ಅಂಬಿ, ವಿಷ್ಣು, ಅಣ್ಣಾವ್ರ ಆಶೀರ್ವಾದ ಪಡೆದ ಗಿಲ್ಲಿ! – ಚಂದನವನ ದಿಗ್ಗಜರ ಪುಣ್ಯಭೂಮಿಯಲ್ಲಿ ಬಿಗ್ಬಾಸ್ ವಿನ್ನರ್!

ಎಲ್ಲೆಲ್ಲೂ ಬಿಗ್ಬಾಸ್ ಕನ್ನಡ ಸೀಸನ್ 12ರ ಗಿಲ್ಲಿನಟನದ್ದೇ ಹವಾ. ದೊಡ್ಮನೆಯಿಂದ ಆಚೆ ಬಂದ್ಮೇಲೆ ಗಿಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದು ಇವೆಂಟ್ನಲ್ಲಿ ಭಾಗಿಯಾಗ್ತಿದ್ದಾರೆ. ಇದೀಗ ಗಿಲ್ಲಿ ಚಂದನವನದ ತ್ರಿಮೂರ್ತಿಗಳ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ: ಕೋಗಿಲು ನಿವಾಸಿಗಳು ಲಕ್ಷ, ಲಕ್ಷ ಕೊಟ್ಟು ಮನೆ ಖರೀದಿಸಿದ್ರಾ? – ಆರೋಪಿಗಳ ಖಾತೆಯಲ್ಲಿ ಕೋಟಿ-ಕೋಟಿ ವ್ಯವಹಾರ!
ಬಿಗ್ಬಾಸ್ ಮನೆಯಿಂದ ಆಚೆ ಬಂದ್ಮೇಲೆ ಗಿಲ್ಲಿನಟ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಫಿನಾಲೆ ಮುಗಿದು 10 ದಿನಗಳಾದರೂ, ಗಿಲ್ಲಿಯ ಹವಾ ಮಾತ್ರ ಕಮ್ಮಿ ಆಗಿಲ್ಲ. ಮೊನ್ನೆ ಮೊನ್ನೆಯಷ್ಟೇ ಅಪ್ಪು ಸಮಾಧಿಗೆ ನೀಡಿದ್ರು. ಅದಾದ ಬಳಿಕ ಸ್ಯಾಂಡಲ್ವುಡ್ ನ ನಟರನ್ನು ಭೇಟಿಯಾಗುತ್ತಿದ್ದಾರೆ. ಅವರು ಕನ್ನಡ ಚಿತ್ರರಂಗದ ತ್ರಿಮೂರ್ತಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಇದೀಗ ಚಂದನವನದ ತ್ರಿಮೂರ್ತಿಗಳ ಆಶೀರ್ವಾದ ಪಡೆದಿದ್ದಾರೆ.
ವರನಟ ಡಾ. ರಾಜ್ಕುಮಾರ್, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಡಾ. ಅಂಬರೀಷ್ ಅವರ ಪುಣ್ಯಭೂಮಿಗಳಿಗೆ ಬಿಗ್ ಬಾಸ್ ಟ್ರೋಫಿಯೊಂದಿಗೆ ಗಿಲ್ಲಿ ನಟ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಗಿಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದಾರೆ.
ಚಂದನವನದ ತ್ರಿಮೂರ್ತಿ ಘಟಾನುಘಟಿಗಳ ಪುಣ್ಯಭೂಮಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ದಿವ್ಯ ಘಳಿಗೆ. ವರನಟನ ಅಂತಃಕರಣ, ರೆಬೆಲ್ ಸ್ಟಾರ್ನ ಗತ್ತು, ಸಾಹಸ ಸಿಂಹನ ಸ್ನೇಹ ಸ್ವಭಾವ ಸದಾ ಕಾಲ ನಮ್ಮ ಗಿಲ್ಲಿಗೆ ಒಲಿಯಲಿ” ಎಂದು ಗಿಲ್ಲಿ ನಟ ಫ್ಯಾನ್ಸ್ ಹೇಳಿದ್ದಾರೆ.

ನೋಡಿರಿ

