ಅಂಡರ್-19 ವಿಶ್ವಕಪ್‌ನಲ್ಲಿ ವೈಭವ್ ಆರ್ಭಟ – 308 ಸ್ಟ್ರೈಕ್ ರೇಟ್.. 24 ಎಸೆತಗಳಲ್ಲಿ ಅರ್ಧಶತಕ

ಅಂಡರ್-19 ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿಯ ಆರ್ಭಟ ಮುಂದುವರೆದಿದೆ. ಲೀಗ್ ಹಂತದಲ್ಲಿ ಬಾಂಗ್ಲಾದೇಶ್ ವಿರುದ್ಧ 72 ರನ್ ಬಾರಿಸಿ ಅಬ್ಬರಿಸಿದ್ದ ವೈಭವ್ ಇದೀಗ ಸೂಪರ್-6 ಸುತ್ತಿನ ಮೊದಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಅಂಡರ್-19 ವಿಶ್ವಕಪ್ 2026 ಗ್ರೂಪ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ.
ಬುಲವಾಯೊ ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಜಿಂಬಾಬ್ವೆ ಬೌಲರ್‌ಗಳನ್ನು ಅವರ ತವರು ನೆಲದಲ್ಲಿ ಕಾಡಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ ಅದ್ಭುತ ಅರ್ಧಶತಕ ಬಾರಿಸಿ ಮಿಂಚಿದರು. ಇದು ಅಂಡರ್-19 ವಿಶ್ವಕಪ್‌ನಲ್ಲಿ ಮೂರನೇ ಅತಿ ವೇಗದ ಅರ್ಧಶತಕವಾಗಿದೆ.
ಇದನ್ನೂ ಓದಿ: ಡೈರೆಕ್ಟ್ ಫೈನಲ್ ಟಿಕೆಟ್ ಮಿಸ್ – ಗೆಲುವಿನ ಟ್ರ್ಯಾಕ್ ತಪ್ಪಿದ್ದೆಲ್ಲಿ?
ವೈಭವ್ ಕೇವಲ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ವೈಭವ್ ಸೂರ್ಯವಂಶಿ 30 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 52 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಚಿಮುಗೊರೊ ಬೌಲಿಂಗ್‌ನಲ್ಲಿ ಮುಡ್ಜೆಂಗೆರೆ ಅವರಿಗೆ ವೈಭವ್ ಕ್ಯಾಚ್ ನೀಡಿದರು.
ವೈಭವ್ ಸೂರ್ಯವಂಶಿ ಔಟಾಗುವ ಮೊದಲು, ಅವರು ತಮ್ಮ ಬ್ಯಾಟ್‌ನಿಂದ ಬಿರುಗಾಳಿಯನ್ನು ಎಬ್ಬಿಸಿದರು. ಭಾರತ ತಂಡವು 50 ಓವರ್‌ಗಳ ಪಂದ್ಯದಲ್ಲಿ ಕೇವಲ 10.2 ಓವರ್‌ಗಳಲ್ಲಿ 100 ರನ್ ಗಳಿಸಿತು. ಈ ಸುದ್ದಿ ಬರೆಯುವ ಸಮಯದಲ್ಲಿ, ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ 15 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 127 ರನ್ ಗಳಿಸಿದೆ.

ನೋಡಿರಿ

