ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ನೀಲಿ, ಪಿಂಕ್‌, ಆರೆಂಜ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ನೀಲಿ, ಪಿಂಕ್‌, ಆರೆಂಜ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್!

ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತಿರುವ ಸಿಲಿಕಾನ್‌ ಸಿಟಿ ಮಂದಿಗೆ ನಮ್ಮ ಮೆಟ್ರೋ ಸಂಚಾರಿ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ಪಿಂಕ್‌ ಲೈನ್‌, ಬ್ಲೂ ಲೈನ್, ಆರೆಂಜ್‌ ಲೈನ್‌ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಇದನ್ನೂ ಓದಿ: MBBSಗೆ ಪ್ರವೇಶ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ! – ಆಮೇಲೆ ಏನಾಯ್ತು ಗೊತ್ತಾ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ. ಈಗಾಗಲೇ ಹಸಿರು ಮಾರ್ಗ, ನೇರಳೆ ಮಾರ್ಗ ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ನಡೆಯುತ್ತಿದೆ. ಇದೀಗ ಪಿಂಕ್ ಲೈನ್, ನೀಲಿ ಲೈನ್, ವಿಮಾನ ನಿಲ್ದಾಣ ಲೈನ್, ಆರೆಂಜ್‌ ಲೈನ್‌ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಪಿಂಕ್ ಲೈನ್ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗವನ್ನು ಎರಡು ಹಂತಗಳಲ್ಲಿ ತೆರೆಯಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಎತ್ತರದ ಮಾರ್ಗವನ್ನು ಮೇ 2026ರೊಳಗೆ ಆರಂಭಿಸುವ ನಿರೀಕ್ಷೆಯಿದೆ. ಎರಡನೇ ಹಂತದಲ್ಲಿ ಡೇರಿ ಸರ್ಕಲ್‌ನಿಂದ ನಾಗವಾರದವರೆಗೆ ಭೂಗತ ಮಾರ್ಗವನ್ನು 2026ರ ಕೊನೆಯಲ್ಲಿ ತೆರೆಯಲಾಗುತ್ತದೆ.  ಪಿಂಕ್ ಲೈನ್ ಆರಂಭವಾದ ನಂತರ ಉತ್ತರ ಮತ್ತು ದಕ್ಷಿಣ ಬೆಂಗಳೂರಿನ ನಡುವೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಜೊತೆಗೆ ಜಯದೇವ ಆಸ್ಪತ್ರೆ ಬಳಿ ಹಳದಿ ಮಾರ್ಗದೊಂದಿಗೆ ಇಂಟರ್ಚೇಂಜ್ ಸೌಲಭ್ಯವೂ ದೊರೆಯಲಿದೆ.

ಇನ್ನು ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಚರಿಸಲಿದೆ. ಈ ಮಾರ್ಗವು ಕೆ.ಆರ್.ಪುರ ಮತ್ತು ಹೆಬ್ಬಾಳ ಮೂಲಕ ಸಾಗುತ್ತದೆ. ಒಟ್ಟು ಸುಮಾರು 58 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ಹಂತ ಹಂತವಾಗಿ ತೆರೆಯುವ ಯೋಜನೆ ಇದೆ. ಈ ಮಾರ್ಗವು 2027ರ ವೇಳೆಗೆ ಭಾಗಶಃ ಹಾಗೂ ನಂತರ ಪೂರ್ಣವಾಗಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಇದು ಬಹಳ ಉಪಯುಕ್ತವಾಗಲಿದೆ.

ಬೆಂಗಳೂರು ಮೆಟ್ರೋದ ಬಹುಕಾಲದ ಕನಸಾಗಿದ್ದ ಆರೆಂಜ್ ಲೈನ್‌ಗೆ ಇದೀಗ ಚಲನೆ ದೊರೆತಿದೆ. ಹೊಸಹಳ್ಳಿಯಿಂದ ಕಡಬಗೆರೆ ಕ್ರಾಸ್‌ವರೆಗೆ ಸುಮಾರು 12.5 ಕಿಲೋಮೀಟರ್ ಉದ್ದದ ಈ ಮಾರ್ಗ ಜೆ.ಪಿ.ನಗರ, ನಾಗರಭಾವಿ ಮತ್ತು ಹೊಸಕೆರೆಹಳ್ಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ಮಾರ್ಗಕ್ಕಾಗಿ BMRCL ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

Shwetha M