ಅತ್ತೆ ಮಗನ ಪ್ರೀತಿಸಿ ಮದುವೆಯಾದವಳು ಸತ್ತಿದ್ದು ಯಾಕೆ? – ಎರಡೇ ತಿಂಗಳಲ್ಲಿ ನವವಿವಾಹಿತೆ ಬದುಕು ಅಂತ್ಯ

ಅತ್ತೆ ಮಗನ ಪ್ರೀತಿಸಿ ಮದುವೆಯಾದವಳು ಸತ್ತಿದ್ದು ಯಾಕೆ? – ಎರಡೇ ತಿಂಗಳಲ್ಲಿ ನವವಿವಾಹಿತೆ ಬದುಕು ಅಂತ್ಯ

ಅವಳಿಗೆ ಅತ್ತೆ ಮಗ ಅಂದರೆ ತುಂಬಾ ಪ್ರೀತಿ. ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯೂ ನಡೆದಿತ್ತು. ಮಗಳ ಆಸೆಯಂತೆ ಮದುವೆ ಮಾಡಿಸಿದ ಹೆತ್ತವರು ನೆಮ್ಮದಿಯಾಗಿದ್ದರು. ಆದರೆ, ಕೇವಲ ಎರಡೇ ತಿಂಗಳಲ್ಲಿ ಒಲವಿನ ಬದುಕು ಅಂತ್ಯವಾಗಿದೆ. ಪ್ರೀತಿಸಿ ಮದುವೆಯಾದ ನವವಧು ನೇಣಿಗೆ ಕೊರಳೊಡ್ಡಿದ್ದಾಳೆ. ಕಾರಣ ಕೇಳಿದರೆ ಮಾತ್ರ ನಿಜಕ್ಕೂ ಹೀಗೆಲ್ಲಾ ಆಗುತ್ತಾ ಅಂತಾ ಅನಿಸದೇ ಇರಲ್ಲ.

ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ವಕ್ಕರಿಸಿಕೊಂಡ ಹೆಮ್ಮಾರಿ – ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಏರಿಕೆ

ಕಲಬುರ್ಗಿ ಜಿಲ್ಲೆಯ ಸಿದ್ದೇಶ್ವರ ಕಾಲೋನಿಯಲ್ಲಿ  ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. 26 ವರ್ಷದ ಅನುಸೂಯಾ ಅವಿನಾಶ್  ಸಾವನ್ನಪ್ಪಿರುವ ನವವಧು. ಅನುಸೂಯಾ ತನ್ನ ಅತ್ತೆಯ ಮಗನಾದ ಅವಿನಾಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ, ಯಾವುದೇ ವಿರೋಧವಿಲ್ಲದೆ, ವಿವಾಹವು ನೆರವೇರಿತ್ತು. ಮದುವೆಯ ನಂತರ ದಾಂಪತ್ಯ ಜೀವನ ಆರಂಭವಾಗಿತ್ತು. ಆದರೆ, ಅನುಸೂಯಾ ಮನಸ್ಸಿನಲ್ಲಿ ಉಂಟಾದ ಅಸಮಾಧಾನ ಮತ್ತು ಬೇಸರ ಸಾವಿನಲ್ಲಿ ಅಂತ್ಯವಾಗಿದೆ.

ಅನುಸೂಯಾ ತನ್ನ ಗಂಡನೊಂದಿಗೆ ಹಳ್ಳಿಯಲ್ಲಿ ವಾಸವಾಗಿದ್ದಳು. ಅವಳಿಬ್ಬರ ಸಹೋದರಿಯರು ಸಿಟಿಯಲ್ಲಿ ವಾಸವಾಗಿದ್ದರು. ಹಳ್ಳಿಯ ಜೀವನದ ಬಗ್ಗೆ ಅನುಸೂಯ ಬೇಸತ್ತು ಹೋಗಿದ್ದಳಂತೆ. ಇದೇ ವಿಚಾರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ. ನನ್ನ ಸಹೋದರಿಯರು ದೊಡ್ಡ ದೊಡ್ಡ ಸಿಟಿಗಳಲ್ಲಿ ವಾಸಿಸುತ್ತಿದ್ದಾರೆ, ನಾನು ಮಾತ್ರ ಇಲ್ಲೇ ಉಳಿಯಬೇಕಾಗಿದೆ ಎಂದು ಆಕೆ ಮನಸ್ಸಿನ ನೋವನ್ನು ಕೆಲವರ ಮುಂದೆ ಹಂಚಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದಲೇ ಮನನೊಂದು ಕೊನೆಗೂ ಸಾವಿಗೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಹೇಳಲಾಗಿದೆ.

Sulekha