೆಯಾಗಬಹುದು. ವಾಸ್ತು ದೃಷ್ಟಿಯಿಂದ ಬೆನ್ನು ಮತ್ತು ಭುಜಗಳ ಹಿಂದೆ ಬೆಳಕು ಅಥವಾ ಗಾಳಿ ಬೀಳುವುದನ್ನು ಶುಭ ಲಕ್ಷಣವೆಂದು ಪರಿಗಣಿಸಲು ಆಗುವುದಿಲ್ಲ.
* ಜೊತೆಗೆ ಮೂರು ಅಥವಾ ಹೆಚ್ಚಿನ ಬಾಗಿಲುಗಳು ಸರಳ ಸಾಲಿನಲ್ಲಿ ಇರಬಾರದು. ಬಾಗಿಲುಗಳ ಮಧ್ಯಭಾಗದಲ್ಲಿ ಕುಳಿತು ಓದುವುದು ಕೂಡ ಸೂಕ್ತವಲ್ಲ; ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ವಿದ್ಯಾರ್ಥಿಗಳು ಓದುವ ಸ್ಥಳದಲ್ಲೇ ನಿದ್ರೆ ಮಾಡುವುದನ್ನು ತಪ್ಪಿಸಬೇಕು. ಅಲ್ಲಿ ಮಲಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
*ಅಧ್ಯಯನ ಕೊಠಡಿಯ ಗೋಡೆಗಳು ಅಥವಾ ಪರದೆಗಳಿಗೆ ತಿಳಿ ಹಳದಿ, ತಿಳಿ ಹಸಿರು ಅಥವಾ ತಿಳಿ ನೀಲಿ ಬಣ್ಣಗಳು ಶುಭಕರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಜಾತಕಕ್ಕೆ ಅನುಗುಣವಾಗಿ ಸೂಕ್ತ ಬಣ್ಣವನ್ನು ಆಯ್ಕೆ ಮಾಡಿದರೆ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ಓದಿಗಾಗಿ ಕಂಪ್ಯೂಟರ್ ಬಳಸುವವರು ಅದನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳಿತು. ಆದರೆ ಈಶಾನ್ಯ ಮೂಲೆಯಲ್ಲಿ ಇಡುವುದು ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು.
*ಮಗುವಿಗೆ ಓದಲು ಆಸಕ್ತಿ ಇಲ್ಲದಿದ್ದರೆ, ಅಧ್ಯಯನ ಮೇಜಿನ ಮೇಲೆ ಪಿರಮಿಡ್ ಇಡುವುದು ಉತ್ತಮ. ಇದರಿಂದ ಮಗುವಿನ ಓದಿನ ಏಕಾಗ್ರತೆ ಹೆಚ್ಚಾಗಿ ವಿದ್ಯಾಭ್ಯಾಸದ ಮೇಲೆ ಮನಸ್ಸು ವಾಲುತ್ತದೆ.
* ಉತ್ತಮ ಫಲಿತಾಂಶಕ್ಕಾಗಿ ಓದುವ ಕೊಠಡಿಯು ಉತ್ತರ ದಿಕ್ಕಿನಲ್ಲಿ ಸ್ಫಟಿಕ ಕಲ್ಲುಗಳನ್ನು ಇಡುವುದರಿಂದ ಶುಭ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಸ್ಟಡಿ ಟೇಬಲ್ ಮೇಲೆ ಗ್ಲೋಬ್ ಇಟ್ಟು ದಿನಕ್ಕೆ ಮೂರು ಬಾರಿ ತಿರುಗಿಸುವಂತೆ ಮಕ್ಕಳಿಗೆ ಹೇಳಬೇಕು. ಇದರಿಂದ ಅವರ ಮನಸ್ಸು ಅಧ್ಯಯನದತ್ತ ಕೇಂದ್ರೀಕರಿಸುತ್ತದೆ.
*ಫೆಂಗ್ಶೂಯಿ ಪ್ರಕಾರವೂ ಪಿರಮಿಡ್ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರವಾಗಿದ್ದು , ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಮಕ್ಕಳು ಓದಲು ಆಸಕ್ತಿ ತೋರದಿರಬಹುದು. ಇಂತಹ ಸಂದರ್ಭದಲ್ಲಿ 7 ಕೆಂಪು ಮೆಣಸಿನಕಾಯಿ ಮತ್ತು 1 ಟೀಸ್ಪೂನ್ ಸಾಸಿವೆ ತೆಗೆದುಕೊಂಡು ಮಗುವಿನ ತಲೆಯ ಮೇಲೆ ಏಳು ಬಾರಿ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ದೃಷ್ಟಿ ತೆಗೆದು ನಂತರ ಅದನ್ನು ಬೆಂಕಿಗೆ ಹಾಕಬೇಕು. ಇದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ನೋಡಿರಿ

