ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ – ಏಜೆನ್ಸಿ ಸಿಬ್ಬಂದಿಯಿಂದಲೇ ಕೋಟಿ, ಕೋಟಿ ಲೂಟಿ!

ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ – ಏಜೆನ್ಸಿ ಸಿಬ್ಬಂದಿಯಿಂದಲೇ ಕೋಟಿ, ಕೋಟಿ ಲೂಟಿ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಹಾ ದರೋಡೆ ನಡೆದಿದೆ. ಹಿಟಾಚಿ ಕಂಪನಿಯ ಸಿಬ್ಬಂದಿಗಳು ಎಟಿಎಂಗೆ ತುಂಬಲು ತೆಗೆದುಕೊಂಡಿದ್ದ ಹಣದೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರಿಚಾ ಹೋರಾಟ ವ್ಯರ್ಥ! – ಮುಂಬೈ ವಿರುದ್ಧ ಸೋಲೊಪ್ಪಿಕೊಂಡ RCB!

ಕೋರಮಂಗಲದಲ್ಲಿಈ ಘಟನೆ ನಡೆದಿದೆ. ಕೋರಮಂಗಲದ ಆಕ್ಸಿಸ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋದ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಒಟ್ಟು 1.40 ಕೋಟಿ ಹಣ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಲಾಗಿದೆ.

ಎಸ್‌ಬಿಐ, ಆಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಪೇಮೆಂಟ್ ಸರ್ವಿಸ್ ನೀಡುತ್ತಿದ್ದ ಹಿಟಾಚಿ ಪೇಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸಿಬ್ಬಂದಿಗಳಿಂದ ಈ ಕೃತ್ಯ ನಡೆದಿದೆ. ಈ ಸಂಸ್ಥೆಯಲ್ಲಿ ಎಟಿಎಂಗೆ ಹಣ ಡೆಪಾಸಿಟ್ ಮಾಡುವ ಕೆಲಸ ಮಾಡ್ತಿದ್ದ ಆರೋಪಿಗಳು. 57 ಲಕ್ಷ ವಂಚನೆಯಲ್ಲಿ ಪ್ರವೀಣ್, ಧನಶೇಖ, ರಾಮಕ್ಕ, ಹರೀಶ್ ಕುಮಾರ್ ಆರೋಪಿಗಳಾದರೆ 80 ಲಕ್ಷ ರೂ. ವಂಚನೆಯಲ್ಲಿ ಹರೀಶ್ ಕುಮಾರ್, ಪ್ರವೀಣ್ ಕುಮಾರ್, ವರುಣ್ ಎಂಬ ಸಿಬ್ಬಂದಿ ಆರೋಪಿಗಳಾಗಿದ್ದಾರೆ.

ಈ ಕಂಪನಿಯ ಒಂದು ಟೀಂ 50 ಲಕ್ಷ ರೂ. ಹಣ ತಗೆದುಕೊಂಡು ಹೋಗಿದ್ದರೆ, ಮೂರು ಜನರ ಮತ್ತೊಂದು ತಂಡ 80 ಲಕ್ಷ ರೂ. ಹಣ ತಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಎರಡು ವಂಚಕರ ತಂಡದ ವಿರುದ್ಧ 19ನೇ ಕೋರಮಂಗಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.ಘಟನೆ ಸಂಬಂದ ಕೇಸ್ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯಾವ ಸಮಯದಿಂದ ಕೆಲಸ ಮಾಡುತ್ತಿದ್ದರು ಎಷ್ಟು ಸಮಯದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಬ್ಯಾಂಕ್‌ನವರಿಂದ ದಾಖಲೆ ಪಡೆದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Shwetha M