ಕತ್ತರಿಸಿ ಕ್ಲೀನ್ ಮಾಡಿದ್ರೂ ಸಾಯದ ಮೀನು! – ತಟ್ಟೆಯಲ್ಲೇ ಒದ್ದಾಡುತ್ತಿದೆ ಬಂಗುಡೆ!

ಮೀನುಗಳು ನೀರಿನಲ್ಲಿ ಮಾತ್ರ ಬದುಕುತ್ತವೆ. ನೀರಿನಿಂದ ಹೊರ ತೆಗೆದ ಕೆಲವೇ ಕ್ಷಣಗಳಲ್ಲಿ ಸಾಯುತ್ತವೆ. ಆದ್ರೆ ಇಲ್ಲೊಂದು ಕಡೆ ಅಚ್ಚರಿಯ ಘಟನೆ ನಡೆದಿದೆ. ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಸಾಯದೆ ಮತ್ತೆ ಚಡಪಡಿಸಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ನಟಿ ಕಾವ್ಯ ಗೌಡ 100 ಕೋಟಿ ಮನೆ ವಿವಾದ! – ನಟಿ ಹಾಗೂ ಪತಿ ಮೇಲೆ ಸಂಬಂಧಿಯಿಂದಲೇ ಹಲ್ಲೆ, ಆಸ್ಪತ್ರೆಗೆ ದಾಖಲು!
ಈ ಅಚ್ಚರಿಯ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ. ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಚಡಪಡಿಸಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಅಷ್ಟಕ್ಕೂ ಆಗಿದ್ದೇನು?
ಮಲ್ಪೆ ಬಂದರಿನಲ್ಲಿ ಗ್ರಾಹಕರೊಬ್ಬರು ಮೀನು ಖರೀದಿಸಿದ್ದಾರೆ. ಮೀನನ್ನು ಅಲ್ಲಿಯೇ ಕತ್ತರಿಸಿ ಕೊಡುವಂತೆ ಕೇಳಿಕೊಂಡಾಗ, ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದಾರೆ. ಆದರೆ, ಕತ್ತರಿಸಿದ ಬಳಿಕವೂ ಮೀನು ಜೀವಂತವಾಗಿ ಚಡಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿದ್ದ ಇತರ ಮೀನು ಮಾರಾಟಗಾರರು ಹಾಗೂ ಗ್ರಾಹಕರು ಹೌಹಾರಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಕತ್ತರಿಸಿದ ಬಳಿಕವೂ ಜೀವಂತವಾಗಿರುವ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೋಡಿರಿ

