ಬಾಯಿಯಲ್ಲಿ ಹುಣ್ಣು ಆಗುತ್ತಿದ್ಯಾ? – ಮೌತ್‌ ಅಲ್ಸರ್‌ ಇಷ್ಟೊಂದು ಡೇಂಜರ್?‌

ಬಾಯಿಯಲ್ಲಿ ಹುಣ್ಣು ಆಗುತ್ತಿದ್ಯಾ? – ಮೌತ್‌ ಅಲ್ಸರ್‌ ಇಷ್ಟೊಂದು ಡೇಂಜರ್?‌

ಇತ್ತೀಚೆಗೆ ಕೆಲವರಿಗೆ ಮೌತ್‌ ಅಲ್ಸರ್‌ ಕಾಣಿಸಿಕೊಳ್ತಿದೆ. ಕೆಲವರಿಗೆ ಇದು ಬಂದ್ರೂ ಒಂದೆರಡು ದಿನದಲ್ಲಿ ಗಾಯ ವಾಸಿ ಆಗುತ್ತೆ. ಆದ್ರೆ ಇನ್ನೂ ಕೆಲವರಿಗೆ ಬಾಯಿ ಹುಣ್ಣು ಏನ್‌ ಮಾಡಿದ್ರೂ ಹೋಗೋದೆ ಇಲ್ಲ.. ನಿಮಗೂ ಈ ಸಮಸ್ಯೆ ಕಾಣಿಸಿಕೊಂಡ್ರೆ ನೀವು ನಿಮ್ಮ ಹೆಲ್ತ್‌ ಚೆಕ್‌ಅಪ್‌ ಮಾಡಿಸಿಕೊಳ್ಳೋದು ಮುಖ್ಯ. ಯಾಕಂದ್ರೆ ಇದು ಗಂಭೀರ ಅನಾರೋಗ್ಯದ ಮುನ್ಸೂಚನೆ ಇರ್ಬೋದು.

ಇದನ್ನೂ ಓದಿ: ಕತ್ತರಿಸಿ ಕ್ಲೀನ್‌ ಮಾಡಿದ್ರೂ ಸಾಯದ ಮೀನು! – ತಟ್ಟೆಯಲ್ಲೇ ಒದ್ದಾಡುತ್ತಿದೆ ಬಂಗುಡೆ!

ಬಾಯಿಯಲ್ಲಿ ಹುಣ್ಣುಗಳು ಕಂಡುಬರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಸಾಮಾನ್ಯ ಕಾರಣವೆಂದರೆ ದೇಹದಲ್ಲಿ ಫೋಲಿಕ್ ಆಮ್ಲ ಅಥವಾ ಕಬ್ಬಿಣದ ಕೊರತೆಯಾಗಿರುವುದು. ಹೌದು, ಇದರ ಜೊತೆಗೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದರಿಂದಲೂ ಈ ರೀತಿ ಆಗಿರಬಹುದು. ಕೆಲವರಲ್ಲಿ, ಹುಣ್ಣುಗಳು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಕಾಣಿಸಿಕೊಂಡು ಬಳಿಕ ತಾನಾಗಿಯೇ ಮಾಯವಾಗಿ ಹೋಗುತ್ತದೆ, ಆದರೆ ನಿಮಗೆ ಆಗಾಗ ಬಾಯಿಯಲ್ಲಿ  ಹುಣ್ಣುಗಳು ಕಾಣಿಸಿಕೊಂಡ್ರೆ ಆದಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಪದೇ ಪದೇ ಮೌತ್‌ ಅಲ್ಸರ್‌ ಆಗ್ತಾ ಇದ್ದು, ಬಾಯಿಯಿಂದ ಸ್ವಲ್ಪ ರಕ್ತಸ್ರಾವ ಅಥವಾ ತೂಕದಲ್ಲಿ ಏರಿಳಿತವಾಗುತ್ತಿದ್ದರೆ, ಇದಲ್ಲದೇ ಬಾಯಿಯಲ್ಲಿ ಒಂದೇ ಒಂದು ಹುಣ್ಣು ತುಂಬಾ ದಿನಗಳ ವರೆಗೆ ಗುಣವಾಗದಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬಾರದು. ಇಂತಹ ಸಂದರ್ಭಗಳಲ್ಲಿ, ಬಾಯಿಯ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ, ಇದು ಕರುಳಿನ ಕಾಯಿಲೆ, ಥೈರಾಯ್ಡ್ ಸಮಸ್ಯೆ ಅಥವಾ ಮಧುಮೇಹದಿಂದಲೂ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳಬಹುದು. ಹೀಗಾಗಿ ಬಾಯಿ ಹುಣ್ಣು ಪದೇ ಪದೆ ಕಾಣಿಸಿಕೊಂಡ್ರೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ.

Shwetha M