ನಟಿ ಕಾವ್ಯ ಗೌಡ 100 ಕೋಟಿ ಮನೆ ವಿವಾದ! – ನಟಿ ಹಾಗೂ ಪತಿ ಮೇಲೆ ಸಂಬಂಧಿಯಿಂದಲೇ ಹಲ್ಲೆ, ಆಸ್ಪತ್ರೆಗೆ ದಾಖಲು!

ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಮನೆಯ ಜಗಳ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನೂರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಗೋಸ್ಕರ ಕಾವ್ಯಾ ಗೌಡ ಪತಿ ಹಾಗೂ ಅವರ ಅಣ್ಣನ ಕುಟುಂಬ ನಡುವೆ ಜಗಳ ನಡೆದಿದ್ದು, ನಟಿ ಕಾವ್ಯ ಹಾಗೂ ಅವರ ಗಂಡನ ಮೇಲೆ ಹಲ್ಲೆ ನಡೆದಿದೆ. ಇದೀಗ ಈ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಒಂದು ಮದುವೆ.. ಇಬ್ಬರು ಆತ್ಮಹ*ತ್ಯೆ! – ಮುಂದೆ ನಿಂತು ಮದುವೆ ಮಾಡಿಸಿದ್ದೇ ಮುಳುವಾಯ್ತಾ?
ಅಷ್ಟಕ್ಕೂ ಆಗಿದ್ದೇನು?
ಕಾವ್ಯಾ ಗೌಡ ಅವರು ಉದ್ಯಮಿ ಸೋಮಶೇಖರ್ ಅವರನ್ನು ಕಾವ್ಯಾ ಮದುವೆ ಆಗಿದ್ದರು. ಮದುವೆಯಾದ ಬಳಿಕ ಕೆ ಆರ್ ಪುರಂನಲ್ಲಿರುವ ನಿವಾಸದಲ್ಲಿ ನೆಲೆಸಿದ್ದರು. ಸೋಮಶೇಖರ್ ಅಣ್ಣ ನಂದೀಶ್, ಅತ್ತಿಗೆ ಪ್ರೇಮಾ ಕೂಡ ಆ ಮನೆಯಲ್ಲಿಯೇ ವಾಸವಾಗಿದ್ದಾರೆ. ಕಳೆದ ಜನವರಿ 26ರಂದು ಮನೆ ವಿಚಾರಕ್ಕೆ ಇವರ ಮಧ್ಯೆ ಜಗಳ ನಡೆದಿದೆ. ಆ ಜಗಳದಲ್ಲಿ ಪ್ರೇಮಾ ತಂಗಿ ಪ್ರಿಯಾ, ಪ್ರೇಮಾ ತಂದೆ ರವಿಕುಮಾರ್ ಶಾಮೀಲಾಗಿದ್ರು. ಈ ವೇಳೆ ಕಾವ್ಯ ಹಾಗೂ ಸೋಮಶೇಖರ್ ಮೇಲೆ ಹಲ್ಲೆ ನಡೆಸಲಾಗಿದೆ.
ಸೋಮಶೇಖರ್ ಅವರ ಅತ್ತಿಗೆಯ ತಂದೆ ಮನೆಗೆ ನುಗ್ಗಿ ಅವಾವ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ನಿನ್ನನ್ನ ರೇಪ್ ಮಾಡ್ತೇನೆ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಕಾವ್ಯ ಪತಿಗೆ ಚಾಕುವಿನಿಂದ ಇರಿದು ಬೆದರಿಕೆ ಹಾಕಿದ್ದಾರೆ. ಈ ಬೆನ್ನಲ್ಲೇ ಕಾವ್ಯಾ ಗೌಡ ಅವರು ರವಿಕುಮಾರ್, ಪ್ರಿಯಾ, ಪ್ರೇಮಾ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ಇದಾದ ಬಳಿಕ ಪ್ರೇಮಾ ಅವರು ಕಾವ್ಯಾ ಗೌಡ ವಿರುದ್ಧ ಪ್ರತಿ ದೂರು ನೀಡಿದ್ದಾರೆ.
ಗಾಯಗೊಂಡಿರುವ ನಟಿ ಮತ್ತು ಪತಿ ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರಿಂದ ರಾಮಮೂರ್ತಿ ನಗರ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. ರವಿಕುಮಾರ್‌ನಿಂದ ರೇಪ್ ಬೆದರಿಕೆ ಬಂದಿದೆ ಎನ್ನಲಾಗಿದೆ. ನಟಿ ಕಾವ್ಯ ಗೌಡ ಮಾನಸಿಕವಾಗಿ ನೊಂದಿದ್ದಾರೆ. ಪ್ರೇಮ, ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನೋಡಿರಿ

