ಪಥ ಬದಲಿಸಿದ ಸೂರ್ಯ – ಒಂದೇ ಪಂದ್ಯಕ್ಕೆ ಸೀಮಿತವಾಗುತ್ತಾ?
ಕನ್ಸಿಸ್ಟೆನ್ಸಿ ಇಲ್ಲದಿದ್ರೆ SKY ಕಣ್ಮರೆ!

ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ ಭರ್ಜರಿಯಾಗೇ ಗೆದ್ದಿದೆ. ಆದ್ರೆ ಗೆಲುವಿಗಿಂತ ಜಾಸ್ತಿ ಸದ್ದು ಮಾಡ್ತಿರೋದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್. ಟಿ20ಐ ಸ್ಪೆಷಲಿಸ್ಟ್ ಬ್ಯಾಟರ್ ಅಂತಾನೇ ಕರೆಸಿಕೊಳ್ತಿದ್ದ ಸೂರ್ಯ 2025ರಲ್ಲಿ ತಂಡದಿಂದಲೇ ಗೇಟ್ಪಾಸ್ ಕೊಡಿ ಅನ್ನುವಷ್ಟರ ಮಟ್ಟಿಗೆ ಇದ್ದೂ ಇಲ್ಲದಂತಾಗಿದ್ರು. ಆದ್ರೆ ಈಗ ಹೊಸ ವರ್ಷ ಬಂದಿದೆ. ಸಂಕ್ರಾಂತಿ ಮುಗಿದಿದೆ. ಸೂರ್ಯ ಕೂಡ ಪಥ ಬದಲಿಸಿದ್ದಾನೆ. ಈ ಸೂರ್ಯೋದಯ ಕೋಟ್ಯಂತರ ಭಾರತೀಯರ ಪಾಲಿಗೆ ಭರವಸೆ ಹೆಚ್ಚಿಸಿದೆ.
ಇದನ್ನೂ ಓದಿ : RCBಗೆ ಡೆಡ್ ಲೈನ್ ಕೊಟ್ಟ BCCI – ಚಿನ್ನಸ್ವಾಮಿ ಪಂದ್ಯಗಳಿಗೂ ಕಂಡೀಷನ್ಸ್!
ಭಾರತದ ಟಿ-20ಐ ಟೀಂ ಅಂದ್ರೆ ಅಭಿಷೇಕ್ ಶರ್ಮಾ ಮಾತ್ರನೇ ಬ್ಯಾಟಿಂಗ್ನಲ್ಲಿ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡ್ತಿದ್ದದ್ದು. ಉಳಿದವ್ರೆಲ್ಲಾ ಅಕೇಷನಲ್ ಆಗಿ ಆಡ್ತಿದ್ರು. ಬಟ್ ಅಭಿ ಸ್ಟ್ರೈಕ್ ರೇಟ್ಗೆ ಯಾರೂ ಮ್ಯಾಚ್ ಮಾಡ್ತಿರ್ಲಿಲ್ಲ. ಬಟ್ 2ನೇ ಪಂದ್ಯದಲ್ಲಿ ಇಶಾನ್ ಕಿಶನ್ ಕೂಡ ಟ್ರ್ಯಾಕ್ಗೆ ಬಂದಿದ್ದಾರೆ. 2 ವರ್ಷಗಳ ಬಳಿಕ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಕಣಕ್ಕಿಳಿದ ಕಿಶನ್ ನ್ಯೂಜಿಲೆಂಡ್ ವಿರುದ್ಧ ದಾಖಲೆಯ ಬ್ಯಾಟಿಂಗ್ ಮಾಡಿದ್ರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡ್ರು. ಹೀಗೆ ಕಿಶನ್ ಭಾರತದ ಗೆಲುವಿಗೆ ಅಡಿಪಾಯ ಹಾಕಿದ್ರೆ ಅದ್ರ ಮೇಲೆ ಸೂರ್ಯ ಗೆಲುವಿನ ನಗಾರಿ ಬಾರಿಸಿದ್ರು. ಕಳೆದ ವರ್ಷ ನನ್ನ ಬ್ಯಾಟಿಂಗ್ ಸ್ಟೈಲ್ ಚೆನ್ನಾಗೇ ಇದೆ ಬಟ್ ರನ್ಸ್ ಬರ್ತಿಲ್ಲ ಅಂತಾ ಸಮಜಾಯಿಸಿ ಕೊಟ್ಟಿದ್ದ ಸೂರ್ಯ ಈಗ ರನ್ಸ್ ಹೇಗೆ ಬರೋ ಥರ ಮಾಡ್ಬೇಕು ಅನ್ನೋದನ್ನ ರಿಯಲೈಸ್ ಮಾಡ್ಕೊಂಡಿದ್ದಾರೆ.
ಬರೋಬ್ಬರಿ 487 ದಿನಗಳ ಬಳಿಕ ಸೂರ್ಯನ ಬ್ಯಾಟಿಂದ ಅರ್ಧಶತಕ!
2025ರಲ್ಲಿ ಬ್ಯಾಟಿಂಗ್ನೇ ಮರೆತಂತೆ ಆಡಿದ್ದ ಸೂರ್ಯ ಇಡೀ ವರ್ಷ ಅರ್ಧಶತಕ ಕೂಡ ಬಾರಿಸಿರಲಿಲ್ಲ. 2024 ರಲ್ಲಿ ಸೂರ್ಯ 18 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧಶತಕಗಳು ಸೇರಿದಂತೆ 429 ರನ್ ಗಳಿಸಿದರು. ಆದಾಗ್ಯೂ, 2025 ರಲ್ಲಿ ಅವರು 21 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ ಕೇವಲ 218 ರನ್ ಗಳಿಸಿದರು. ಈ ನಂಬರ್ಗಳೇ ಹೇಳುತ್ತೆ ಸೂರ್ಯನಿಗೆ ಹಿಡಿದಿದ್ದ ಗ್ರಹಣ ಎಂಥಾದ್ದು ಅಂತಾ. ಆದ್ರೆ ಈ ವರ್ಷ 2ನೇ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಸಂಕ್ರಾಂತಿ ಕಳೆದ ಮೇಲೆ ಸೂರ್ಯೋದಯವಾದಂತಿದೆ. ಪಥ ಬದಲಿಸಿರೋ ಸೂರ್ಯ ಪ್ರಜ್ವಲಿಸೋಕೆ ಆರಂಭಿಸಿದ್ದಾರೆ. ಅದೂ ಕೂಡ 487 ದಿನಗಳ ಬಳಿಕ ಬಂದಿರೋ ಸ್ಪೆಲ್ ಇದು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 23 ಇನ್ನಿಂಗ್ಸ್ಗಳ ನಂತರ ಈ ಮೈಲಿಗಲ್ಲು ತಲುಪಿದ್ದಾರೆ. ಅಂತಿಮವಾಗಿ ಸೂರ್ಯ 37 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಅವರು 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಎಂಟನೇ ಬಾರಿಯಾಗಿದೆ. 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಗಳಿಸಿದ್ದು 11ನೇ ಬಾರಿಯಾಗಿದೆ. ಸೂರ್ಯನ ಇದೇ ರನ್ಸ್ ಈಗ 2026ರ ಟಿ-20 ವಿಶ್ವಕಪ್ ಗೂ ಮುನ್ನ ಹೊಸ ಭರವಸೆ ಮೂಡಿಸಿದೆ. ಆದ್ರೆ ಈ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡೋದು ಕೂಡ ಸೂರ್ಯನಿಗೆ ಸವಾಲಾಗುತ್ತೆ.
ಸಂಕ್ರಾಂತಿ ಬಳಿಕ ಸೂರ್ಯೋದಯ!
ಅಗ್ರೆಸ್ಸಿವ್ ಬ್ಯಾಟಿಂಗ್ ನಿಂದ ಸೂರ್ಯನಿಗೆ ಕಾನ್ಫಿಡೆನ್ಸ್
ಮುಂದಿನ ಪಂದ್ಯಗಳಲ್ಲೂ ಬಿಗ್ ಹಿಟ್ ಗಳ ಮೇಲೆ ಕಣ್ಣು
ಬ್ಯಾಟಿಂಗ್ ನಲ್ಲಿ ಮಿಂಚಿದ್ರೆ ಕ್ಯಾಪ್ಟನ್ಸಿಯಲ್ಲೂ ಹೆಚ್ಚಿನ ಭರವಸೆ
ಟಿ-20 ವಿಶ್ವಕಪ್ ನಲ್ಲಿ ಭಾರತವನ್ನ ಉತ್ತಮವಾಗಿ ಲೀಡ್
ಕನ್ಸಿಸ್ಟೆನ್ಸಿ ಮೇಂಟೇನ್ ಮಾಡೋದೇ ಸೂರ್ಯನಿಗೆ ಚಾಲೆಂಜ್
ಸೂರ್ಯ ಈಗ ಮತ್ತೆ ಪ್ರಜ್ವಲಿಸೋಕೆ ಶುರು ಮಾಡಿದ್ದಾರೆ. ಆದ್ರೆ ಮುಂದಿನ ಪಂದ್ಯಗಳಲ್ಲೂ ಇಂಥದ್ದೇ ಪರ್ಫಾಮೆನ್ಸ್ ಬರ್ಬೇಕು. ಹೀಗೆ ಈ ಹಿಂದೆಯೂ ಸಾಕಷ್ಟು ಆಟಗಾರರು ಒಂದೆರಡು ಪಂದ್ಯಗಳಲ್ಲಿ ಅಬ್ಬರಿಸಿ ಆ ನಂತ್ರ ಸೈಡ್ಲೈನ್ ಆಗಿದ್ದೂ ಇದೆ. ಇನ್ನೊಂದಷ್ಟು ವರ್ಷ ಭಾರತದಲ್ಲಿ ಸರ್ವೈವ್ ಆಗ್ಬೇಕು ಅಂದ್ರೆ ಬ್ಯಾಟ್ ಕೂಡ ಸದ್ದು ಮಾಡ್ತಿರ್ಬೇಕು. ಒಂದೇ ಪಂದ್ಯಕ್ಕೆ ಸೀಮಿತವಾದ್ರೆ ಸೂರ್ಯ ಕೂಡ ಕಳೆದು ಹೋಗ್ತಾರೆ.

ನೋಡಿರಿ

