ಡೈರೆಕ್ಟ್ ಫೈನಲ್ ಟಿಕೆಟ್ ಮಿಸ್ – ಗೆಲುವಿನ ಟ್ರ್ಯಾಕ್ ತಪ್ಪಿದ್ದೆಲ್ಲಿ?
ಅತಿ ಆತ್ಮವಿಶ್ವಾಸ ಮುಳುವಾಗ್ತಿದ್ಯಾ?

ಡೈರೆಕ್ಟ್ ಫೈನಲ್ ಟಿಕೆಟ್ ಮಿಸ್ – ಗೆಲುವಿನ ಟ್ರ್ಯಾಕ್ ತಪ್ಪಿದ್ದೆಲ್ಲಿ?ಅತಿ ಆತ್ಮವಿಶ್ವಾಸ ಮುಳುವಾಗ್ತಿದ್ಯಾ?

ಒಂದು, ಎರಡು, ಮೂರು, ನಾಲ್ಕು ಅಂತಾ ಸತತ ಐದು ಮ್ಯಾಚ್​ಗಳನ್ನ ಗೆದ್ದು ಪ್ಲೇಆಫ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಆರ್​ಸಿಬಿ ಈಗ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತಿದೆ. ಡೈರೆಕ್ಟ್ ಫಿನಾಲೆಗೆ ಇನ್ನೊಂದು ಪಂದ್ಯ ಗೆಲ್ಲೋಕೂ ಆಗ್ದೇ ಒದ್ದಾಡ್ತಿದ್ದಾರೆ. ಅದ್ರಲ್ಲೂ ಸೋಮವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ರಿಚಾ ಘೋಷ್ ಏಕಾಂಗಿ ಹೋರಾಟ ಮಾಡಿದ್ರೂ ಸಾಧ್ಯವಾಗ್ಲಿಲ್ಲ.

ಇದನ್ನೂ ಓದಿ : ರಿಚಾ ಹೋರಾಟ ವ್ಯರ್ಥ! – ಮುಂಬೈ ವಿರುದ್ಧ ಸೋಲೊಪ್ಪಿಕೊಂಡ RCB!

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸತತ ಆರು ಪಂದ್ಯಗಳನ್ನ ಗೆದ್ದ ಸಾಧನೆ ಮಾಡಿದ್ದ ಆರ್​ಸಿಬಿ ಎಲ್ರಿಗಿಂತ ಮೊದ್ಲೇ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿತ್ತು. ಈಗ ಆರು ಮತ್ತು 7ನೇ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದಾರೆ. ಜನವರಿ 24ರಂದು ಡೆಲ್ಲಿ ವಿರುದ್ಧದ ಆರನೇ ಪಂದ್ಯದಲ್ಲಿ 109 ರನ್​ಗಳಿಗೆ ಆಲೌಟ್ ಆಗಿದ್ದ ಆರ್​ಸಿಬಿ ಈಗ ಮುಂಬೈ ವಿರುದ್ಧ 199 ರನ್ ಹೊಡುಸ್ಕೊಂಡು ಟಾರ್ಗೆಟ್ ರೀಚ್ ಆಗೋಕೆ ಆಗ್ದೇ ಸೋಲೊಪ್ಪಿಕೊಂಡಿದ್ದಾರೆ. ಪ್ಲೇಆಫ್ ಕನ್ಫರ್ಮ್ ಆಗಿದ್ರೂ ಡೈರೆಕ್ಟ್ ಫೈನಲ್​ಗೆ ಹೋಗೋ ಚಾನ್ಸ್ ಮಿಸ್ ಮಾಡಿಕೊಳ್ತಿದ್ದಾರೆ.

ಮುಂಬೈ ವಿರುದ್ಧ ರಿಚಾ ಘೋಷ್ ಏಕಾಂಗಿ ಹೋರಾಟ ವ್ಯರ್ಥ!

ಌಕ್ಚುಲಿ ಮುಂಬೈ ವಿರುದ್ಧದ ಪಂದ್ಯದಲ್ಲೇ ಗೆದ್ದು ಆರ್​ಸಿಬಿ ಫೈನಲ್​ಗೆ ಹೋಗುತ್ತೆ ಅನ್ಕೊಂಡ್ರೆ ಅಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವೀಕ್ ಆಗಿ ಪರ್ಫಾಮ್ ಮಾಡಿ ಸೋಲೊಪ್ಪಿಕೊಂಡ್ರು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 199 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 184 ರನ್​ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 15 ರನ್​ಗಳ ಜಯ ಸಾಧಿಸಿದೆ. ಮುಂಬೈ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನ್ಯಾಟ್ ಸೀವರ್ ಬ್ರಂಟ್ 57 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಌಂಡ್ ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ದಾಖಲಾದ ಮೊದಲ ಶತಕ ಇದು. ಅಷ್ಟಕ್ಕೂ ಇಷ್ಟು ದಿನ ಅದ್ಭುತವಾಗಿ ಪರ್ಫಾಮ್ ಮಾಡ್ತಿದ್ದ ಆರ್​ಸಿಬಿ ಸತತ ಎರಡು ಪಂದ್ಯಗಳನ್ನ ಸೋಲೋಕೆ ಕಾರಣ ಏನು ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

ಬೆಂಗಳೂರು ಸೋಲಿಗೆ ಕಾರಣಗಳು!

ಮೊದಲ ಐದು ಪಂದ್ಯಗಳಲ್ಲಿದ್ದ ಬೌಲಿಂಗ್ ಅಟ್ಯಾಕ್ ಇಲ್ಲ

ಡೆಲ್ಲಿ ವಿರುದ್ಧ ಬ್ಯಾಟಿಂಗ್ & ಬೌಲಿಂಗ್ ಎರಡೂ ವೀಕ್

ಮುಂಬೈ ವಿರುದ್ಧ ಬೆಲ್ ಬಿಟ್ಟು ಉಳಿದವ್ರೆಲ್ಲಾ ದುಬಾರಿ

ಟಾಪ್ ಆರ್ಡರ್ ಬ್ಯಾಟಿಂಗ್ ಕೈಕೊಟ್ಟಿದ್ದು ಕೂಡ ಕಾರಣ

ಮುಂಬೈ ವಿರುದ್ಧ ಟಾಪ್ 5 ಬ್ಯಾಟರ್ ಗಳಿಂದ 31 ರನ್

ಗೆದ್ದೇ ಗೆಲ್ಲುತ್ತೇವೆ ಅನ್ನೋ ಅತಿಯಾದ ಆತ್ಮವಿಶ್ವಾಸ ಮುಳುವು

ಬಹುಶಃ ಮುಂಬೈ ವಿರುದ್ಧದ ಮ್ಯಾಚಲ್ಲಿ ಟಾಪ್ ಆರ್ಡರ್ ನಲ್ಲಿ ಒಬ್ರು ಸಾಥ್ ಕೊಟ್ಟಿದ್ರೂ ಕೂಡ ಮ್ಯಾಚ್ ವಿನ್ ಆಗ್ತಿದ್ವಿ. ರಿಚಾ ಘೋಷ್ ಮಾತ್ರವೇ ಏಕಾಂಗಿಯಾಗಿ ಹೋರಾಡಿ 90 ರನ್ ಕಲೆ ಹಾಕಿದ್ರು. ಆದ್ರೆ ಪಂದ್ಯ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. ಹೀಗಿದ್ರೂ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ನಲ್ಲಿದ್ದು 29ರಂದು ಯುಪಿ ವಾರಿಯರ್ಸ್ ವಿರುದ್ಧ ಲಿಗ್ ಹಂತದ ಕೊನೇ ಪಂದ್ಯ ಆಡಲಿದೆ. ಈ ಪಂದ್ಯವನ್ನ ಗೆದ್ರೆ ಬಹುಶಃ ಡೈರೆಕ್ಟ್ ಫೈನಲ್​ಗೆ ಹೋಗೋ ಚಾನ್ಸಸ್ ಇದೆ. ಌಂಡ್ ಇತರೆ ಪಂದ್ಯಗಳ ಮೇಲೂ ಡಿಪೆಂಡ್ ಆಗ್ಬೇಕಾಗುತ್ತೆ.

Shantha Kumari