ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಸೋಮವಾರ ಶಿವನಿಗೆ ಪ್ರಿಯವಾದ ಯಾವ ಕೆಲಸ ಮಾಡಬೇಕು ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಸೋಮವಾರ ಶಿವನಿಗೆ ಪ್ರಿಯವಾದ ಯಾವ ಕೆಲಸ ಮಾಡಬೇಕು ಗೊತ್ತಾ?

ಸೋಮವಾರ ಅಂದ್ರೆ ಶಿವನಿಗೆ ಪ್ರಿಯವಾದ ವಾರ.  ಇವತ್ತು  ನಾವು ಅಪ್ಪಿ ತಪ್ಪಿ ಕೂಡ ತಪ್ಪು ಮಾಡಬಾರದು. ಹಾಗಿದ್ರೆ ಜ್ಯೋತಿಷ್ಯ ಶಾಸ್ತ್ರದ   ಪ್ರಕಾರ ಸೋಮವಾರ ಯಾವ ಕೆಲಸ ಬೇಕು? ಯಾವ ಕೆಲಸ ಮಾಡಬಾರದು ಅನ್ನೋದ್ದನ್ನ ನೋಡೋಣ.

ಸೋಮವಾರದಂದು ಪಾಲಿಸಬೇಕಾದ ನಿಯಮಗಳು

*ಸೋಮವಾರದಂದು ಬಿಳಿ ಬಟ್ಟೆ ಧರಿಸುವುದು ಶುಭ

*ಹಾಲು, ಮೊಸರು, ಅನ್ನ, ಬಿಳಿ ಎಳ್ಳು ಸೇರಿದಂತೆ ಬಿಳಿ ವಸ್ತುಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಶುಭ ಫಲ

*ಸೋಮವಾರ ದಿನ ಬಿಳಿ ಬಣ್ಣದ ಗೋವಿಗೆ ಆಹಾರ ಅಥವಾ ಗೋಗ್ರಾಸ ನೀಡುವುದು ಪುಣ್ಯಕರ ಕಾರ್ಯ

*ಶಿವಲಿಂಗದ ಮೇಲೆ 11 ಬಿಲ್ವಪತ್ರೆಗಳು ಹಾಗೂ ಬಿಳಿ ಎಳ್ಳು ಸೇರಿಸಿ ಜಲಾಭಿಷೇಕ ಮಾಡುವುದರಿಂದ ಶುಭ ಫಲ

 ಈ ಕೆಲಸಗಳನ್ನು ಮಾಡಬೇಡಿ:

*ಚಂದ್ರ ದೋಷ ಇರುವವರು ಈ ದಿನ ಸಕ್ಕರೆ ಸೇವನೆಯನ್ನು ತಪ್ಪಿಸಬೇಕು.

* ತಾಯಿಯೊಂದಿಗೆ ವಾದವಿವಾದ ಮಾಡಬಾರದು.

*ತಾಮಸಿಕ ಆಹಾರ ಸೇವಿಸದೆ, ನೀರು ಅಥವಾ ಶಾಂಪೂ ಬಳಸಿ ಕೂದಲು ತೊಳೆಯುವುದನ್ನು ತಪ್ಪಿಸಿ

*ಮಹಿಳೆಯರು ಹಾಗೂ ಹಿರಿಯರನ್ನು ಅವಮಾನಿಸಬಾರದು ಇದರಿಂದ ಜಗದೊಡೆಯ ಈಶ್ವರ ಕೋಪಗೊಳ್ಳುತ್ತಾನೆ.

*ಶನಿಗೆ ಸಂಬಂಧಿಸಿದ ಬದನೆ, ಹಲಸು, ಕಪ್ಪು ಎಳ್ಳು, ಕಪ್ಪು ಉಂಡೆ ಮೊದಲಾದ ಆಹಾರಗಳನ್ನು ಈ ದಿನ ಸೇವಿಸುವುದನ್ನು ತಪ್ಪಿಸಬೇಕು.

* ಕಪ್ಪು, ನೀಲಿ ಅಥವಾ ಗಾಢ ಬಣ್ಣದ ಶನಿಗೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದನ್ನೂ ನಿರಾಕರಿಸುವುದು ಒಳಿತು.

Kishor KV