ಮೊಂಡು ಹಠಕ್ಕೆ ಬಾಂಗ್ಲಾ ಸರ್ವನಾಶ – ಭಾರತಕ್ಕೆ ಬರದಿದ್ರೆ ಯಾರಿಗೆ ಲಾಸ್?
ಬದಲಿ ತಂಡ ಯಾವುದಾಗುತ್ತೆ?

ಮೊಂಡು ಹಠಕ್ಕೆ ಬಾಂಗ್ಲಾ ಸರ್ವನಾಶ – ಭಾರತಕ್ಕೆ ಬರದಿದ್ರೆ ಯಾರಿಗೆ ಲಾಸ್?ಬದಲಿ ತಂಡ ಯಾವುದಾಗುತ್ತೆ?

ಬಾಂಗ್ಲಾದೇಶ ಮತ್ತು ಐಸಿಸಿ ನಡುವಿನ 2 ವಾರಗಳ ಹಗ್ಗಜಗ್ಗಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮೊಂಡಾಟ ಬಿಡದ ಬಿಸಿಬಿ ಟಿ-20 ವಿಶ್ವಕಪ್ ಟೂರ್ನಿಯಿಂದಲೇ ಎತ್ತಂಗಡಿಯಾಗಿದೆ. ಐಸಿಸಿ ಟೂರ್ನಿ ಮಿಸ್ ಮಾಡಿಕೊಳ್ಳೋದ್ರ ಜೊತೆಗೆ ದೊಡ್ಡ ಹೊಡೆತ ಬಿದ್ದಿದೆ. ಫೆಬ್ರವರಿ 7ರಿಂದ ಆರಂಭವಾಗಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ಹೊರಬಿದ್ದಿದೆ. ಬಿಸಿಸಿಐ ಮೇಲಿನ ಸಿಟ್ಟಿಗೆ ಭಾರತದಲ್ಲಿ ಪಂದ್ಯಗಳನ್ನ ಆಡಲ್ಲ ಅಂದವ್ರು ಈಗ ಟೂರ್ನಿಯನ್ನೇ ಕೈಚೆಲ್ಲಿದ್ದಾರೆ.  ಟೂರ್ನಿಗೆ ಇನ್ನೆರಡು ವಾರ ಬಾಕಿ ಇರುವಾಗ ಪಂದ್ಯಗಳನ್ನ ಶಿಫ್ಟ್ ಮಾಡೋದು ಅಸಾಧ್ಯ.. ಹೀಗಾಗಿ ಭಾರತದಲ್ಲೇ ಪಂದ್ಯಗಳನ್ನ ಆಡುವಂತೆ ಬಿಸಿಬಿಗೆ ಐಸಿಸಿ ಖಡಕ್ಕಾಗೇ ಹೇಳಿತ್ತು. ಹಾಗೇ ಐಸಿಸಿ ಅಧಿಕಾರಿಗಳು ಮಾತುಕತೆ ನಡೆಸಿ ಜನವರಿ 22ರ ಒಳಗೆ ತಮ್ಮ ನಿರ್ಧಾರ ತಿಳಿಸುವಂತೆ ಡೆಡ್​ಲೈನ್ ನೀಡಿತ್ತು. ಅಂತಿಮವಾಗಿ ಬಾಂಗ್ಲಾ ತನ್ನದೇ ಹಠಕ್ಕೆ ಕಟ್ಟುಬಿದ್ದು ಆಟಗಾರರ ಆಸೆಯನ್ನೂ ಧಿಕ್ಕರಿಸಿ ಟೂರ್ನಿಗೆ ಗುಡ್ ಬೈ ಹೇಳಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬಾಂಗ್ಲಾ – ಸ್ಕಾಟ್ಲೆಂಡ್‌ ತಂಡಕ್ಕೆ ಚಾನ್ಸ್

ವಿಶ್ವಕಪ್ ನಲ್ಲಿ ಆಡಬೇಕು ಅಂತಿದ್ದಾರೆ ಬಾಂಗ್ಲಾ ಪ್ಲೇಯರ್ಸ್!

ಭಾರತದಲ್ಲಿ ಪಂದ್ಯಗಳನ್ನ ಆಡಲು ಬಾಂಗ್ಲಾ ಆಟಗಾರರನ್ನ ಕಳಿಸ್ಬೇಕಾ ಅಥವಾ ಬೇಡ್ವಾ ಅನ್ನೋ ಬಗ್ಗೆ ನಿರ್ಧಾರ ಕೈಗೊಳ್ಳಲು ಗುರುವಾಗ ಬಿಸಿಬಿ ಮತ್ತು ಸರ್ಕಾರದ ಸಭೆ ನಡೆದಿತ್ತು. ಸಭೆಯಲ್ಲಿ ಬಿಸಿಬಿ ಅಧ್ಯಕ್ಷ ಅಮೀನುಲ್, ಸಿಇಒ ನಿಜಾಮುದ್ದೀನ್ ಹಾಗೇ ಕೆಲ ಬಾಂಗ್ಲಾ ಪ್ಲೇಯರ್ಸ್ ಭಾಗವಹಿಸಿದ್ದರು. ಆದ್ರೆ ಅಂತಿಮವಾಗಿ ಭಾರತದಲ್ಲಿ ಆಡದಿರಲು ತೀರ್ಮಾನ ಮಾಡಿದ್ದಾರೆ. ವಿಷ್ಯ ಅಂದ್ರೆ ಬಾಂಗ್ಲಾ ಆಟಗಾರರಿಗೆ ವಿಶ್ವಕಪ್​ನಲ್ಲಿ ಆಡ್ಬೇಕು ಅನ್ನೋ ಆಸೆ ಇದೆ. ಆದ್ರೆ ಬಿಸಿಬಿ ಮತ್ತು ಅಲ್ಲಿನ ಸರ್ಕಾರ ಇದನ್ನ ಒಪ್ಪಿಲ್ಲ. ಬದಲಿಗೆ ಐಸಿಸಿಯನ್ನೇ ಬ್ಲೇಮ್ ಮಾಡಿದ್ದಾರೆ. ಭಾರತದ ಹೊರಗೆ ಪಂದ್ಯಗಳನ್ನು ನಡೆಸಬೇಕೆಂಬ ನಮ್ಮ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಹೀಗಾಗಿ ತಮ್ಮ ತಂಡವು ಕೂಡ ಭಾರತದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಲ್ಲ. ಇದು ಐಸಿಸಿಯ ಫೇಲ್ಯೂರ್.. ಐಸಿಸಿ 200 ಮಿಲಿಯನ್ ಜನರನ್ನು ಹೊಂದಿರುವ  ಬಾಂಗ್ಲಾ ವಿಶ್ವಕಪ್ ಆಡದಿದ್ದರೆ ಅದು ಐಸಿಸಿ ವೈಫಲ್ಯ. ಹಾಗೇ ಐಸಿಸಿ ಸಭೆಯಲ್ಲಿ ಬಿಸಿಸಿಐ ಪರವಾಗಿ ನಿರ್ಧಾರ ತಗೊಂಡಿದ್ದಾರೆ. ನಮ್ಮ ಆಟಗಾರರಲ್ಲಿ ಒಬ್ಬರನ್ನು ಭದ್ರತಾ ದೃಷ್ಟಿಯಿಂದ ಐಪಿಎಲ್ ಟೂರ್ನಿಯಿಂದ ಹೊರ ಹಾಕಿದ್ದಾರೆ. ಹೀಗಿರುವಾಗ ವಿಶ್ವಕಪ್​ನಲ್ಲಿ ಇಡೀ ತಂಡಕ್ಕೆ ಹೇಗೆ ಭದ್ರತೆಯನ್ನು ಒದಗಿಸುತ್ತಾರೆ? ನಾವು ನಮ್ಮ ಆಟಗಾರರ ವಿಚಾರದಲ್ಲಿ ರಿಸ್ಕ್ ತಗೊಳ್ಳಲ್ಲ. ಹಾಗೇ ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ ಅಂತಾ ಬಿಲ್ಡಪ್ ಕೊಟ್ಟಿದ್ದಾರೆ. ಆದ್ರೆ ಅಸಲಿ ವಿಚಾರ ಅಂದ್ರೆ ಭಾರತಕ್ಕೆ ಕಾಲಿಡಲ್ಲ ಎಂದ ಬಾಂಗ್ಲಾ ಈಗ ಹಿಟ್​ವಿಕೆಟ್ ಆದ ಸ್ಥಿತಿಯಲ್ಲಿದೆ. ಯಾಕಂದ್ರೆ ಇನ್ನೇನಿದ್ರೂ ಆಗುವಂಥ ಲಾಸ್​ ಬಗ್ಗೆ ಲೆಕ್ಕ ಹಾಕೋದಷ್ಟೇ ಬಾಕಿ.

ಬಾಂಗ್ಲಾದೇಶ ಕ್ರಿಕೆಟ್‌ ಗೆ 200 ಕೋಟಿ ರೂ.ಗೂ ಹೆಚ್ಚು ನಷ್ಟ!

ಐಸಿಸಿ ಟೂರ್ನಿಯನ್ನೇ ಈಸಿಯಾಗಿ ಬಾಯ್ಕಾಟ್ ಮಾಡಿದ ಬಾಂಗ್ಲಾಗೆ ಈಗ ಸರಿಯಾಗೇ ಹೊಡೆತ ಬೀಳ್ತಿದೆ. ಕೋಟಿ ಕೋಟಿ ಹಣ ಕಳ್ಕೊಳ್ತಾರೆ. ಬಾಂಗ್ಲಾ ಕರೆನ್ಸಿ ಪ್ರಕಾರ ಹೇಳೋದಾದ್ರೆ ಬಿಸಿಬಿ ಸುಮಾರು 325 ಕೋಟಿ ನಷ್ಟ ಅನುಭವಿಸುತ್ತೆ. ಅಂದ್ರೆ ಸುಮಾರು 27 ಮಿಲಿಯನ್ ಯುಎಸ್ ಡಾಲರ್ ಅಥವಾ ಭಾರತೀಯ ಕರೆನ್ಸಿ ಪ್ರಕಾರ 247.4 ಕೋಟಿ ರೂ  ನಷ್ಟ ಅನುಭವಿಸಲಿದೆ. ಇದು ಐಸಿಸಿಯ ವಾರ್ಷಿಕ ಆದಾಯದಿಂದ ಬರುತ್ತಿದ್ದ ಹಣ.ಅಷ್ಟೇ ಅಲ್ದೇ ಪ್ರಸಾರ ಮತ್ತು ಪ್ರಾಯೋಜಕತ್ವದಿಂದ ಬರುವ ಆದಾಯಕ್ಕೂ ಹೊಡೆತ ಬೀಳುತ್ತೆ. ಒಟ್ಟಾರೆಯಾಗಿ, 2025-26ರ ಹಣಕಾಸು ವರ್ಷದಲ್ಲಿ ಬಿಸಿಬಿಯ ಆದಾಯವು ಸುಮಾರು ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಕಡಿಮೆಯಾಗಬಹುದು. ಫೈನಾನ್ಶಿಯಲ್ ಲಾಸ್ ನಿಂದಾಗಿ ಫ್ಯೂಚರ್ ಕ್ರಿಕೆಟ್​ಗೂ ಎಫೆಕ್ಟ್ ತಟ್ಟುತ್ತೆ.  ಯಾಕಂದ್ರೆ   ದೇಶೀಯ ಮತ್ತು ಅಲ್ಲಿನ ಸ್ಥಳೀಯ ಕ್ರಿಕೆಟ್ ಚಟುವಟಿಕೆಗಳ ಆಯೋಜನೆಗೂ ಕಷ್ಟವಾಗುತ್ತೆ. ದೇಶದಲ್ಲಿ ಕ್ರೀಡೆಯ ಭವಿಷ್ಯಕ್ಕೂ ಎಫೆಕ್ಟ್ ತಟ್ಟುವಂತೆ ಮಾಡುತ್ತೆ. ಹೀಗೆ ಬಿಸಿಬಿ ತನ್ನ ಕ್ರಿಕೆಟ್ ಫ್ಯೂಚರ್​ನ ತಾನೇ ಸರ್ವನಾಶ ಮಾಡ್ಕೊಂಡಿದೆ. ಬಿಸಿಬಿ ಹೀಗೆ ಕೋಟಿ ಕೋಟಿ ಲಾಸ್​ನಲ್ಲಿದ್ರೆ ಅತ್ತ ಸ್ಕಾಟ್ಲೆಂಡ್ ಫುಲ್ ಹ್ಯಾಪಿಯಾಗಿದೆ.

ಬಾಂಗ್ಲಾ ಹೊರಬಿದ್ರೆ ಸ್ಕಾಟ್ಲೆಂಡ್ ಗೆ ವಿಶ್ವಕಪ್ ನಲ್ಲಿ ಚಾನ್ಸ್!

ಭಾರತದಲ್ಲಿ ಆಡಲ್ಲ ಅಂತಾ ಬಾಂಗ್ಲಾ ಟೂರ್ನಿಯಿಂದಲೇ ಹೊರಬಿದ್ರೆ ಅದು ಅವ್ರಿಗಷ್ಟೇ ನಷ್ಟ. ಯಾಕಂದ್ರೆ ಬಾಂಗ್ಲಾ ಬದಲಿಯಾಗಿ ಸ್ಕಾಟ್ಲೆಂಡ್ ತಂಡ ವಿಶ್ವಕಪ್ ಟೀಂ ಸೇರಿಕೊಳ್ಳುತ್ತೆ. ಈ ಮೊದ್ಲು ಅನೌನ್ಸ್ ಆಗಿದ್ದ ಶೆಡ್ಯೂಲ್ ಪ್ರಕಾರ ಬಾಂಗ್ಲಾ ಸಿ ಗ್ರೂಪ್​ನಲ್ಲಿತ್ತು. ಌಂಡ್ ಈ ಗುಂಪಿನಲ್ಲಿ  ಇಂಗ್ಲೆಂಡ್, ಇಟಲಿ, ನೇಪಾಳ ಹಾಗೂ ವೆಸ್ಟ್ ಇಂಡೀಸ್ ತಂಡಗಳೂ ಇವೆ. ಈಗ ಬಾಂಗ್ಲಾ ಟೂರ್ನಿಯಿಂದ ಹೊರ ಬಿದ್ದಿರೋದ್ರಿಂದ ಅವ್ರ ಜಾಗದಲ್ಲಿ ಸ್ಕಾಟ್ಲೆಂಡ್​ಗೆ ಅವಕಾಶ ಸಿಗುತ್ತೆ. ವೇಳಾಪಟ್ಟಿ ಪ್ರಕಾರ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಒಟ್ನಲ್ಲಿ ಭಾರತದ ಎದುರು ಬಿಲ್ಡಪ್ ಕೊಡೋಕೆ ಹೋಗಿದ್ದ ಬಾಂಗ್ಲಾ ಈಗ ಟೂರ್ನಿಯಿಂದಲೇ ಗೇಟ್​ಪಾಸ್ ಪಡೆದಿದೆ. ಆದ್ರೆ ಟೂರ್ನಿ ಮಿಸ್ ಮಾಡ್ಕೊಂಡ್ರು ಅನ್ನೋದಕ್ಕಿಂತ ಅದ್ರಿಂದ ಆಗಿರೋ ನಷ್ಟವನ್ನ ತುಂಬಿಕೊಳ್ಳೋಕೆ ಸಾಧ್ಯನೇ ಇಲ್ಲ. ಮೊದ್ಲೇ ಫೈನಾನ್ಶಿಯಲಿ ಬರ್ಬಾದ್ ಆಗಿರೋ ಬಾಂಗ್ಲಾ ಮುಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೂ ಹಿಂದೆ ಮುಂದೆ ನೋಡುವಂತಾಗುತ್ತೆ.

Shantha Kumari